ಕನ್ನಡಪ್ರಭ ವಾರ್ತೆ, ಹೊಸಪೇಟೆ, ಆ. 4
ತುಂಗಭದ್ರಾ ಜಲಾಶಯದಿಂದ ಸೋಮವಾರ 33 ಕ್ರಸ್ಟಗೇಟ್ಗಳ ಮೂಲಕ 1.90 ಲಕ್ಷ ಕ್ಯುಸೆಕ್ ನೀರು ನದಿಗೆ ಬಿಡಲಾಗಿದೆ.
ಭಾನುವಾರ ಮಧ್ಯಾಹ್ನದಿಂದ ಸೋಮವಾರ ರಾತ್ರಿವರೆಗೂ 1,90 ಲಕ್ಷ ಕ್ಯುಸೆಕ್ ನೀರು ನದಿಗೆ ಬಿಡಲಾಗಿದೆ ತುಂಗಭದ್ರಾ ಜಲಾಶಯದ 33 ಕ್ರಸ್ಟ್ಗೇಟ್ಗಳನ್ನು ನಾಲ್ಕುವರೆ ಅಡಿ ಎತ್ತಿರಿಸಿದ್ದು, ಉಳಿದ 5 ಗೇಟ್ಗಳನ್ನು ಒಂದುವರೆ ಅಡಿ ಎತ್ತರಿಸುವ ಮೂಲಕ ತುಂಗಭದ್ರಾ ಜಲಾಶಯದಿಂದ 1.90 ಲಕ್ಷ ಕ್ಯುಸೆಕ್ ನೀರು ನದಿಗೆ ಬಿಡಲಾಗಿದೆ.
ಭಾನುವಾರದಿಂದ ಸೋಮವಾರ ರಾತ್ರಿ ವರೆಗೂ ತುಂಗಭ್ರದಾ ಜಲಾಶಯಕ್ಕೆ 1.70 ಲಕ್ಷ ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ.