ಬೆಳಗಾವಿ: ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಅಬಕಾರಿ ಪೊಲೀಸರು ಭಾನುವಾರ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಒಂದು ಕಾರು ಸೇರಿ ರು. 80 ಸಾವಿರ ಮೌಲ್ಯದ ಅಕ್ರಮ ಗೋವಾ ಮದ್ಯ ವಶಪಡಿಸಿಕೊಂಡಿದ್ದಾರೆ. ಅಬಕಾರಿ ಪೊಲೀಸರು ದಾಳಿ ವೇಳೆ ಒಂದು ಮಾರುತಿ 800, ಮತ್ತು 750 ಎಂಎಲ್ನ 48 ಗೋವಾ ಮದ್ಯ ಬಾಟಲಿಯನ್ನು ವಶಪಡಿಸಿಕೊಂಡಿದ್ದಾರೆ.