ಬಳ್ಳಾರಿ: ಕೌಶಲ್ಯ ಆಯೋಗ, ಉದ್ಯೋಗ ಮತ್ತು ತರಬೇತಿ ಇಲಾಖೆ, ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ನಿಯಮಿತ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಬಳ್ಳಾರಿ ಜಂಟಿಯಾಗಿ ಫೆ. 7ರಂದು ಬೆಳಗ್ಗೆ 10ಕ್ಕೆ ಜಿಲ್ಲಾ ಮಟ್ಟದ ಕೌಶಲ್ಯ ಅಭಿವೃದ್ಧಿ ಮತ್ತು ತರಬೇತಿ ಕೇಂದ್ರ ಮಿನಿ ಉದ್ಯೋಗ ಮೇಳ ಆಯೋಜಿಸಿವೆ. ಮೇಳವು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನಡೆಯಲಿದೆ. ಡಿಪ್ಲೋಮಾ, ಬಿ.ಇ, ಬಿಸಿಎ ಹೊರತುಪಡಿಸಿ ಎಸ್ಎಸ್ಎಲ್ಸಿ, ಪಿಯುಸಿ, ಯಾವುದೇ ಪದವಿ ಹೊಂದಿದವರು ಭಾಗವಹಿಸಬಹುದು. ಆಸಕ್ತರು ತಮ್ಮ ಸ್ವವಿವರಗಳೊಂದಿಗೆ ವಿದ್ಯಾರ್ಹತೆ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕು. ಮಾಹಿತಿಗಾಗಿ ದೂ.ಸಂ- 9844444958, 9036422052ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಮಹಿಳೆಯರಿಗೆ ಸ್ಪರ್ಧೆ
ಬಳ್ಳಾರಿ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಪ್ರತಿಭಾ ಮಹಿಳಾ ಮಂಡಳಿ ವತಿಯಿಂದ ಸ್ತ್ರೀ ಶಕ್ತಿ ಗುಂಪಿನ ಸದಸ್ಯರಿಗೆ, ವಿವಿಧ ಮಹಿಳಾ ಮಂಡಳಿಯವರಿಗಾಗಿ ಜಿಲ್ಲಾ ಮಟ್ಟದ ನೃತ್ಯ, ರಂಗೋಲಿ, ಫ್ಯಾಷನ್ ಶೋ, ಜೋಕ್ಸ್, ನಾಟಕ ಮುಂತಾದ ಸ್ಪರ್ಧೆಗಳನ್ನು ಮಾ. 10ರಂದು ನಗರದ ರಾಘವ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಫೆ. 20ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳಬೇಕು, ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷ, ಪ್ರತಿಭಾ ಮಂಡಳಿ, ಪಟ್ಟಣ ಶೆಟ್ಟಿ ಬೀದಿ, ಹೂವಿನ ಬಜಾರ್, ಮದೀನ ಮಾರ್ಕೆಟ್ ಹಿಂದುಗಡೆ, ಬೆಂಗಳೂರು ರಸ್ತೆ, ಬಳ್ಳಾರಿ ಇವರನ್ನು ಸಂಪರ್ಕಿಸಬಹುದು. (ಮೊ- 9731835794).
ನಾಳೆ ಅಹವಾಲು ಸ್ವೀಕಾರ
ಬಳ್ಳಾರಿ: ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿಯು ನಗರದ ಬುಡಾ ಕಚೇರಿಯ ಹಿಂಭಾಗದಲ್ಲಿರುವ ಕರ್ನಾಟಕ ವಿದ್ಯುಚ್ಚಕ್ತಿ ಮಂಡಳಿ ಎಂಜಿನಿಯರ್ ಸಂಘದ ಕಟ್ಟಡದಲ್ಲಿ ಫೆ. 8ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಗ್ರಾಹಕರ ಸೇವಾ ನ್ಯೂನ್ಯತೆ ನಿವಾರಣೆ ಮತ್ತು ಕುಂದುಕೊರತೆ ಸಭೆ ಆಯೋಜಿಸಿದೆ. ವಿದ್ಯುತ್ ಸಮಸ್ಯೆ ಪರಿಹರಿಸಿಕೊಳ್ಳಬಹುದೆಂದು ಅಧೀಕ್ಷಕ ಅಭಿಯಂತರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.