ಬಳ್ಳಾರಿ

ಐತಿಹಾಸಿಕ ಬಾವಿಗಿಲ್ಲ ರಕ್ಷಣೆ

ಕನ್ನಡಪ್ರಭ ವಾರ್ತೆ, ಹಗರಿಬೊಮ್ಮನಹಳ್ಳಿ, ಆ. 4
ತಾಲೂಕಿನ ಐತಿಹಾಸಿಕ ಬಂಡೆರಂಗನಾಥಸ್ವಾಮಿ ದೇವಸ್ಥಾನದ ಬಳಿ ಇರುವ ಇತಿಹಾಸ ಪ್ರಸಿದ್ಧ ಒಬಳಾನಾಯಕನ ಬಾವಿ ನಿರ್ಲಕ್ಷ್ಯಕ್ಕೆ  ಗುರಿಯಾಗಿದ್ದು, ಇತಿಹಾಸಕಾರರಿಗೆ, ಸಂಶೋಧಕರಿಗೆ ಮಾಹಿತಿಗಳ ಆಗರವಾಗಬೇಕಿದ್ದ ಬಾವಿ ಮುಳ್ಳು ಕಂಟಿಗಳಿಂದ ಆವೃತವಾಗಿದೆ.
ಪಾಳೆಗಾರರ ಕಾಲದಲ್ಲಿ ನಿರ್ಮಿಸಿದ್ದ ಈ ಒಬಳಾನಾಯಕ ಬಾವಿಯನ್ನು ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ ಹಾಗೂ ಸ್ಥಳೀಯ ಆಡಳಿತಗಳು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಇದರ ಪರಿಣಾಮ ಮಹಾ ವಿಷ್ಣುವಿನ ಹಲವು ಅವತಾರಗಳನ್ನು ಒಳಗೊಂಡಂತೆ ಸುಂದರ ಕೆತ್ತನೆ ಹೊಂದಿರುವ ಒಬಳಾನಾಯಕನ ಬಾವಿ ಈಗ ಮುಳ್ಳಿನ ಗಿಡ ಪೊದೆಗಳ, ಆಲದಮರದ ಬೇರುಗಳ ಅತಿಕ್ರಮಣಕ್ಕೆ ಗುರಿಯಾಗಿ ತನ್ನ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ.
ನಾಡಿನ ಇತರೆ ಐತಿಹಾಸಿಕ ಸ್ಮಾರಕಗಳಿಗೆ ದನ, ಜಾನುವಾರು, ಜನರು ಕಂಟಕವಾಗಿ ಕಾಡಿದರೆ, ಬಂಡೆರಂಗನಾಥಸ್ವಾಮಿ ಬಳಿಯ ಒಬಳಾನಾಯಕನ ಬಾವಿಗೆ ಜಾಲಿಮುಳ್ಳಿನ ಪೊದೆಗಳು, ಆಲದ ಮರದ ಬೇರುಗಳೇ ಸಮಸ್ಯೆಗೆ ಕಾರಣವಾಗಿವೆ. ವಿಸ್ತಾರವಾಗಿ ಬೆಳೆದಿರುವ ಮುಳ್ಳಿನ ಪೊದೆಗಳು ಐತಿಹಾಸಿಕ ಬಾವಿಯನ್ನೆ ಮುಚ್ಚಿದರೆ, ಇನ್ನು ಬಾವಿಯ ಗೋಡೆ, ಕಟ್ಟಡಗಳ ಸಂದಿಗೊಂದಿಗಳಲ್ಲಿ ಅಳಕ್ಕೆ ಇಳಿದಿರುವ ಆಲದ ಬೇರುಗಳು ಬಾವಿಯ ಅಸ್ತಿತ್ವವನ್ನೆ ನುಂಗುವ ಭೀತಿಯಲ್ಲಿ ಬೃಹದಾಕಾರವಾಗಿ ಬೆಳೆದಿವೆ.  ಆದರೆ ಇಲ್ಲಿಗೆ ಬರುವ ಜನ ಬಾವಿಯ ದಡದ ಮೇಲೆ ನಿಂತು ಮುಳ್ಳಿನ ಪೊದೆಯಲ್ಲಿ ಮರೆಯಾಗಿರುವ ಒಬಳಾನಾಯಕ ಬಾವಿ ನೋಡಿ ವಿಸ್ಮಯಗೊಳ್ಳುವುದಂತು ಸತ್ಯ.
- ಹುಳ್ಳಿ ಪ್ರಕಾಶ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT