ಬೆಂಗಳೂರು ನಗರ

ಕಾಪಾಡೀ...

ಬೆಂಗಳೂರು: ಒಂದು ಬೀದಿನಾಯಿ ಹಿಡಿದರೆ, ಅದನ್ನು ಕೊಂದೇ ಬಿಟ್ರು ಅನ್ನೋ ಹಾಗೆ ಪ್ರಾಣಿದಯಾ ಸಂಘದವ್ರು ಆಡ್ತಾರೆ. ಅವುಗಳಿಗೆ ಒಂದು ಚುಚ್ಚುಮದ್ದು ನೀಡಿ ವಾಪಸ್ ಕಳುಹಿಸಿದ್ರೂ ಪಾಲಿಕೆ ವಿರುದ್ಧ ಕಿಡಿಕಾರ್ತಾರೆ.
ನಾವು ದಿನಾ ಸತ್ರೂ ಕೇಳೂರೂ ಇಲ್ಲ. ಹೂಳೋರೂ ಇಲ್ಲ!
ನಾವ್ಯಾರು ಅಂತ ಗೊತ್ತಾಗಿಲ್ವಾ? ನಾವು ಪಾರಿವಾಳಗಳು. ಒಂದು ಕಾಲದ ಪ್ರೇಮ ವಾಹಕಗಳು. ಈಗ ನಿಮ್ಮಿಂದ ನಮ್ಗೊಂದಷ್ಟು ಪ್ರೀತಿ ಸಿಕ್ತಾ ಇಲ್ಲ ನೋಡಿ.
ಈ ಹಿಂದೆ ಹೈಕೋರ್ಟ್ ಆವರಣದಲ್ಲಿ ಸ್ವಚ್ಛಂದವಾಗಿ ಹಾರಾಡ್ಕೊಂಡು ಇದ್ವಿ. ಹಿಕ್ಕೆ ಹಾಕ್ತೀವಿ ಅನ್ನೋ ಕಾರಣಕ್ಕೆ ನಮ್ಮನ್ನ ಅಲ್ಲಿಂದ ಓಡಿಸಿದ್ರು. ನಮ್ಗೂನು ಟಾಯ್ಲೆಟ್ಟಾ ಇದೆ? ಅದು ಎಷ್ಟೋ ಜನರಿಗೆ ಗೊತ್ತಿಲ್ಲ. ಇರ್ಲಿ ಬಿಡಿ. ಪ್ರಾಚ್ಯಕಟ್ಟಡ ಕೋರ್ಟ್ ಸೌಂದರ್ಯ ನಮ್ಮಿಂದ ಹಾಳಾಗುತ್ತೆ ಅನ್ನೋ ಕಾರಣಕ್ಕೆ ಜಡ್ಜ್ ಸಾಹೇಬ್ರು ನಮ್ಮನ್ನ ಅಲ್ಲಿಂದ ಕಳಿಸಿದ್ರು.
ಕೊನೆಗೆ ಕಬ್ಬನ್‌ಪಾರ್ಕ್‌ನಲ್ಲಿ ಆಶ್ರಯ ಸಿಕ್ತು. ಇಲ್ಲೂ ನಮ್ಗೆ ನೆಮ್ಮದಿಯಿಲ್ಲ. ಇಲ್ಲಿ ನಾವು ಪ್ರತಿದಿನ ನರಕ ಅನುಭವಿಸ್ತಿದೀವಿ. ನಮ್ಗೆ ಕನಿಕರ ತೋರ್ತಿಲ್ಲ. ಮೃತ್ಯುಕೂಪದಿಂದ ನಮ್ಮನ್ನು ಪಾರುಮಾಡೋರಿಲ್ಲ. ಲಾಲ್‌ಬಾಗ್‌ನಲ್ಲಿ ನಮ್ಮ ಬಾಂಧವರು ಸಾವಿರಾರು ಮಂದಿ ಇದ್ದಾರೆ. ಸದ್ಯ ಅವರಿಗೆ ಯಾವ್ದೇ ತೊಂದ್ರೆಯಿಲ್ಲ. ಕಬ್ಬನ್‌ಪಾರ್ಕ್ ಸಾವಿರಾರು ಎಕರೆ ಪ್ರದೇಶದಲ್ಲಿದೆ. ಇಲ್ಲಿದ್ರೂ ನಮ್ಗೆ ನೆಮ್ಮದಿ ಇಲ್ಲ.
ನಾವು ಆಹಾರ ತಿನ್ನೋ ಜಾಗದಲ್ಲಿ ದಿನಾ ನೂರಾರು ವಾಹನ ಸವಾರರು ಸಂಚರಿಸುತ್ತಾರೆ. ಅವರೇ ನಮಗೆ ಯಮದೂತರು.
ನಾವು ರಸ್ತೆಯಲ್ಲಿ, ರಸ್ತೆ ಪಕ್ಕದಲ್ಲಿ ನಿಂತಿದ್ದರೂ, ಆಹಾರ ಸೇವಿಸುತ್ತಿದ್ರು ಚಾಲಕರ ಕಣ್ಣಿಗೆ ಕಾಣಲ್ಲ. ಕಂಡ್ರೂ ಅವರು ಅವರದ್ದೇ ಲೋಕದಲ್ಲಿರ್ತಾರೆ. ನಮ್ಗೆ ಡಿಕ್ಕಿ ಹೊಡಿತಾರೆ. ನಾವು ಅಲ್ಲೇ ವಿಲವಿಲ ಒದ್ದಾಡಿ ಪ್ರಾಣ ಬಿಡ್ತೀವಿ.
ಅಷ್ಟೇ ಕಣ್ರಿ ಅಲ್ಲಿಗೆ ನಮ್ ಕಥೆ ಮುಗೀತು.
ಸತ್ತು ದಾರಿಲೇ ಬಿದ್ದು ಹದ್ದು, ಕಾಗೆಗೆ ಆಹಾರ ಆಗ್ತೀವಿ. ಇದು ಪ್ರತಿದಿನದ ಕಥೆ. ವ್ಯಥೆ. ದಿನಕ್ಕೆ ಆರೇಳು ಮಂದಿ ಸಾಯ್ತೀವಿ. ನಮ್ಗೆ ಆಹಾರ ಕೊಡೋದ್ ಬೇಡ. ಕೊನೆಪಕ್ಷ ನಮ್ ಪ್ರಾಣ ಉಳ್ಸೋ ಕೆಲ್ಸ ಸಹ ಮಾಡ್ತಾ ಇಲ್ಲ. ಈಗ ಬೇಸಿಗೆ ರಜೆ ಬೇರೆ ಬಂತು. ದಿನಾ ಕಬ್ಬನ್‌ಪಾರ್ಕ್‌ಗೆ ನೂರಾರ್ ಮಂದಿ ಬರ್ತಾರೆ. ಮಕ್ಕಳೂ ಇರ್ತಾರೆ. ಮಕ್ಕಳಿಗಂತೂ ನಮ್ಮನ್ನ ಕಂಡ್ರೆ ಅದೇನ್ ಖುಷಿ ಅಂತೀರಾ. ಸುಮ್ನೆ ಇರೋ ನಮ್ಗೆ ತೊಂದ್ರೆ ಕೊಡ್ತಾರೆ. ಅಲ್ಲಿಂದ ಓಡಿಸ್ತಾರೆ. ಅಷ್ಟೇ ಆಗಿದ್ರೆ ನಾವು ಹೇಗೋ ಬದುಕ್ತಾ ಇದ್ವಿ.
ತೋಟಗಾರಿಕೆ ಇಲಾಖೆ, ಬಿಬಿಎಂಪಿ, ಪ್ರಾಣಿ ದಯಾಸಂಘದವ್ರು ಏನ್ ಮಾಡ್ತಾ ಇದಾರೆ? ನಮ್ ಬಗ್ಗೆ ಯಾರ್ಗೂ ದಯೆ ಇಲ್ವಾ?
ಸಾವಿರಾರು ಎಕ್ರೇಲಿ ನಮ್ಗೆ ವಾಸ ಮಾಡೋಕೆ ಒಂದ್ ಸರಿಯಾದ್ ಜಾಗ ಇಲ್ವಾ?. ಹೈಕೋರ್ಟ್ ಬೇಡ ಬಿಡಿ. ಕೊನೆಪಕ್ಷ ಅಲ್ಲೇ ಹತ್ರದಲ್ಲೇ ಇರೋ ಸೆಂಟ್ರಲ್ ಲೈಬ್ರರಿ ಕಡೆ ಆದ್ರು ನಮ್ಗೆ ಜಾಗ ಮಾಡ್ಕೊಡಿ. ಅಲ್ಲಿ ಯಾರ ಕಾಟನೂ ಇಲ್ದೆ ಹಾಯಾಗಿ ಇರ್ತೀವಿ. ಈಗಾಗ್ಲೆ ಅಲ್ಲಿ ನಮ್ ಗೆಳೆಯರಿದಾರೆ.
ಹದ್ದುಗಳು ನಮ್ಮನ್ನ ಬೇಟೆ ಆಡ್ತಿಲ್ಲಾ, ನಮ್ ಸಂಖ್ಯೆ ಜಾಸ್ತಿ ಆಗಿದೆ ಅಂತ ನಿಮ್ ಮನ್ಸಲ್ಲಿ ಇದ್ರೆ ಅದನ್ ಬಿಟ್‌ಬಿಡಿ. ನಾವು ನಿಮ್ಮಂಗೆ ಒಂದು ಜೀವ ಅಂತ ಅಂದ್ಕೊಳಿ. ನಮ್ಮನ್ನ ಸರಿಯಾದ ಜಾಗಕ್ಕೆ ಕಳ್ಸಿ. ನಮ್ ಮೇಲೆ ಪ್ರೀತಿ ಇರೋರು ಅಲ್ಲಿಗೆ ಆಹಾರ ತಂದ್ ಕೊಡ್ತಾರೆ.
ಸರ್ಕಾರ ಬೇಡ. ಪ್ರಾಣಿ, ಪಕ್ಷಿಗಳ ಹೆಸರಲ್ಲಿ ಕೆಲ್ಸ ಮಾಡ್ತಾ ಇರೋ ನೀವಾದ್ರು ನಮ್ ಕಡೆ ನೋಡಿ ಪ್ಲೀಸ್....


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ