ಚಿಕ್ಕೋಡಿ: ತಾಲೂಕಿನ ನಾಗರಮುನ್ನೊಳ್ಳಿ ಹೋಬಳಿಂುಲ್ಲಿ ಗುರುವಾರ ಸಂಜೆ ಗುಡುಗು ಸಿಡಿಲು, ಗಾಳಿಂೊಂದಿಗೆ ಸುರಿದ ಧಾರಾಕಾರ ಮಳೆಗೆ ವಿವಿಧ ಗ್ರಾಮಗಳಲ್ಲಿ ಮನೆಗಳ ಛಾವಣಿ ಹಾರಿ ಹೋಗಿದ್ದು, ಕೆಲ ಮನೆಗಳು ಕುಸಿದಿವೆ. ಬಾಳೆ ತೋಟದಲ್ಲಿ ಗಿಡಗಳು ನೆಲಕಚ್ಚಿದ್ದು, ಸುಮಾರು 50ಕ್ಕೂ ಹೆಚ್ಚು ಎಕರೆ ಪ್ರದೇಶದ ವಿವಿಧ ಬೆಳೆ ನಾಶವಾಗಿ, ಅಪಾರ ನಷ್ಟವಾಗಿದೆ.
ಗುರುವಾರ ಸಂಜೆ 5 ಗಂಟೆ ಪ್ರಾರಂಭವಾದ ಸಾಧಾರಣ ಮಳೆ ನಂತರ ಗುಡುಗು, ಸಿಡಿಲು, ಜೋರಾದ ಗಾಳಿಂೊಂದಿಗೆ ಸುಮಾರು ಒಂದೂವರೆ ಗಂಟೆ ಕಾಲ ಮಳೆ ಸುರಿದಿದೆ. ಇದರಿಂದ ಚಿಕ್ಕೋಡಿ ತಾಲೂಕಿನ ನಾಗರಮುನ್ನೊಳ್ಳಿ ಹೋಬಳಿಂು ಬೆಳಗಲಿ ಗ್ರಾಮದಲ್ಲಿ 20ಕ್ಕೂ ಹೆಚ್ಚು ಮನೆಗಳ ಛಾವಣಿ ಹಾರಿ ಹೋಗಿವೆ. ಕೆಲ ಮನೆ ಕುಸಿದು ಬಿದ್ದಿವೆ. ಮೂರ್ನಾಲ್ಕು ಬಾಳೆ ತೋಟ ಮತ್ತು ಗೋವಿನ ಜೋಳ, ಕಡಲೆ, ಇರುಳ್ಳಿ, ತರಕಾರಿ, ಕಬ್ಬು ಸೇರಿ ಸುಮಾರು 50 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ.
ಕೆಂಚನಟ್ಟಿ, ಇಟನಾಳ ಗ್ರಾಮಗಳಲ್ಲಿಯೂ ಕೆಲ ಮನೆಗಳ ಛಾವಣಿ ಹಾರಿದ್ದು, ಕೆಲ ತರಕಾರಿ ಬೆಳೆ ನಾಶವಾಗಿದೆ. ಇದರಿಂದ ಮೊದಲೆ ಬರಗಾಲದಿಂದ ತತ್ತರಿಸಿದ್ದ ರೈತರು ಕಂಗಾಲಾಗಿದ್ದಾರೆ.
ನಾಗರಮುನ್ನೊಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿಗಳು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪರಿಹಾರ: ರಾಂುಬಾಗ ಶಾಸಕ ದುಂರ್ೋಧನ ಐಹೋಳೆ ಬೆಳಗಲಿ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ ನೀಡಿ ಪರಿಶೀಲಿಸಿ, ಹಾನಿಂಾದ ಬಗ್ಗೆ ಕಂದಾಂು ಇಲಾಖೆ ಮೂಲಕ ಸಮೀಕ್ಷೆ ಮಾಡಿಸುವಂತೆ ತಹಸೀಲ್ದಾರರಿಗೆ ತಿಳಿಸಲಾಗಿದೆ. ಸಮೀಕ್ಷೆ ವರದಿ ಪಡೆದು ತಕ್ಷಣ ಮನೆ ಕಳೆದುಕೊಂಡವರಿಗೆ ಹಾಗೂ ಬೆಳೆ ಹಾನಿಂಾದ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.