ಬೆಂಗಳೂರು ನಗರ

ಜೈವಿಕ ಅನಿಲ ಘಟಕಕ್ಕೆ ಚಾಲನೆ

ಬೆಂಗಳೂರು: ಯಡಿಯೂರು ವಾರ್ಡ್‌ನಲ್ಲಿ ವಿದ್ಯುತ್ ಶಕ್ತಿ ಉತ್ಪಾದಿಸುವ ಜೈವಿಕ ಅನಿಲ ಘಟಕಕ್ಕೆ ಶನಿವಾರ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಅನಂತ ಕುಮಾರ್ ಚಾಲನೆ ನೀಡಿದರು. ಯಡಿಯೂರು ವಾರ್ಡ್‌ನ ಸೌತ್ ಎಂಡ್ ವೃತ್ತದ ಬಳಿ ಅಶೋಕ ಬಯೋಗ್ರೀನ್ ಸಂಸ್ಥೆ ಆರಂಭಿಸಿರುವ 5 ಟನ್ ಸಾಮರ್ಥ್ಯದ ಈ ಘಟಕ, ಹಸಿ ತ್ಯಾಜ್ಯ ಬಳಸಿ ವಿದ್ಯುತ್ ಉತ್ಪಾದಿಸುತ್ತದೆ. ಯಡಿಯೂರು ಹಾಗೂ ಪಕ್ಕದ ಗಣೇಶ ಮಂದಿರ ವಾರ್ಡ್‌ನ ಕಸವನ್ನು ಈ ಘಟಕದಲ್ಲೇ ನಿರ್ವಹಿಸಿ 50 ಕಿ.ವ್ಯಾ. ವಿದ್ಯುತ್ ಉತ್ಪಾದಿಸಲಾಗುತ್ತದೆ. ವಾರ್ಡ್‌ನ 7 ಉದ್ಯಾನ, ಅಂಬರಚುಂಬನ ಗೋಪುರ, ಡಾ. ರಾಜ್‌ಕುಮಾರ್ ಪ್ರತಿಮೆಯ ಮುಂದಿನ ದೀಪಗಳೂ ಸೇರಿದಂತೆ 14 ಕಟ್ಟಡಗಳಿಗೆ ವಿದ್ಯುತ್ ನೀಡಲಾಗುತ್ತದೆ.
ಘಟಕದಿಂದ ಉಳಿತಾಯ: ವಾರ್ಡ್‌ಗೆ 20 ಕಿಲೋ ವ್ಯಾಟ್‌ನಷ್ಟು ವಿದ್ಯುತ್ ಅಗತ್ಯವಿದೆ. ಘಟಕದಲ್ಲಿ ಉತ್ಪತ್ತಿಯಾಗುವ 50 ಕಿ.ವ್ಯಾ. ವಿದ್ಯುತ್‌ನಲ್ಲಿ ಉಳಿದ 30 ಕಿ. ವ್ಯಾಟ್ ವಿದ್ಯುತ್ತನ್ನು ಬೆಸ್ಕಾಂಗೆ ಮಾರಲಾಗುತ್ತದೆ. ಇದರಿಂದ ಕಸ ನಿರ್ವಹಣೆಗಾಗಿ ವಾರ್ಡ್‌ಗೆ ತಗುಲುತ್ತಿದ್ದ ವೆಚ್ಚದಲ್ಲಿ ರು. 4 ಲಕ್ಷ ಉಳಿತಾಯವಾಗಿದೆ. ವಿದ್ಯುತ್ ಹಾಗೂ ತ್ಯಾಜ್ಯ ನಿರ್ವಹಣೆಯ ವೆಚ್ಚ ಉಳಿತಾಯ ಸೇರಿದಂತೆ ತಿಂಗಳಿಗೆ ಒಟ್ಟು 16 ಲಕ್ಷ ಉಳಿತಾಯವಾಗಲಿದೆ. ಘಟಕದಲ್ಲಿ ತ್ಯಾಜ್ಯ ಬಳಕೆಯಾದ ನಂತರ ಶೇ. 8 ರಷ್ಟು ಗೊಬ್ಬರ ಉಳಿಯುತ್ತದೆ. ಈ ಗೊಬ್ಬರವನ್ನು ಬಿಬಿಎಂಪಿಯ ಉದ್ಯಾನಗಳಿಗೆ ಬಳಸಲಾಗುತ್ತದೆ.
ಎಲ್ಲಾ ವಾರ್ಡ್‌ಗೆ ಅಗತ್ಯ: ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್, ಬಿಬಿಎಂಪಿಯ 198 ವಾರ್ಡ್‌ಗಳಲ್ಲೂ ಘಟಕಗಳನ್ನು ಆರಂಭಿಸಿದರೆ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಯುತ್ತದೆ. ಕಸದ ಸಮಸ್ಯೆ ಪರಿಹಾರ ಮಾತ್ರವಲ್ಲದೆ ವಿದ್ಯುತ್‌ನಿಂದ ಪಾಲಿಕೆಗೆ ಸಾಕಷ್ಟು ಲಾಭವಾಗಲಿದೆ ಎಂದರು. ಮೇಯರ್ ಸತ್ಯನಾರಾಯಣ, ಪಾಲಿಕೆ ಸದಸ್ಯರಾದ ಎನ್.ಆರ್. ರಮೇಶ್, ಎನ್.ನಾಗರಾಜು ಹಾಜರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': 'ಜೈಲರ್ 2' ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!