ಬಳ್ಳಾರಿ

ಈ ಬಾರಿ ನಡೆಯುವುದೋ ಹಂಪಿ ಉತ್ಸವ?

ಹೊಸಪೇಟೆ: ವಿಜಯನಗರ ಸಾಮ್ರಾಜ್ಯದ ಗತವೈಭವ, ಕಲೆ, ಸಾಂಸ್ಕೃತಿಕ ನೆನಪುಗಳನ್ನು ಮೆಲಕು ಹಾಕುವ ವಿಶ್ವವಿಖ್ಯಾತ ಹಂಪಿ ಉತ್ಸವ ಈ ಬಾರಿ ನಡೆಯುವುದೇ?
ಈ ವರ್ಷದ ಹಂಪಿ ಉತ್ಸವ ಆಚರಣೆಗೆ ಜಿಲ್ಲಾಡಳಿತ ಈಗಾಗಲೇ ನಿಗದಿಗೊಳಿಸಿದ್ದ ಫೆ. 22, 23 ಮತ್ತು 24 ದಿನಾಂಕ ಕಳೆದ ಹಿನ್ನೆಲೆಯಲ್ಲಿ ಈ ಅನುಮಾನಗಳು ಸಹಜವಾಗಿ ಮೂಡಿವೆ. ಉತ್ಸವದ ಮೇಲೆ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಕರಿನೆರಳು ಆವರಿಸಿದೆ. ಆದರೆ ಚುನಾವಣೆ ಮುಗಿದ ನಂತರವೂ ಉತ್ಸವ ನಡೆಯುವುದು ಅನುಮಾನವೇ.
1987ರಲ್ಲಿ ಹಂಪಿಯಲ್ಲಿ ಪುರಂದರದಾಸರ ಆರಾಧನೆ ಹಾಗೂ ವಿಜಯನಗರ ದಸರಾ ಮಹೋತ್ಸವದ ಹೆಸರಲ್ಲಿ ಆರಂಭಗೊಂಡ ಹಂಪಿ ಉತ್ಸವ ಅಂದಿನಿಂದಲೂ ವರ್ಷದಿಂದ ವರ್ಷಕ್ಕೆ ಹೊಸ ಮೆರುಗು ಪಡೆಯುತ್ತಾ ಬಂದಿದೆ.
ಪದ್ಧತಿಗೆ ಬ್ರೇಕ್: ಹಂಪಿ ಉತ್ಸವವನ್ನು ಪ್ರತಿವರ್ಷ ನವೆಂಬರ್ 3, 4 ಮತ್ತು 5ರಂದು ಆಯೋಜಿಸುವಂತೆ ಹಿಂದಿನ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಅದರಂತೆ ಉತ್ಸವ ನಡೆದುಕೊಂಡು ಬರುತ್ತಿತ್ತು. ಆದರೆ ಮಾಜಿ ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ. ಜನಾರ್ದನ ರೆಡ್ಡಿ ಅಧಿಕಾರವಧಿಯಲ್ಲಿ ಹಂಪಿ ಉತ್ಸವವನ್ನು ಶ್ರೀಕೃಷ್ಣದೇವರಾಯರ 500ನೇ ಪಟ್ಟಾಭಿಷೇಕ ಮಹೋತ್ಸವವನ್ನಾಗಿ ಆಚರಿಸಲು ನಿರ್ಧರಿಸಲಾಯಿತು. ಈ ಹಿನ್ನೆಲೆಯಲ್ಲಿ ಉತ್ಸವದ ದಿನಾಂಕ ಬದಲಿಸಿ, 2010 ಜನವರಿ 27, 28 ಮತ್ತು 29ರಂದು 500ನೇ ವರ್ಷಾಚರಣೆ ಆಚರಿಸುವ ಮೂಲಕ ಉತ್ಸವದ ದಿನಾಂಕ ಬದಲಾಯಿತು.
2011ರಲ್ಲಿಯೂ ಜನವರಿ 27, 28 ಮತ್ತು 29ರಂದು ಮೂರು ದಿನಗಳ ಕಾಲ ಉತ್ಸವ ಅದ್ಧೂರಿಯಾಗಿ ಆಚರಿಸಲ್ಪಟ್ಟಿತು. 2012ರಲ್ಲಿ ನಡೆಯಬೇಕಿದ್ದ ಉತ್ಸವ ಬರಗಾಲದ ಹಿನ್ನೆಲೆಯಲ್ಲಿ ರದ್ದಾಯಿತು. 2013ರಲ್ಲಿ ಉತ್ಸವ ನಡೆಸುವುದೋ ಅಥವಾ ಬಿಡುವುದೋ ಎನ್ನುವ ಅನುಮಾನದಿಂದಲೇ ರಾಜ್ಯ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಸಭೆ ನಡೆಸಿ ಫೆ.22, 23 ಹಾಗೂ 24ರಂದು ಉತ್ಸವ ಆಚರಣೆಗೆ ದಿನಾಂಕ ನಿಗದಿ ಮಾಡಿತ್ತು. ಆದರೆ, ಆ ದಿನಾಂಕ ಮುಗಿದರೂ ಇದುವರೆಗೆ ಉತ್ಸವದ ಕುರಿತು ಮಾತೇ ಇಲ್ಲ.
ಉತ್ಸವಕ್ಕೆ ಹಲವು ವಿಘ್ನಗಳು: ಉತ್ಸವಕ್ಕೆ 1988ರ ಅಕ್ಟೋಬರ್ನಲ್ಲಿ 3 ದಿನಗಳ ಹಂಪಿ ಉತ್ಸವ ಹಮ್ಮಿಕೊಳ್ಳಲಾಗಿತ್ತು. ಆದರೆ ಉತ್ಸವದ ದಿನವೇ ಅಂದಿನ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ಸಚಿವರಾಗಿದ್ದ ಅಬ್ದುಲ್ನಜೀರ್ ಸಾಬ್ ನಿಧನದಿಂದಾಗಿ ಎಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿತ್ತು. 1989, 1990ರಲ್ಲಿ ಕಾರಣಾಂತರಗಳಿಂದ ನಡೆಯಲಿಲ್ಲ. 1995ರಿಂದ 2000ರ ವರೆಗೆ ಉತ್ಸವ ನಿರಾಂತಕವಾಗಿ ನಡೆಯಿತು. 2001ರಲ್ಲಿ ಬರಗಾಲದಿಂದಾಗಿ ಮುಂದೂಡಲಾಯಿತು. 2002ರಲ್ಲಿ ನಡೆಯಬೇಕಿದ್ದ ಉತ್ಸವ 2003ರ ಜನವರಿಯಲ್ಲಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಹೊಸಪೇಟೆ ತಾಲೂಕು ಪಂಚಾಯಿತಿ ಅಧ್ಯಕ್ಷ ಎಂ. ಸೂರ್ಯನಾರಾಯಣ ರೆಡ್ಡಿ ಹತ್ಯೆಯಿಂದ ಸ್ಥಗಿತಗೊಂಡಿತ್ತು. 2009ರಲ್ಲಿ ನೆರೆ ಹಾವಳಿ ಅಡ್ಡಿಯಾಗಿತ್ತು. ಹೀಗೆ ಉತ್ಸವಕ್ಕೆ ಕೆಲ ವಿಘ್ನಗಳು ಬಂದು ಹೋಗಿವೆ.
ಆದರೆ ಈ ಬಾರಿಯ ಉತ್ಸವಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಘ್ನ ತಂದಿದೆ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ಸಿಂಗ್ ಹೇಳುತ್ತಾರೆ. ರಾಜ್ಯ ಸರ್ಕಾರ ಮನಸ್ಸು ಮಾಡಿದ್ದರೆ ವಾಡಿಕೆಯಂತೆ ನವೆಂಬರ್ನಲ್ಲೇ ಆಚರಿಸಬಹುದಿತ್ತು.
-ಸಿ.ಕೆ. ನಾಗರಾಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!