ಬೆಂಗಳೂರು ನಗರ

ದಂತ ಕಲಾಕೃತಿ ಮಾರಾಟ; ಬಂಧನ

ಬೆಂಗಳೂರು:  ಆನೆದಂತದಿಂದ ತಯಾರಿಸಿದ ಕಲಾಕೃತಿ, ಶ್ರೀಗಂಧದ ಎಣ್ಣೆ ಮಾರಾಟ ಮಾಡುತ್ತಿದ್ದ ರಿಚ್ಮಂಡ್ ಪಟ್ಟಣದ ನಿವಾಸಿ ದೀಪಕ್ ರುಪಾಯಾನ್(60) ಎಂಬಾತನನ್ನು ಸಿಐಡಿ ಅರಣ್ಯಘಟಕದ ಪೊಲೀಸರು ಬಂಧಿಸಿದ್ದಾರೆ. ಮೂರು ದಿನಗಳ ಹಿಂದೆ ಇಂದಿರಾನಗರದಲ್ಲಿ ಕಲಾಕೃತಿ ಮಾರಾಟ ಮಾಡುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾನೆ. ಬಂಧಿತನಿಂದ ಲಕ್ಷಾಂತರ ರುಪಾಯಿ ಮೌಲ್ಯದ ವಿವಿಧ ವಿಗ್ರಹಗಳ ಆಕೃತಿ, ಬೀಸಣಿಗೆ, ಸುಮಾರು 20 ಕಲಾಕೃತಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತನ ವಿರುದ್ಧ ಇಂದಿರಾನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು, ಆನೆದಂತ ಹಾಗೂ ಅದರಿಂದ ತಯಾರಿಸಿದ ಕಲಾಕೃತಿಗಳನ್ನು ಎಲ್ಲಿಂದ ತರುತ್ತಿದ್ದ, ಈತನ ಜೊತೆ ಯಾರ ಕೈವಾಡ ಇದೆ ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ವೇಶ್ಯಾವಾಟಿಕೆ; ಐವರ ಸೆರೆ
ಅಶೋಕನಗರದ ಬ್ರಿಗೇಡಿಯರ್ ಹೋಟೆಲ್‌ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಕೇಂದ್ರದ ಮೇಲೆ ದಾಳಿ ನಡೆಸಿರುವ ಸಿಐಡಿ ಪೊಲೀಸರು ಇಬ್ಬರು ಯುವತಿಯರನ್ನು ರಕ್ಷಿಸಿ ಐವರನ್ನು ಬಂಧಿಸಿದ್ದಾರೆ. ಮತ್ತಿಬ್ಬರು ಪರಾರಿಯಾಗಿದ್ದಾರೆ. ಗಿರಾಕಿ ಯೋಗೇಶ್, ಹೋಟೆಲ್ ಸಿಬ್ಬಂದಿ ಸದ್ದಾಂ ಹುಸೇನ್, ಮನೋಜ್‌ಕುಮಾರ್, ಮಂಜುನಾಥ್ ಹಾಗೂ ಅನ್ವರ್ ಸಾಬ್ ಬಂಧಿತರು. ವಿಜಯ್ ಹಾಗೂ ವಿಕ್ರಂ ಪರಾರಿಯಾಗಿದ್ದಾರೆ. ವೇಶ್ಯಾವಾಟಿಕೆ ಕೂಪದಿಂದ ಪಾರಾದವರಲ್ಲಿ ಒಬ್ಬ ಯುವತಿ ಬಿಹಾರ ಹಾಗೂ ಮತ್ತೊಬ್ಬಳು ಬಾಳೆಹೊನ್ನೂರಿನವಳು ಎನ್ನಲಾಗಿದೆ. ಬಂಧಿತರ ವಿರುದ್ಧ ಅಶೋಕನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ದಲ್ಲಾಳಿಗಳು ಅಂತರ್ಜಾಲದ ಮೂಲಕ ಗಿರಾಕಿಯನ್ನು ಸಂಪರ್ಕಿಸಿ, ಮಾತುಕತೆ ನಡೆಸಿ ಈ ದಂಧೆ ನಡೆಸುತ್ತಿದ್ದರು. ಅಂತರ್ಜಾಲದಲ್ಲಿ ಚೆಂದದ ಯುವತಿಯ ಫೋಟೋ ಹಾಕಿ ಈ ದಂಧೆ ನಡೆಸುತ್ತಿದ್ದರು.
ಬೆಂಕಿ ದುರಂತದಲ್ಲಿ ವ್ಯಕ್ತಿ ಸಾವು
ಕಾಡುಗೋಡಿಯ ಪಟಾಲಮ್ಮ ಬಡಾವಣೆಯ ಮನೆಯೊಂದರಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಹೊಗೆಯಿಂದ ಉಸಿರುಗಟ್ಟಿ ವಯೋವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಪಟಾಲಮ್ಮ ಬಡಾವಣೆ ಸತ್ಯಸಾಯಿ ರಸ್ತೆ ನಿವಾಸಿ ರಾಮಚಂದ್ರಪ್ಪ (73) ಮೃತರು. ರಾತ್ರಿ ಘಟನೆ ನಡೆದಿದ್ದು, ಅವರ ಪತ್ನಿ ಹಾಗೂ ಪುತ್ರ ರಮೇಶ್ ಮತ್ತೊಂದು ಕೊಠಡಿಯಲ್ಲಿ ನಿದ್ರಿಸುತ್ತಿದ್ದರು. ಆದ್ದರಿಂದ ಇದು ಅವರ ಗಮನಕ್ಕೆ ಬಂದಿಲ್ಲ. ವಯಸ್ಸಾಗಿದ್ದ ರಾಮಚಂದ್ರಪ್ಪ  ವರಿಗೆ ನಡೆಯಲು ಆಗುತ್ತಿರಲಿಲ್ಲ. ಪುತ್ರ ಹಾಗೂ ಪತ್ನಿ ಸಹಾಯ ಮಾಡುತ್ತಿದದರು. ಹಾಗಾಗಿ ಅವರಿಗಾಗಿ ಪ್ರತ್ಯೇಕ ಕೊಠಡಿಯೊಂದನ್ನು ಬಿಟ್ಟುಕೊಡಲಾಗಿತ್ತು. ಬೆಂಕಿ ದುರಂತ ಸಂಭವಿಸಿದಾಗ ಕೊಠಡಿಯಿಂದ ಹೊರಗೆ ಬರಲು ಅವರಿಗೆ ಸಾಧ್ಯವಾಗದೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಮಚಂದ್ರಪ್ಪ ಅವರು ರಾತ್ರಿ ಊಟ ಮುಗಿಸಿ ಕೊಠಡಿಯಲ್ಲಿ ಮಲಗಿದ್ದರು. ತಡರಾತ್ರಿ ವಿದ್ಯುತ್ ಅವಗಢದಿಂದ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ರಮೇಶ್ ನಗರದ ಐಟಿಐ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿದ್ದರು. ರಾಮಚಂದ್ರಪ್ಪ ಅವರು ವಿಎಸ್‌ಐಎಲ್ ಸಂಸ್ಥೆಯ ನಿವೃತ್ತ ನೌಕರ.
ಕೆರೆಗೆ ಹಾರಿ ಮಹಿಳೆ ಸಾವು
ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಂಧ್ರ ಮೂಲದ ಪ್ರಮಿಳಾ(22) ಮೃತರು. ಸೋಮವಾರ ಬೆಳಗ್ಗೆ ದೊಡ್ಡನಾಗಮಂಗಲದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಕೌಟುಂಬಿಕ ಕಲಹವೇ ಘಟನೆಗೆ ಕಾರಣ. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಪ್ರಮೀಳಾ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು.  ಕಳೆದ ಮೂರು ತಿಂಗಳ ಹಿಂದೆ ಪ್ರಮಿಳಾರ ಪತಿ, ಅವರ ಪುತ್ರನನ್ನು ಕರೆದುಕೊಂಡು ಆಂಧ್ರಪ್ರದೇಶಕ್ಕೆ ಹೋಗಿದ್ದರು. ಕೌಟುಂಬಿಕ ಕಲಹದ ಬಗ್ಗೆ ಆಕೆಯ ಪೋಷಕರು ಹಾಗೂ ಕುಟುಂಬ ಸದಸ್ಯರಿಗೆ ವಿಷಯ ತಿಳಿಸಿದ್ದರು. ಇದನ್ನು ತಿಳಿದ ಪ್ರಮೀಳಾ ಆತ್ಮಹತ್ಯೆಗೆ ನಿರ್ಧರಿಸಿದ್ದಳು. ಆಂಧ್ರದಲ್ಲಿರುವ ಆಕೆಯ ಸಹೋದರಿನಿಗೆ ಸೋಮವಾರ ರಾತ್ರಿ  ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಳು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!