ಹೊಸಪೇಟೆ: ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2012-13ನೇ ಸಾಲಿನ ಪರಿಶಿಷ್ಟ ಪಂಗಡ ನೊಂದಾಯಿತ ಸಂಘ ಸಂಸ್ಥೆಗಳ ಧನ ಸಹಾಯ ಯೋಜನೆಯಡಿ ಗೊಲ್ಲರಹಳ್ಳಿಯ ಗುರು ಪುಟ್ಟರಾಜ ಸಂಗೀತ ಕಲಾ ಬಳಗದಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರ ಸಂಕಿರಣ, ಕವಿಗೋಷ್ಠಿ ಹಾಗೂ ಸಂಗೀತೋತ್ಸವವನ್ನು ತಾಲೂಕಿನ ಮರಿಯಮ್ಮನಹಳ್ಳಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಫೆ. 7ರಂದು ಬೆಳಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ. ಹಂಪಿ ಕನ್ನಡ ವಿವಿ ಕುಲಸಚಿವ ಡಾ. ಮಂಜುನಾಥ ಬೇವಿನಕಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ರಂಗಭೂಮಿಗೆ ಮರಿಯಮ್ಮನಹಳ್ಳಿ ಕೊಡುಗೆ ಕುರಿತು ಬಸರಕೋಡಿನ ನಿವೃತ್ತ ಶಿಕ್ಷಕ ಹಿ.ಮ. ಕೊಟ್ರಯ್ಯ ಉಪನ್ಯಾಸ ನೀಡುವರು. ನಂತರ ಕವಿಗೋಷ್ಠಿ, ಸಂಗೀತ ಕಾರ್ಯಕ್ರಮ ನಡೆಯಲಿದೆ.