ರಾಂುಬಾಗ: ಚಿಕ್ಕೋಡಿ ಲೋಕಸಭಾ ಚುನಾವಣೆ ಹಿನ್ನೆಲೆಂುಲ್ಲಿ ಮದ್ಯ ಮಾರಾಟಕ್ಕೆ ನಿಷೇಧವಿದ್ದರೂ ಕಳ್ಳ ಮಾರ್ಗದಿಂದ ಸಾರಾಯಿ ಸಾಗಾಟ ಸರಾಗವಾಗಿ ಸಾಗಿರುವುದು ವಿಪಂರ್ಾಸವಾಗಿದೆ.
ಬುಧವಾರ ಸಂಜೆ 6ರಿಂದ ಶುಕ್ರವಾರ ಸಂಜೆವರೆಗೆ ಮದ್ಯಮಾರಾಟ ನಿಷೇಧಿಸಲಾಗಿದ್ದು, ಕೆಲವರು ಮುಂಚಿತವಾಗಿಯೇ ದಾಸ್ತಾನು ಮಾಡಿಕೊಂಡಿದ್ದಾರೆ.
ಬಾರ್ಗಳು ಬಂದ್ ಇದ್ದರೂ ಕಳ್ಳ ಮಾರ್ಗದಿಂದ ಮದ್ಯ ಸಾಗಿಸುವುದು ಸಾಮಾನ್ಯವಾಗಿದೆ.
ಕಳೆದ ರಾತ್ರಿ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣೆ ಅಧಿಕಾರಿ ದೀಪಾ ಚೋಳನ ದಾಬಾವೊಂದರ ಮೇಲೆ ದಾಳಿ ಮಾಡಿ ಅಕ್ರಮ ಮದ್ಯ ಮಾರಾಟ ಹಾಗೂ ಮದ್ಯ ಸೇವನೆಗೆ ಅವಕಾಶ ನೀಡಿರುವುದನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಲೂಕಿನ ಹಲವಾರು ಖಾನಾವಳಿಗಳಲ್ಲಿ ಅಕ್ರಮ ಮದ್ಯ ಸೇವನೆಗೆ ಅವಕಾಶ ನೀಡಲಾಗುತ್ತಿದೆ. ಮದ್ಯ ಹಾಗೂ ಕಳ್ಳಭಟ್ಟಿ ಸಾರಾಯಿ ಗುಪ್ತವಾಗಿ ಮಾರಾಟ ನಡೆದಿರುವುದು ಸಾಮಾನ್ಯವಾಗಿದೆ. ಇದರ ಲಾಭ ಪಡೆಂುಲೆಂದೇ ಮದ್ಯವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದ್ದರೂ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿರುವುದು ವಿಪಂರ್ಾಸ.