ಬೆಂಗಳೂರು: ಶ್ರವಣಬೆಳಗೊಳದ ಬಾಹುಬಲಿಯ ಮಹಾಮಸ್ತಕಾಭೀಷೇಕದ ನೆನಪಿಗಾಗಿ ನೀಡಲಾಗುವ 2013ನೇ ಸಾಲಿನ ಚಾವುಂಡರಾಯ ದತ್ತಿ ಪ್ರಶಸ್ತಿಗೆ ಜೈನ ಸಾಹಿತ್ಯಕ್ಕೆ ಮೌಲಿಕ ಕೊಡುಗೆ ನೀಡಿದ ಡಾ.ಷ.ಶೆಟ್ಟರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಆಯ್ಕೆ ಸಮಿತಿ ತಿಳಿಸಿದೆ. ಪ್ರಶಸ್ತಿ ಕಂಚಿನ ಫಲಕ, ಪ್ರಶಸ್ತಿ ಪತ್ರದೊಂದಿಗೆ ರು. 20 ಸಾವಿರ ನಗದು ಒಳಗೊಂಡಿದೆ.