ಕಾಗವಾಡ: ಸಾಮಂುವ ಕೃಷಿ ಪದ್ಧತಿ ಮೂಲಕ ಎರೆಹುಳ ಗೊಬ್ಬರ, ಕೊಟ್ಟಿಗೆ ಗೊಬ್ಬರ ಬಳಕೆಯಿಂದ ಉಗಾರ ಬುದ್ರುಕ ಗ್ರಾಮದ ಂುವ ರೈತ ಪ್ರಮೋದ ಹೊಸೂರೆ 6 ಎಕರೆ ದ್ರಾಕ್ಷಿ ತೋಟದಲ್ಲಿ 120 ಟನ್ ದ್ರಾಕ್ಷಿ ಬೆಳೆ ಬೆಳೆಯುವ ಮೂಲಕ ಇತರೆ ರೈತರಿಗೆ ಈತ ಮಾದರಿಯಾಗಿದ್ದಾನೆ.
ಉಗಾರ ಬುದ್ರುಕ ಗ್ರಾಮದ ಂುವ ರೈತ, ಮಾಜಿ ತಾಪಂ ಸದಸ್ಯ ಮತ್ತು ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರಸಂಘದ ನಿರ್ದೇಶಕ ಪ್ರಮೋದ ಹೊಸುರೆ ಅವರು 6 ಎಕರೆ ಕ್ಷೇತ್ರದಲ್ಲಿ “ಟೂಕೋರ್ನ ಥಾಮಸನ್’ತಳಿಂು ದ್ರಾಕ್ಷಿ ಬೆಳೆ ಬೆಳೆದಿದ್ದಾರೆ. ಪ್ರತಿಂೊಂದು ಏಕರೆ ಕ್ಷೇತ್ರದಲ್ಲಿ 700 ದ್ರಾಕ್ಷಿ ಗಿಡಗಳನ್ನು ನೆಟ್ಟಿದ್ದು ಪ್ರತಿಂೊಂದು ಗಿಡಕ್ಕೆ ಹನಿ ನೀರಾವರಿ ಂೋಜನೆಂು ಮೂಲಕ ನೀರು, ಎರೆಹುಳ ಗೊಬ್ಬರ, ತಲಾ 10 ಕಿಲೋ ಕೊಟ್ಟಿಗೆ ಗೊಬ್ಬರ, ಹಸಿರು ಬೆಳೆ ಗೊಬ್ಬರ, ಸೂಕ್ಷ್ಮ ಜೀವಿ ಹನಿ ನೀರು ಮೂಲಕ ಜಿಂಕ ಪ್ಯಾರೇಸ್ ಗೊಬ್ಬರ ನೀಡಿದ್ದಾರೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾರ್ಗದರ್ಶಮ ಮೂಲಕ ರಸಾಂುನ ಗೊಬ್ಬರದಲ್ಲಿ ಸೂಪರ್ ಪಾಸ್ಪೇಟ್ 200 ಕೆಜಿ ಡಿಎಪಿ, ತಲಾ 50 ಕಿಲೋ ಗೊಬ್ಬರವನ್ನು ನೀಡಿದ್ದಾರೆ.
ದ್ರಾಕ್ಷಿ ತೋಟ ಪ್ರಾರಂಭಿಸಿ 4 ವರ್ಷ ಕಳೆದಿವೆ. ಮೊದಲನೇ ವರ್ಷ 6 ಎಕರೆ ಕ್ಷೇತ್ರದಲ್ಲಿ 70 ಟನ್, 2ನೇ ವರ್ಷ 88, 3ನೇ ವರ್ಷ 105 ಟನ್, ಪ್ರಸಕ್ತ ವರ್ಷ 120 ಟನ್ ಮೇಲ್ಪಟ್ಟು ದ್ರಾಕ್ಷಿ ಬೆಳೆ ಉತ್ಪಾದನೆಂಾಗಿದೆ. ಈ ಭಾಗದಲ್ಲಿಂು ಉಳಿದ ದ್ರಾಕ್ಷಿ ಬೆಳೆಗಾರರಿಗೆ ಹೋಲಿಸಿದಲ್ಲಿ ಈ ಪ್ರಮಾಣ ಅಧಿಕವಾಗಿದೆ. ಇದರಲ್ಲಿ ನಿರ್ಮಿಸುವ ಪ್ರತಿಂೊಂದು ಏಕರೆಂುಲ್ಲಿ 5 ಟನ್ ಗೋಡಂಬಿ ತಂಾರಾಗುತ್ತದೆ ಎಂದು ಪ್ರಮೋದ ಹೊಸೂರೆ ತಿಳಿಸಿದರು.
8ಕಾಗವಾಡ1
ರೈತ ಪ್ರಮೋದ ಹೊಸೂರೆ ದ್ರಾಕ್ಷಿ ತೋಟದಲ್ಲಿನ ಬೆಳೆ ಕಟಾವು ಮಾಡುತ್ತಿರುವುದು.
8ಕಾಗವಾಡ2
ರೈತ ಪ್ರಮೋದ ದ್ರಾಕ್ಷಿ ಕಟಾವು ಮಾಡಿ ಸಂಗ್ರಹಿಸುತ್ತಿರುವುದು.