ಬೆಂಗಳೂರಿನ: ಪತ್ನಿ ಸಾವಿನಿಂದ ನೊಂದಿದ್ದ ಕುಮಾರೇಶ್ ಎಂಬಾತ ತನ್ನ 4 ವರ್ಷದ ಅವಳಿ ಮಕ್ಕಳನ್ನು ನೇಣು ಬಿಗಿದು ಕೊಂದು ಕೊನೆಗೆ ತಾನು ನೇಣುಗೆ ಶರಣಾಗಿದ್ದಾನೆ.
ಕೋಲಾರದ ಕೆಜಿಎಫ್ ಮೂಲದವರಾದ 40 ವರ್ಷದ ಕುಮಾರೇಶ್ ಅವರ ಪತ್ನಿ ಸೋನಿ ಅನಾರೋಗ್ಯದಿಂದಾ ಕಳೆದ ಮೂರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತ್ನಿ ವಿಯೋಗದಿಂದ ತೀವ್ರ ನೊಂದಿದ್ದ ಕುಮಾರೇಶ್ ಖಿನ್ನತೆಗೆ ಒಳಗಾಗಿದ್ದರು. ಇದರಿಂದ ಹೊರಬರಲಾಗದೆ ಕುಮಾರೇಶ್ ತನ್ನ ಅವಳಿ ಹೆಣ್ಣು ಮಕ್ಕಳಾದ 4 ವರ್ಷದ ವೇದಿಕಾ ಮತ್ತು ವಿಜೇತಾಗೆ ನೇಣು ಬಿಗಿದು ಕೊಂದು ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಳೆದ 10 ವರ್ಷಗಳಿಂದ ಬೆಂಗಳೂರಿನ ರಾಜಾಜಿನಗರದ 5ನೇ ಬ್ಲಾಕ್‌ನಲ್ಲಿ ವಾಸಿಸುತ್ತಿದ್ದ ಕುಮಾರೇಶನ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದು, ಕಳೆದ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅದೃಷ್ಟವಶಾತ್ ಕುಮಾರೇಶ್ ಅವರ ದೊಡ್ಡ ಮಗಳು ತನ್ನ ಅಜ್ಜಿ ಮನೆಗೆ ಹೋಗಿದ್ದರಿಂದ ಬದುಕಿ ಉಳಿದಿದ್ದಾಳೆ.