ಕೂಡ್ಲಿಗಿ: ತಾಲೂಕು ಕೊರಚ ಸಂಘದಿಂದ ತಾಲೂಕಿನ ಬತ್ತನಹಳ್ಳಿ ಗ್ರಾಮದಲ್ಲಿ ಮಾ. 2ರಿಂದ 3ರವರೆಗೆ ಎರಡು ದಿನಗಳ ಕಾಲ ಮುಕ್ತ ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿದ್ದು, ಈ ಪಂದ್ಯಾವಳಿಗೆ ರು. 300 ಶುಲ್ಕದೊಂದಿಗೆ ಮಾ. 1ರೊಳಗೆ ಹೆಸರು ನೋಂದಾಯಿಸಬೇಕು ಎಂದು ಆಯೋಜಕರು ತಿಳಿಸಿದ್ದಾರೆ.
ಪಂದ್ಯಾವಳಿಯನ್ನು ಹಗರಿಬೊಮ್ಮನಹಳ್ಳಿ ಶಾಸಕ ಕೆ. ನೇಮಿರಾಜ ನಾಯ್ಕ ಉದ್ಘಾಟಿಸಲಿದ್ದು, ಜಿಪಂ ಮಾಜಿ ಉಪಾಧ್ಯಕ್ಷ ಪಿ. ಚನ್ನಬಸವನಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜ್ಞಾನಗುರು ವಿದ್ಯಾಪೀಠದ ಕಾರ್ಯದರ್ಶಿ ಎಂ.ಎಂ.ಜೆ. ಹರ್ಷವರ್ಧನ, ಜಿಪಂ ಉಪಾಧ್ಯಕ್ಷ ಪಿ.ಎಚ್. ದೊಡ್ಡರಾಮಣ್ಣ, ತಾಪಂ ಸದಸ್ಯೆ ಯು. ಚನ್ನಮ್ಮ ನಿಂಗಪ್ಪ, ಕಂದಗಲ್ಲು ಗ್ರಾಪಂ ಅಧ್ಯಕ್ಷ ಕೆ.ಪರಸಪ್ಪ, ಗ್ರಾಪಂ ಉಪಾಧ್ಯಕ್ಷೆ ಶಾಂತಮ್ಮ ಹನುಮಂತಪ್ಪ, ತಾಪಂ ಮಾಜಿ ಸದಸ್ಯ ಎಸ್.ಎ. ಹನುಮಂತಪ್ಪ, ಜಿಪಂ ಸದಸ್ಯ ಭೀಮಾನಾಯ್ಕ ಮುಂತಾದವರು ಭಾಗವಹಿಸಲಿದ್ದಾರೆ. ಬತ್ತನಹಳ್ಳಿ ಗ್ರಾಮದ ಉಪನ್ಯಾಸಕ ಪಿ. ಕೊಟ್ರೇಶ್, ಕೆ.ಎನ್. ರಾಮಾಂಜನೇಯ, ದಕ್ಷಿಣಾಮೂರ್ತಿ, ಬಿ.ಬಸವರಾಜ, ಎಂ.ಎಸ್. ಸುಬ್ಬಣ್ಣ, ಶಿಕ್ಷಕ ವಿ. ದುಗ್ಗಪ್ಪ, ಷಣ್ಮುಖಪ್ಪ, ಡಿ. ಮಾಯಪ್ಪ ಮುಂತಾದವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದು, ಗ್ರಾಮದ ಮುಖಂಡರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಮಾ. 2ರಂದು ಶನಿವಾರ ಬೆಳಗ್ಗೆ ಸ್ಥಳೀಯ ಕ್ರೀಡಾಪಟುಗಳು ಕ್ರೀಡಾ ಜ್ಯೋತಿ ತರುತ್ತಿದ್ದು, ಪ್ರಥಮ ಬಹುಮಾನ ರು. 10 ಸಾವಿರ ಹಾಗೂ ಟ್ರೋಫಿ, ದ್ವಿತೀಯ ಬಹುಮಾನ ರು. 5 ಸಾವಿರ ಹಾಗೂ ಟ್ರೋಫಿಗಳನ್ನು ವಿಜೇತ ತಂಡಗಳಿಗೆ ನೀಡಲಾಗುತ್ತದೆ. ಬೆಸ್ಟ್ ರೈಡರ್ ಹಾಗೂ ಕ್ಯಾಚರ್ಗೆ ಆಕರ್ಷಕ ಟ್ರೋಫಿ ನೀಡಲಾಗುತ್ತಿದೆ. ಕೆ.ವಿ. ವೆಂಕಟೇಶ್ ಮೊ.ಸಂ.9632037401ಗೆ ಸಂಪರ್ಕಿಸಿ ಹೆಸರು ನೋಂದಾಯಿಸಲು ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಛತ್ರಪತಿ-9980588709 ಹಾಗೂ ಕಪಿಲ್-8105026233ಗೆ ಸಂಪರ್ಕಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ.