ಸೊನ್ನ (ಜೇವರ್ಗಿ): ಮಾಜಿ ಸಿಎಂ ಬಿ.ಎಸ್.ವೈ ಬೆಂಬಲಿಗ 24 ಶಾಸಕರು, ನಾಲ್ವರು ಸಚಿವರು ರಾಜಿನಾಮೆ ನೀಡಲು ಸಿದ್ಧರಾಗಿದ್ದಾರೆ. ಸರ್ಕಾರ ಇರುತ್ತಾ, ಉರುಳುತ್ತಾ ಎಂಬ ಬೆಂಗಳೂರಿನಲ್ಲಿನ ರಾಜಕೀಯ ವಿಪ್ಲವದ ಮಧ್ಯೆಯೇ ಮುಖ್ಯಮಂತ್ರಿ ಶೆಟ್ಟರ್ ಬುಧವಾರ ಹೆಲಿಕಾಪ್ಟರ್ನಲ್ಲಿ ಜೇವರ್ಗಿಗೆ ಬಂದು ಸೊನ್ನ ವಿರಕ್ತ ಮಠದ ಸಮಾಜೋ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನೆಮ್ಮದಿಯಿಂದ ಭಾಗವಹಿಸಿದ್ದರು. ಕೊಪ್ಪಳದಲ್ಲಿ ಅವರು ಮಾತನಾಡುತ್ತಾ, ಆರು ಕೋಟಿ ಜನರನ್ನು ಪ್ರತಿನಿಧಿಸುವ ಮುಖ್ಯಮಂತ್ರಿ ಹುದ್ದೆಗೆ ಗೌರವ ಕೊಡುವುದನ್ನು ಕಲಿಯಲಿ ಎಂದು ಪರೋಕ್ಷವಾಗಿ ಮಾಜಿ ಸಿಎಂ ಯಡಿಯೂರಪ್ಪಗೆ ತಿರುಗೇಟು ನೀಡಿದರು.