ಕೂಡ್ಲಿಗಿ: ತಾಲೂಕಿನ ಹಾರಕಬಾವಿ ಚೌಡೇಶ್ವರಿ ದೇವಿಯ ರಥೋತ್ಸವ ಫೆ. 20ರ ಸಂಜೆ 5 ಗಂಟೆಗೆ ಜರಗುಲಿದೆ ಎಂದು ದೇವಸ್ಥಾನ ಅಭಿವೃದ್ಧಿ ಸಮಿತಿಯ ಜಿ. ಕರಿಬಸವನಗೌಡ, ಪಿ. ಚಿಕ್ಕಪ್ಪ ತಿಳಿಸಿದ್ದಾರೆ. ಬೆಳಗ್ಗೆ 8ಕ್ಕೆ ಬಸವ ರಥೋತ್ಸವ, ಮಧ್ಯಾಹ್ನ 3ಕ್ಕೆ ಬೆಳ್ಳೆಗಟ್ಟಿ ಗ್ರಾಮದವರಿಂದ ತೇರಿನ ಮಿಣಿ ಹಗ್ಗ ತರುವುದು, ಸಂಜೆ 5ಕ್ಕೆ ಚೌಡೇಶ್ವರಿ ದೇವಿಯ ಪಟ ಹರಾಜು ನಂತರ ರಥೋತ್ಸವ ಜರುಗಲಿದೆ. ಫೆ. 21ರಂದು ರಾತ್ರಿ 10ಕ್ಕೆ ಕುಡುಕ ಕಟ್ಟಿದ ತಾಳಿ, ಫೆ. 22ರಂದು ಕುಡುಕ ಕಟ್ಟಿದ ಪ್ರೇಮಕೋಟೆ ಹಾಗೂ ಫೆ. 23ರಂದು ಧರ್ಮದ ದೊರೆ ಎಂಬ ನಾಟಕಗಳು ಸ್ಥಳೀಯ ಕಲಾವಿದರಿಂದ ಪ್ರದರ್ಶನಗೊಳ್ಳಲಿವೆ. ಫೆ. 23ರಂದು ಮಧ್ಯಾಹ್ನ 12ರಿಂದ ಗ್ರಾಮದಲ್ಲಿ ಚೌಡೇಶ್ವರಿ ದೇವಿಯ ಮೆರವಣಿಗೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದಿದ್ದಾರೆ.