ಬೆಳಗಾವಿ: ಇಲ್ಲಿನ ಪೀಪಲ್ ಟ್ರೀ ಮಹಾವಿದ್ಯಾಲಯದಲ್ಲಿ ಕಾಮರ್ಸ್ ಲ್ಯಾಬ್ನ್ನು ಪ್ರೊ. ಅಶುತೋಷ ಡೆವಿಡ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಶಿಕ್ಷಣ ಕ್ಷೇತ್ರ ಅಮೂಲಾಗ್ರ ಬದಲಾವಣೆ ಹೊಂದುತ್ತಿದೆ. ಇದಕ್ಕೆ ಪೂರಕವಾಗುವಂತೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಮಹಾವಿದ್ಯಾಲಯದಲ್ಲಿ ಕಾಮರ್ಸ್ ಲ್ಯಾಬ್ ಆರಂಭಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಸಹಾಯಕವಾಗಲಿದೆ ಎಂದರು.
ಪೀಪಲ್ ಟ್ರೀ ಸಂಸ್ಥೆಯ ಬಿಬಿಎ ಮಹಾವಿದ್ಯಾಲಯ ನಿರ್ದೇಶ ಸುನಿಲ ದೇಸಾಯಿ, ಪ್ರೊ. ಶ್ರೇಯನ ಜವಳಕರ ಮೊದಲಾದವರು ಇದ್ದರು.