ಬೆಂಗಳೂರು ನಗರ

ಲಂಚ: ಕೂಡ್ಲಿಗಿ ಸರ್ವೇಯರ್ ಲೋಕಾ ಬಲೆಗೆ

ಕ.ಪ್ರ.ವಾರ್ತೆ  ಕೂಡ್ಲಿಗಿ  ಏ.3
ಜಮೀನು ಖಾತೆ ಬದಲಾವಣೆ ಸಂಬಂಧ ತಾಲೂಕು ಭೂಮಾಪನ ಇಲಾಖೆ ಸರ್ವೇಯರ್ ಬಿ.ಎಂ. ಮಂಜುನಾಥ್ ಪರವಾಗಿ ಅವರ ಸರ್ವೆ ಸಹಾಯಕ ನಾಗರಾಜ ಬುಧವಾರ 3 ಸಾವಿರ ಲಂಚ ಪಡೆಯುತ್ತಿದ್ದಾಗ ಹೊಸಪೇಟೆ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಎಂ.ಬಿ. ಅಯ್ಯನಹಳ್ಳಿ ಗ್ರಾಮದ ಚೌಡಪ್ಪ ಎಂಬುವರು ಹಾರಕಬಾವಿ ಸಮೀಪವಿರುವ ಸ.ನಂ 336ರ ತಮ್ಮ ಜಮೀನು ಹದ್ದುಬಸ್ತಿಗಾಗಿ ಅರ್ಜಿ ಸಲ್ಲಿಸಿದಾಗ ಸರ್ವೇಯರ್ ಮಂಜುನಾಥ್ 4 ಸಾವಿರ ಲಂಚ ಕೇಳಿದ್ದರು. ಅದರಲ್ಲಿ 1 ಸಾವಿರ ಅಡ್ವಾನ್ಸ್ ಪಡೆದಿದ್ದರು.
ಆದರೂ ಹದ್ದುಬಸ್ತ್ ಮಾಡಿಕೊಡಲು ಸತಾಯಿಸುತ್ತಿದ್ದರು. ಇದರಿಂದ ಬೇಸತ್ತ ಚೌಡಪ್ಪ ಮಂಗಳವಾರ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಬುಧವಾರ ಮಂಜುನಾಥ ಅವರಿಗೆ 3 ಸಾವಿರ ನೀಡಲು ಬಂದಾಗ ಕಚೇರಿಯಲ್ಲಿ ಇರಲಿಲ್ಲ. ಆದರೂ, ಹಣ ಪಡೆಯಲು ಸಹಾಯಕ ನಾಗರಾಜನಿಗೆ ದೂರವಾಣಿ ಮೂಲಕ ತಿಳಿಸಿದ್ದರಿಂದ ನಾಗರಾಜ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.
ಸರ್ವೇಯರ್ ಮಂಜುನಾಥ್ ಮತ್ತು ಸಹಾಯಕ ನಾಗರಾಜ್ ಇಬ್ಬರ ವಿರುದ್ಧ ದೂರು ದಾಖಲಿಸಿಕೊಂಡು ಲೋಕಾಯುಕ್ತರು ನಾಗರಾಜನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್