ಬೆಳಗಾವಿ

ಗಾಂಜಾ ಬೆಳೆದವನ ಬಂಧನ

ರಾಂುಬಾಗ: ತಾಲೂಕಿನ ಭಿರಡಿ ಗ್ರಾಮದ ಹೊಲವೊಂದರಲ್ಲಿ ಗಾಂಜಾ ಬೆಳೆದಿದ್ದು, ಜಿಲ್ಲಾ ಅಪರಾಧ ಪಡೆಂು (ಡಿಸಿಐಬಿ) ಭಾನುವಾರ ದಾಳಿಮಾಡಿ ಗಾಂಜಾವನ್ನು ಜಪ್ತಿ ಮಾಡಿ, ಆರೋಪಿಯೋರ್ವನನ್ನು ವಶಕ್ಕೆ ಪಡೆದಿದೆ. ಮತ್ತೋರ್ವ ಆರೋಪಿ ಭಿರಡಿ ಗ್ರಾಮದ ಮಹಾದೇವ ಕರಿಗಾರ ಪರಾರಿಂಾಗಿದ್ದಾನೆ. ಆತನ ಮಗನಾದ ಶಿವಾನಂದ ಕರಿಗಾರ(26) ಎಂಬಾತನನ್ನು ಬಂಧಿಸಲಾಗಿದೆ. ಇವರು ತಮ್ಮ ಹೊಲದಲ್ಲಿ ಕಬ್ಬಿನ ಬೆಳೆಯ ಮಧ್ಯೆದಲ್ಲಿ ಗಾಂಜಾ ಬೆಳೆದಿದ್ದರು. ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಅಪರಾಧ ಪಡೆಂು ಪಿಎಸ್‌ಐ ವಿಶ್ವನಾಥ ಕಬ್ಬೂರೆ ಸಿಬ್ಬಂದಿಯೊಂದಿಗೆ ದಾಳಿ ಮಾಡಿದ್ದರು. ಸುಮಾರು ಮೂರು ಗಂಟೆ ಪರಿಶೀಲಿಸಿದ ತಂಡವು ಅವರ ಕಬ್ಬಿನ ಗಾನದ ಮನೆಂುಲ್ಲಿ ಚೀಲದಲ್ಲಿ 4 ಕೆ.ಜಿ. ಒಣಗಿದ ಗಾಂಜಾ ಹಾಗೂ 10 ಕೆಜಿ (ಹಸಿ ಗಾಂಜಾ) ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ. ರಾಂುಬಾಗ ಪಿಎಸ್‌ಐ ಐ.ಎಂ. ಮಠಪತಿ ದಾಳಿಗೆ ಸಹಕಾರ ನೀಡಿದರು. ಸಿಬ್ಬಂದಿಗಳಾದ ಆರ್.ಎಂ. ಕನಕರೆಡ್ಡಿ, ಸರದಾರ, ತಳವಾರ, ಜಿಲ್ಲೇದಾರ ಹಾಗೂ ಎಚ್.ಎಸ್ ಗುಡ್ಡದ ಇದ್ದರು.

ಮಟ್ಕಾ ಬುಕ್ಕಿ ಬಂಧನ
ಬೈಲಹೊಂಗಲ: ಮಟ್ಕಾ ಚೀಟಿ ಬರೆಯುತ್ತಿದ್ದ ಮುರಗೋಡ ಗ್ರಾಮದ ಮಹಾಂತಯ್ಯ ಮಲ್ಲಿಕಾರ್ಜುನ ಮಲ್ಲಯ್ಯನವರ ಎಂಬಾತನನ್ನು ಪೊಲೀಸರು ಬಂಧಿಸಿ ಆತನಿಂದ ರು.  17,910 ನಗದು ಹಾಗೂ ಮಟ್ಕಾ ಚೀಟಿ ವಶಪಡಿಸಿಕೊಂಡಿದ್ದಾರೆ.

ಪ್ರತ್ಯೇಕ ಘಟನೆ : ಇಬ್ಬರ ಆತ್ಮಹತ್ಯೆ
ಬೈಲಹೊಂಗಲ: ಸಣ್ಣ ಪುಟ್ಟ ಕಳ್ಳತನ ಮಾಡುತ್ತ, ಸಾರಾಯಿ ಕುಡಿತ ಚಟಕ್ಕೆ ಬಿದ್ದ ಯುವಕ ಹಣ ಸಿಗದಿದ್ದಾಗ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ. ಸವದತ್ತಿ ತಾಲೂಕಿನ ಸತ್ತಿಗೇರಿ ಗ್ರಾಮದ ನಿಂಗಪ್ಪ ಮಹಾರುದ್ರಪ್ಪ ಅರಳಿಮಟ್ಟಿ (30) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಅದೇ ರೀತಿ ಮಾನಸಿಕವಾಗಿದ್ದ ವ್ಯಕ್ತಿಯೋರ್ವ ನೇಣಿ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ರಾತ್ರಿ ಸವದತ್ತಿ ತಾಲೂಕಿನ  ನುಗ್ಗಾನಟ್ಟಿ ಗ್ರಾಮದ ಹೊಲಮೊಂದರಲ್ಲಿ ನಡೆದಿದೆ. ಸವದತ್ತಿ ತಾಲೂಕಿನ ಆಲದಕಟ್ಟಿ ಗ್ರಾಮದ ಫಕೀರಪ್ಪ ಶಂಕೆರೆಪ್ಪ ಚೌಡಪ್ಪನವರ (45) ಎಂದು ಗುರುತಿಸಲಾಗಿದೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟ್ರ್ಯಾಕ್ಟರ್ ಹಾಯ್ದು ಬಾಲಕಿ ಸಾವು
ಗೋಕಾಕ: ರಸ್ತೆ ದಾಟುತ್ತಿದ್ದ ಬಾಲಕಿಯ ಮೇಲೆ ಟ್ರ್ಯಾಕ್ಟರ್ ಹಾಯ್ದ ಪರಿಣಾಮವಾಗಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ. ಬಿಜಾಪುರ ತಾಲೂಕಿನ ಕನ್ನೂರ ಗ್ರಾಮದ ಕುಮಾರಿ ರೂಪಾಲಿ ಶ್ರೀಮಂತ ಶಂಡಗೆ (6) ಎಂಬ ಬಾಲಕಿ ಹೊಲದಲ್ಲಿಯ ಕಚ್ಚಾ ರಸ್ತೆ ದಾಟುತ್ತಿದ್ದಾಗ ಟ್ರ್ಯಾಕ್ಟರ್ ಹಿಂಬದಿ ಗಾಲಿಯಲ್ಲಿ ಸಿಲುಕಿ ಮೃತಪಟ್ಟಿದ್ದಾಳೆ. ಈ ಬಗ್ಗೆ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂದು ವಸತಿ ಶಾಲೆಗೆ ಪ್ರವೇಶ ಪರೀಕ್ಷೆ
ಬೆಳಗಾವಿ: ಮೊರಾರ್ಜಿ ದೇಸಾಯಿ, ಕಿತ್ತೂರ ರಾಣಿ ಚನ್ನ್ನಮ್ಮ, ಏಕಲವ್ಯ, ಅಟಲ್ ಬಿಹಾರಿ ವಾಜಪೇಯಿ ಮಾದರಿ ವಸತಿ ಶಾಲೆಗಳಿಗೆ ಮಾ.23 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ್ನ 1.30ರ ವರೆಗೆ 6ನೇ ತರಗತಿಗೆ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆ ನಡೆಯಲಿದೆ.  ಬೆಳಗಾವಿ ತಾಲೂಕಿನಲ್ಲಿ ಒಟ್ಟು 684 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗೆ ಅರ್ಜಿ ನೋಂದಾಯಿಸಿರುವ ಕಾರಣ ಎರಡು ಪರೀಕ್ಷಾ ಕೇಂದ್ರ ಮಾಡಲಾಗಿದೆ. ನಗರದ ಸರ್ಕಾರಿ ಸರದಾರ್ಸ್ ಪದವಿ ಪೂರ್ವ ಮಹಾವಿದ್ಯಾಲಯದ ಕೇಂದ್ರ-1 ರಲ್ಲಿ (ನೋಂದಣಿ ಸಂಖ್ಯೆ- 30010001 ರಿಂದ 30010382 ರವರೆಗೆ) ಹಾಗೂ ಇದೇ ಮಹಾವಿದ್ಯಾಲಯದ ಕೇಂದ್ರ- 2ರಲ್ಲಿ (ನೋಂದಣಿ ಸಂಖ್ಯೆ- 30110001 ರಿಂದ 30110302 ರವರೆಗೆ) ಪ್ರವೇಶ ಪರೀಕ್ಷೆ ನಡೆಸಲಾಗುವುದು. ಎಲ್ಲ ವಿದ್ಯಾರ್ಥಿಗಳು ತಪ್ಪದೇ ಪ್ರವೇಶ ಪರೀಕ್ಷೆಗೆ ಹಾಜರಾಗಲು ಬೆಳಗಾವಿ ತಾಲೂಕಾ ಪರೀಕ್ಷಾ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ