ಬೆಂಗಳೂರು ನಗರ

ವಿಧಾನಸೌಧದಲ್ಲೇ ಶುದ್ಧ ನೀರಿಗೆ ಬರ

ಬೆಂಗಳೂರು: ವಿಧಾನಮಂಡಲ ಅಧಿವೇಶನದಲ್ಲಿ ಇಡೀ ರಾಜ್ಯಕ್ಕೆ ಶುದ್ಧ ಕುಡಿಯುವ ನೀರು ಒದಗಿಸುವ ಭರವಸೆಗಳು ಸರ್ಕಾರದಿಂದ ಕೇಳಿಬರುತ್ತಿವೆ. ಅವು ಎಷ್ಟರಮಟ್ಟಿಗೆ ಈಡೇರಬಲ್ಲವು ಎನ್ನುವುದನ್ನು ವಿಧಾನಸೌಧದ ನೀರು ಶುದ್ಧೀಕರಣ ಘಟಕಗಳು ಬಿಂಬಿಸುತ್ತಿವೆ!ಇಡೀ ವಿಧಾನಸೌಧದ ಸುತ್ತಮುತ್ತ ಅಳವಡಿಸಿರುವ ನೀರು  ಶುದ್ಧೀಕರಣ ಘಟಕಗಳು ಕೆಟ್ಟು ಹೋಗಿ ಅಲ್ಲೀಗ ಕಲುಷಿತ ಕೆಂಪು ನೀರು ಬರುತ್ತಿದೆ. ಅಷ್ಟೇ ಅಲ್ಲ, ನೀರಿನಲ್ಲಿ ಹುಳ, ಹುಪ್ಪಡಿಗಳು ಸೇರಿಕೊಂಡಿದ್ದು, ಕೆಲವೊಮ್ಮೆ ದುರ್ವಾಸನೆಯೂ ಬರುತ್ತಿದೆ. ಏಕೆಂದರೆ, ಆ ಘಟಕಗಳು ಕೆಟ್ಟು ಹೋಗಿವೆ. ವಿಧಾನಸೌಧಕ್ಕೆ ಬರುವ ಕೆಲವೇ ಸಾವಿರ ಜನರಿಗೆ ಸರಿಯಾದ ಕುಡಿಯುವ ನೀರು ಪೂರೈಸಲಾಗದ ಸರ್ಕಾರ ರಾಜ್ಯದ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸುವುದು ಸಾಧ್ಯವೇ ಎಂದು ನೋಡಿದವರು ಮಾತನಾಡಿಕೊಳ್ಳುವಂತಿದೆ ಸ್ಥಿತಿ.
ಇವರಿಗೆ ಏನಾಗಿದೆ?
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಉದಾಸಿ ಅವರ ಸೂಚನೆಯಂತೆ ವಿಧಾನಸೌಧದ ಸುತ್ತಮುತ್ತ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಗಿತ್ತು. ಅದರಂತೆ ಖಾಸಗಿ ಕಂಪನಿಯೊಂದು ವಿಧಾನಸೌಧದ ಎಲ್ಲಾ ಮಹಡಿಗಳಲ್ಲೂ 10ಕ್ಕೂ ಹೆಚ್ಚು ಶುದ್ಧೀಕರಣ ಘಟಕಗಳನ್ನು ಹಾಕಿತ್ತು.
ನಿಯಮದಂತೆ ಸಂಸ್ಥೆ ಕೆಲಕಾಲ ಆ ಶುದ್ಧೀಕರಣ ಘಟಕಗಳನ್ನು ನಿರ್ವಹಿಸಿತ್ತು. ಆನಂತರ, ಲೋಕೋಪಯೋಗಿ ಇಲಾಖೆ ಈ ಘಟಕಗಳ ನಿರ್ವಹಣೆ ಮಾಡಬೇಕಿತ್ತು. ಆದರೆ ಇಲಾಖೆ ಅಧಿಕಾರಿಗಳು ತಮಗೆ ಸಂಬಂಧವೇ ಇಲ್ಲದಂತೆ ಮರೆತರು. ಇದರಿಂದಾಗಿ ತಿಂಗಳಿಗೊಂದರಂತೆ ಘಟಕಗಳು ಕೆಟ್ಟು ನಿಂತಿವೆ. ಅಷ್ಟೇ ಅಲ್ಲ, ಅವುಗಳಿಗೆ ಅಳವಡಿಸಿದ್ದ ವಿದ್ಯುತ್ ಸಂಪರ್ಕಗಳು ಕೂಡ ಕಡಿತಗೊಂಡಿವೆ. ಕೆಲವು ಘಟಕಗಳ ಸಂಪರ್ಕ ಸುಟ್ಟು ಕರಕಲಾಗಿವೆ. ಇಷ್ಟಾದರೂ ಯಾವೊಬ್ಬ ಲೋಕೋಪಯೋಗಿ ಅಧಿಕಾರಿಗಳು ಇದನ್ನು ಗಮನಿಸಿ ರಿಪೇರಿ ಮಾಡಿಸುವ ಕಾಳಜಿ ತೋರಿಲ್ಲ.
ಈ ಬಗ್ಗೆ ವಿಧಾನಸೌಧ ಡಿ ಶ್ರೇಣಿಯ ಸಿಬ್ಬಂದಿ ಅಧಿಕಾರಿಗಳಿಗೆ ಅನೇಕ ಬಾರಿ ದೂರನ್ನೂ ನೀಡಿದರು. ಆದರೆ, ಇದು ಹಿಂದಿನ ಸರ್ಕಾರದ ಯೋಜನೆ ಎನ್ನುವ ಕಾರಣಕ್ಕೋ ಏನೋ ಈಗಿನ ಸರ್ಕಾರದ ಲೋಕೋಪಯೋಗಿ ಅಧಿಕಾರಿಗಳು ಗಮನ ಹರಿಸಿಲ್ಲ. ಹೀಗಾಗಿ ಸಾರ್ವಜನಿಕರು ಹೊರಗೆ ಹೋಗಿ ನೀರು ಖರೀದಿಸಿ ಕುಡಿಯಲು ಸಾಧ್ಯವಿಲ್ಲದೆ, ಅಗಿದ್ದು ಆಗಲಿ ಎಂದು ನಿಶ್ಚಯಿಸಿ ಕೆಟ್ಟ ನೀರನ್ನೇ ಕುಡಿಯುತ್ತಿದ್ದಾರೆ. ಹೀಗಾಗಿ ರಾಜ್ಯಕ್ಕೆ ಶುದ್ಧ ಕುಡಿಯುವ ನೀರು ಒದಗಿಸುವ ಸರ್ಕಾರದ ಭರವಸೆಯನ್ನು ಈ ಶುದ್ಧೀಕರಣ ಘಟಕಗಳು ಅಣಕಿಸುತ್ತಿವೆ. ವಿಧಾನಸೌಧದಲ್ಲೇ ಶುದ್ಧ ಕುಡಿಯುವ ನೀರು ಕೊಡಲಾಗದವರು ರಾಜ್ಯಕ್ಕೆ ಕೊಟ್ಟಾರೇ ಎಂದು ಜನ ಪ್ರಶ್ನಿಸುವಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ