ಬೆಂಗಳೂರು ನಗರ

ಪರೀಕ್ಷೆ ಬಂದರೂ ಬಾರದ ಪುಸ್ತಕ

ಬೆಂಗಳೂರು: ಕಾಲೇಜುಗಳು ಪ್ರಾರಂಭವಾಗಿ ತಿಂಗಳು ಕಳೆದರೂ ಬೆಂಗಳೂರು ವಿಶ್ವವಿದ್ಯಾಲಯ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಭಾಷಾ ಪಠ್ಯಪುಸ್ತಕ ನೀಡುವ ಗೋಜಿಗೆ ಹೋಗಿಲ್ಲ!
ಪಠ್ಯಪುಸ್ತಕ ಪ್ರಕಟಣೆಗೆ ಸಂಬಂಧಿಸಿದಂತೆ ಆರು ತಿಂಗಳ ಹಿಂದೆಯೇ ಸಭೆ ನಡೆದಿದ್ದು, ಮುದ್ರಣ ಈಗ ಪ್ರಾರಂಭವಾಗಿದೆ. ಪದವಿಗೆ ಸಬಂಧಿಸಿದ ಕನ್ನಡ ಹಾಗೂ ಇಂಗ್ಲಿಷ್ ಪಠ್ಯಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಬಿಎ, ಬಿಎಸ್ಸಿ, ಬಿಕಾಂ, ಬಿಬಿಎಂ, ಬಿಸಿಎ, ಬಿಎಫ್‌ಎ ಪದವಿಗಳಿಗೆ ಪ್ರಸಕ್ತ ಸಾಲಿನಿಂದ ಪಠ್ಯ ಬದಲಾಗಿದೆ. ಈ ಕಾರಣದಿಂದಲೇ ಪಠ್ಯ ಮುದ್ರಿಸುವುದು ತಡವಾಗಿದೆ ಎನ್ನುವುದು ವಿವಿಯ ಬಾಲಿಶ ಉತ್ತರ.

ಪಠ್ಯಕ್ರಮ ನೀಡಿಲ್ಲ: ಪದವಿಗಳಿಗೆ ಸಂಬಂಧಿಸಿಂತೆ ಭಿನ್ನ ಪಠ್ಯ ಕ್ರಮವಿದ್ದು, ಕೆಲವು ಇಂಗ್ಲಿಷ್ ಪಠ್ಯಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ, ಎಲ್ಲಾ ಇಂಗ್ಲಿಷ್ ಪುಸ್ತಕಗಳು ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಕಾಲೇಜುಗಳಿಗೆ ಪ್ರಸಕ್ತ ಸಾಲಿಗೆ ನಿರ್ದಿಷ್ಟ ಪಠ್ಯಕ್ರಮ ಏನಿರುತ್ತದೆ ಎಂಬುದರ ಮಾಹಿತಿಯನ್ನೂ ವಿವಿ ನೀಡಿಲ್ಲ. ಕೇವಲ ಪಠ್ಯ ಪ್ರಕಾರ ಹೇಳಿದೆ. ಅದನ್ನು ಆಧರಿಸಿ ಪಾಠ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಪ್ರಾಧ್ಯಾಪಕ ಸಾಸಲೂರು ಜೆ. ವಿಶ್ವನಾಥ್.
ಏಕೆಂದರೆ, ಕವಿತೆ, ಕಥೆ, ಕಾದಂಬರಿ, ನಾಟಕವಿರುತ್ತದೆ ಎಂದು ಹೇಳಲಾಗಿದೆ. ಕನ್ನಡ ಸಾಹಿತ್ಯದಲ್ಲಿ ಸಾವಿರಾರು ಕಥೆ-ಕಾದಂಬರಿ ಇದೆ. ಯಾವುದನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಸಾಧ್ಯ? ಎನ್ನುವುದು ಉಪನ್ಯಾಸಕರ ಅಸಹಾಯಕತೆ. ಆದ್ದರಿಂದ ರಾಜಾಜಿನಗರದ ಬಸವೇಶ್ವರ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರು ತಿಂಗಳಿನಿಂದ ವಿದ್ಯಾರ್ಥಿಗಳಿಗೆ ಕವಿತೆ ಮತ್ತು ಸಾಹಿತ್ಯ ಕುರಿತ ಕವಿಗಳ ಭಾಷಣವನ್ನು ಟೇಪ್ ರೆಕಾರ್ಡರ್ ಮೂಲಕ ಕೇಳಿಸುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ವಿದ್ಯಾರ್ಥಿಗಳು ಇದನ್ನೇ ಕೇಳುತ್ತಿದ್ದಾರೆ.
ಬೆಂವಿವಿ ವ್ಯಾಪ್ತಿಯಲ್ಲಿ 680 ಕಾಲೇಜುಗಳಿವೆ. ಸಾವಿರಾರು ಮಂದಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅವರಿಗೆ ಈ ತಿಂಗಳ ಅಂತ್ಯಕ್ಕೆ ಕಿರು ಪರೀಕ್ಷೆಗಳಿವೆ. ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಲು ಭಾಷಾ ವಿಷಯಗಳಲ್ಲಿ ಹೆಚ್ಚಿನ ಅಂಕ ಗಳಿಸುವುದು ಅಗತ್ಯವಾಗಿರುತ್ತದೆ. ಆದರೆ ವಿದ್ಯಾರ್ಥಿಗಳಿಗೆ ಅನಾನುಕೂಲವಾಗುತ್ತಿರುವ ವಿಚಾರಗಳೆಲ್ಲವೂ ವಿವಿಗೆ ಗೌಣವಾಗಿ ಕಾಣುತ್ತಿರುವುದು ವಿಪರ್ಯಾಸ. ಪಠ್ಯಪುಸ್ತಕ ಯಾವಾಗ ಲಭ್ಯವಾಗುತ್ತದೆ ಎಂದರೆ ಪ್ರಸಾರಾಂಗದಲ್ಲಿ ಮುದ್ರಣಗೊಳ್ಳುತ್ತಿದೆ ಎನ್ನುವ ಉತ್ತರ ಲಭಿಸುತ್ತಿದೆ. ಇದರೊಂದಿಗೆ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಇನ್‌ಕಮ್ ಟ್ಯಾಕ್ಸ್ ಮತ್ತು ಬ್ಯುಸಿನೆಸ್ ಟ್ಯಾಕ್ಸ್ ಪುಸ್ತಕಗಳೂ ಲಭ್ಯವಾಗುತ್ತಿಲ್ಲ. ಈ ವಿಷಯಗಳ ಪಠ್ಯ ಬದಲಾಗಿಲ್ಲ. ವಿದ್ಯಾರ್ಥಿಗಳು ಹಳೆಯ ವಿದ್ಯಾರ್ಥಿಗಳ ಪುಸ್ತಕ ಇಲ್ಲವೇ ಜೆರಾಕ್ಸ್ ಪ್ರತಿ ಪಡೆದು ಅಧ್ಯಯನ ಕೈಗೊಂಡಿದ್ದಾರೆ. ಅಗತ್ಯಕ್ಕೆ ತಕ್ಕಂತೆ ಪಠ್ಯ ಮುದ್ರಿಸುವುದನ್ನು ವಿವಿ ಮರೆತಿದೆ. ಕಾಲೇಜು ಪ್ರಾರಂಭವಾಗುವ ಮುನ್ನ ವಿದ್ಯಾರ್ಥಿಗಳ ಕೈಗೆ ಪುಸ್ತಕ ತಲುಪಿಸುವುದು ವಿವಿ ಜವಾಬ್ದಾರಿ. ಆದರೆ, ಈ ಎಲ್ಲಾ ಜವಾಬ್ದಾರಿಗಳಿಂದ ನುಣುಚಿಕೊಂಡಿದೆ.
ಪ್ರಸಕ್ತ ಸಾಲಿನ ಪಠ್ಯ ಬದಲಾವಣೆಗೆ ಹಲವು ತಿಂಗಳಿನಿಂದ ಪೂರ್ವ ತಯಾರಿ ಮತ್ತು ಸಭೆಗಳು ನಡೆದಿದ್ದವು. ಪ್ರಸಾರಂಗ ವಿಭಾಗದಲ್ಲಿ ಅಧಿಕಾರಿಗಳ ನಡವಿನ ತಿಕ್ಕಾಟದಿಂದ ಮುದ್ರಣ ಪ್ರಕ್ರಿಯೆ ವಿಳಂಬಗೊಂಡು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಇನ್ನಾದರೂ, ಸಂಬಂಧಪಟ್ಟವರು ಶೀಘ್ರ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿ ಕೊಡಬೇಕಿದೆ.

ಪ್ರಸಾರಾಂಗಕ್ಕೆ ಎರಡು ತಿಂಗಳ ಹಿಂದೆ ಹೊಸ ನಿರ್ದೇಶಕರನ್ನು ನೇಮಕ ಮಾಡಲಾಗಿದೆ. ಪಠ್ಯಪುಸ್ತಕ ಮುದ್ರಣಕ್ಕೆ ಕೊಟೇಶನ್ ಕರೆಯಬೇಕಿತ್ತು. ಪೇಪರ್ ರೋಲ್ ತರಿಸಬೇಕಿತ್ತು. ಎಲ್ಲವೂ ನಿಯಮಾವಳಿ ಪ್ರಕಾರ ನಡೆಯಬೇಕು. ಆದ್ದರಿಂದ ಪಠ್ಯ ಮುದ್ರಣ ತಡವಾಗಿದೆ. 10 ದಿನಗಳಲ್ಲಿ ಎಲ್ಲವೂ ಸರಿಹೋಗುತ್ತದೆ.
- ಕೆ.ಕೆ. ಸೀತಮ್ಮ, ಕುಲಸಚಿವೆ, ಬೆಂಗಳೂರು ವಿಶ್ವವಿದ್ಯಾಲಯ

ಹೊಸ ಪಠ್ಯವಿರುವ ಕಾರಣ ಮುದ್ರಣ ತಡವಾಗಿದೆ. ಈಗಾಗಲೇ ಸಂಸ್ಕೃತ ಮತ್ತು ಹಿಂದಿ ಪುಸ್ತಕಗಳ ಮುದ್ರಣ ಮುಗಿದಿದೆ. ಕನ್ನಡ ಪಠ್ಯದ ಮುದ್ರಣ ಆರಂಭಗೊಂಡಿದೆ. ಈ ತಿಂಗಳ ಅಂತ್ಯಕ್ಕೆ ವಿದ್ಯಾರ್ಥಿಗಳಿಗೆ ಪುಸ್ತಕ ತಲುಪಲಿದೆ.
- ಡಾ. ಲಲಿತಾ ಅಶ್ವತ್, ನಿರ್ದೇಶಕಿ, ಪ್ರಸಾರಾಂಗ

- ಶಶಿರೇಖಾ ಜಿ.ಕೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ