ಕಾರ್ತಿಕ್ ಮನೆ ಮುಂದೆ ಮಕ್ಕಳೊಂದಿಗೆ ಆಡುವಾಡುತ್ತಿದ್ದ, ಪಾರ್ಕ್ಗೆ ಕರೆದುಕೊಂಡು ಹೋಗುತ್ತೇನೆ ಬಾ ಎಂದು ತಂದೆ (ರಘು) ಕರೆದು, ಒಳ್ಳೆ ಬಟ್ಟೆ ತೊಡಿಸಿದಾಗ, ಮಗನಿಗೆ ಅದೇನೋ ಸಂತೋಷ. ಆದರೆ, ಪಾರ್ಕ್ಗೆ ಹೋಗುತ್ತೇನೆಂಬ ಖುಷಿಯಲ್ಲಿ ಸಾವು ಹತ್ತಿರವಾಗುತ್ತದೆ ಎಂಬ ವಾಸ್ತವ ಮಕ್ಕಳಿಗೆ ತಿಳಿದಾಯಿತು. ಪಾರ್ಕ್ ನೆಪದಲ್ಲಿ ಕೊನೆಗೆ ಮಕ್ಕಳು ವಿಷವುಂಡು ಮಸಣ ಸೇರುವಂತಾಗಿದ್ದು, ದುರಂತವೇ ಸರಿ.
ಹೌದು... ಗಂಡ ಹೆಂಡಿರ ಜಗಳದಲ್ಲಿ ಕೂಸುಗಳು ಬಲಿಯಾದ ಘಟನೆ ಗುರುವಾರ ರಾತ್ರಿ ಬಸವನಕುಂಟೆಯಲ್ಲಿ ನಡೆದಿದ್ದು, ಮಕ್ಕಳಿಲ್ಲ ಎಂದು ಗುಡಿ ಗುಂಡಾರಗಳಿಗೆ ಸುತ್ತಾಡುತ್ತಾ, ಹರಕೆ ಹೊತ್ತುಕೊಳ್ಳುವರ ಮಧ್ಯೆ ಇವರಿಗೆ ಮುತ್ತಿನಂಥ ಮೂವರು ಮಕ್ಕಳು ಇದ್ದಾರೆ. ಆದರೆ, ಗಂಡ-ಹೆಂಡಿರ ಮಧ್ಯದ ಜಗಳವೇ ಮಕ್ಕಳ ಭವಿಷ್ಯ ಕಸಿದಿದೆ. ಮಕ್ಕಳು ಮಲಗಿದಂತಿರುವ ದೃಶ್ಯವನ್ನು ನೋಡಿದ ಜನರು ಕಂಬನಿ ಮಿಡಿಯುತ್ತಾ ಮುಂದೆ ಸಾಗುತ್ತಿದ್ದರು. ಇಡೀ ಬಸವನಕುಂಟೆ, ಬತ್ರಿಯೇ ದುಃಖಸಾಗರದಲ್ಲಿ ಮುಳುಗಿಸಿತ್ತು.
ಮಕ್ಕಳಿಗೆ ವಿಷ ಕುಡಿಸಿ ತಾನು ಆತ್ಮಹತ್ಯೆ ಮಾಡಿಕೊಂಡ ಬಸವನಕುಂಟೆಯ ರಘು ಎಂಬಾತನಿಗೆ ಪೂಜಾ, ಕಾರ್ತಿಕ್, ವೈಷ್ಣವಿ ಎಂಬ ಮೂರು ಮಕ್ಕಳಿದ್ದರು. ದೂರಿನ ಪ್ರಕಾರ ಹೆಂಡತಿಯ ತಾಯಿ ಚುನಾವಣೆಗೆ ನಿಂತಿದ್ದು, ಹೆಂಡತಿ ರೇಖಾ ಪ್ರಚಾರಕ್ಕೆ ಹೋಗದಂತೆ ಹೇಳಿದ್ದಾನಂತೆ ಎಂದು ದೂರಿನಲ್ಲಿ ರಘುವಿನ ತಾಯಿ ತಿಳಿಸಿದ್ದಾಳೆ. ಆದರೆ, ಸಾವಿಗೆ ನಿಖರವಾದ ಕಾರಣ ಪೊಲೀಸರ ತನಿಖೆಯಿಂದ ತಿಳಿಯಬೇಕಾಗಿದೆ.
ಮರಣ ಪತ್ರ ಬರೆದ ರಘು: ಮಕ್ಕಳಿಗೆ ವಿಷಯ ಕುಡಿಸಿದ ನಂತರ ರಘು ಅವರು ಮರಣಪತ್ರವನ್ನು ಬರೆದು, ನನ್ನ ಸಾವಿಗೆ ನಾನೇ ಕಾರಣನಾಗಿದ್ದೇನೆ, ನನಗೆ ಜೀವನದಲ್ಲಿ ಬದುಕುವ ಶಕ್ತಿ ಇಲ್ಲ, ನಾನು, ಮಕ್ಕಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದೇವೆ. ನನ್ನದು ಕೊನೆ ಆಸೆ ಈಡೇರಿಸಿ, ನನ್ನ ಅಂತಿಮ ಸಂಸ್ಕಾರವನ್ನು ನಮ್ಮ ಸ್ನೇಹಿತರು ಹಾಗೂ ಬಂಧು-ಬಳಗದವರು ಮಾಡಬೇಕೆಂಬುದು ಪತ್ರ ಬರೆದಿರುವುದು ಕುಟುಂಬವನ್ನು ಮತ್ತಷ್ಟು ದುಃಖದ ಮಡುವಿನಲ್ಲಿ ಬೀಳುವಂತೆ ಆಗಿತ್ತು. ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಮರಣಪತ್ರ ಬರೆದಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ಸಮಸ್ಯೆಗೆ ಪರಿಹಾರ ಸಾವಲ್ಲ: ಎಲ್ಲರ ಕುಟುಂಬದಲ್ಲಿಯೂ ಸಹಜವಾಗಿ ನೋವು-ನಲಿವುಗಳಿರುತ್ತವೆ. ಇಂತಹ ನೋವು, ಸಮಸ್ಯೆಗಳಿಗೆ ಸಾವೇ ಕಾರಣ ಎಂದು ತಿಳಿಯುವುದು ತಪ್ಪು. ಕುಟುಂಬ ಕಲಹಗಳು ಬಂದಾಗ ಅದನ್ನು ದಿಟ್ಟವಾಗಿ ಎದುರಿಸುವ ಪ್ರಯತ್ನ ಪ್ರತಿಯೊಬ್ಬರಿಂದಾಗಬೇಕು. ಅದನ್ನು ಬಿಟ್ಟು ಸಾವಿಗೆ ಕೊರಳೊಡ್ಡುವುದು ಸಮಸ್ಯೆಯ ಪರಿಹಾರವಲ್ಲ. ಇದೀಗ ರಘುವಿನ ಸಾವಿನಿಂದ ಅವರ ಕುಟುಂಬದ ದುಃಖ ಇಮ್ಮಡಿಯಾಯಿತೇ ಹೊರತು ಸಮಸ್ಯೆ ಪರಿಹಾರವಾಗಲಿಲ್ಲ. ಮಕ್ಕಳಿಗೆ ವಿಷವುಣಿಸಿದ್ದು, ಟೀಕೆಗೆ ಕಾರಣವಾಯಿತೇ ವಿನಃರಘುವಿನ ಕಾರ್ಯಕ್ಕೆ ಯಾರ ಸಹಮತವಿಲ್ಲ.
ಮುಗಿಲು ಮುಟ್ಟಿದ ಆಕ್ರಂದನ: ಬಸವನಕುಂಟೆ, ಬತ್ರಿ ಸೇರಿದಂತೆ ನಗರದ ಸಾವಿರಾರು ಜನರು ಇಂತಹ ಹೃದಯ ವಿದ್ರಾವಕ ಘಟನೆಗೆ ಮಮ್ಮಲ ಮರುಗಿದ್ದಾರೆ. ವಿಮ್ಸ್ಗೆ ಭೇಟಿ ನೀಡಿ, ಮಕ್ಕಳು ಸಾವಿನ ಮುಖ ನೋಡಿ, ಕಂಬನಿ ಮಿಡಿಯದವರೇ ಇಲ್ಲ. ಬಳ್ಳಾರಿ ಶಾಸಕ ಜಿ. ಸೋಮಶೇಖರ ರೆಡ್ಡಿ, ಜೆಡಿಎಸ್ ಯುವ ಮುಖಂಡ ಭರತ ರೆಡ್ಡಿ ಅವರು ವಿಮ್ಸ್ಗೆ ಭೇಟಿ ನೀಡಿ, ಘಟನೆಯ ಬಗ್ಗೆ ಖೇದ ವ್ಯಕ್ತಪಡಿಸಿದ್ದಾರೆ. ಇನ್ನ ರಘು, ರೇಖಾ ಕುಟುಂಬ ಆಕ್ರಂದನ ಮುಗಿಲು ಮುಟ್ಟಿತ್ತು. ವಿಮ್ಸ್ನ ಶವಗಾರದ ಮುಂದೆ ಸಾವಿರಾರು ಜನರು ನೆರೆದು ಘಟನೆಯ ಬಗ್ಗೆ ಮರುಕ ವ್ಯಕ್ತಪಡಿಸಿದರು.
ಮರಣಪತ್ರ...
ನನ್ನ ಸಾವಿಗೆ ನಾನೇ ಕಾರಣನಾಗಿದ್ದೇನೆ, ನನಗೆ ಜೀವನದಲ್ಲಿ ಬದುಕುವ ಶಕ್ತಿ ಇಲ್ಲ, ನಾನು, ಮಕ್ಕಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದೇವೆ. ನನ್ನ ಕೊನೆ ಆಸೆ ಈಡೇರಿಸಿ, ನನ್ನ ಅಂತಿಮ ಸಂಸ್ಕಾರವನ್ನು ನಮ್ಮ ಸ್ನೇಹಿತರು ಹಾಗೂ ಬಂಧು-ಬಳಗದವರು ಮಾಡಬೇಕು.
ಆಕ್ರಂದನ, ಶೋಕ
ವಿಮ್ಸ್ಗೆ ಭೇಟಿ ನೀಡಿ, ಮಕ್ಕಳು ಸಾವಿನ ಮುಖ ನೋಡಿ, ಕಂಬನಿ ಮಿಡಿಯದವರೇ ಇಲ್ಲ. ಬಳ್ಳಾರಿ ಶಾಸಕ ಜಿ. ಸೋಮಶೇಖರ ರೆಡ್ಡಿ, ಜೆಡಿಎಸ್ ಯುವ ಮುಖಂಡ ಭರತ ರೆಡ್ಡಿ ಅವರು ವಿಮ್ಸ್ಗೆ ಭೇಟಿ ನೀಡಿ, ಘಟನೆಯ ಬಗ್ಗೆ ಖೇದ ವ್ಯಕ್ತಪಡಿಸಿದ್ದಾರೆ.
ಸ್ಪಷ್ಟವಾಗದ ಕಾರಣ
ದೂರಿನ ಪ್ರಕಾರ ಹೆಂಡತಿಯ ತಾಯಿ ಚುನಾವಣೆಗೆ ನಿಂತಿದ್ದು, ಹೆಂಡತಿ ರೇಖಾ ಪ್ರಚಾರಕ್ಕೆ ಹೋಗದಂತೆ ಹೇಳಿದ್ದಾನಂತೆ ಎಂದು ದೂರಿನಲ್ಲಿ ರಘುವಿನ ತಾಯಿ ತಿಳಿಸಿದ್ದಾಳೆ. ಆದರೆ, ಸಾವಿಗೆ ನಿಖರವಾದ ಕಾರಣ ಪೊಲೀಸರ ತನಿಖೆಯಿಂದ ತಿಳಿಯಬೇಕಾಗಿದೆ.