ಬಳ್ಳಾರಿ

ಪ್ರಚಾರಕ್ಕೆ ಮಾತ್ರ ನಾವು ಬೇಕೆ?

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 4
ಬರೀ ಚುನಾವಣೆ ವೇಳೆ ಮಾತ್ರ ನಾವು ನೆನಪಿಗೆ ಬರುತ್ತೇವೆ. ಉಳಿದ ದಿನಗಳಲ್ಲಿ ನಮ್ಮನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದ್ದು, ಅಭ್ಯರ್ಥಿ ಆಯ್ಕೆ ವಿಷಯದಲ್ಲೂ ಇದೇ ಧೋರಣೆ ಅನುಸರಿಸಲಾಗಿದೆ ಎಂದು ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತಾಪಂ ಸದಸ್ಯ ಅಲ್ಲಂಬಾಷಾ, ಕಾರ್ಯಕಾರಿಣಿ ಸದಸ್ಯ ಜಿ.ಆರ್. ಭೀಮನಗೌಡ, ತಾಪಂ ಮಾಜಿ ಉಪಾಧ್ಯಕ್ಷ ವಿಜಯಕುಮಾರಗೌಡ, ಎಚ್. ಲಿಂಗಣ್ಣ ಪೂಜಾರಿ ಹಾಗೂ ಇತರೆ ಕಾರ್ಯಕರ್ತರು ಮಾತನಾಡಿ, ಬಳ್ಳಾರಿ ಗ್ರಾಮಾಂತರ ಭಾಗದ ಹಲಕುಂದಿ, ಮಿಂಚೇರಿ, ಎಸ್.ಜಿ. ಕೋಟೆ, ಹೊನ್ನಳ್ಳಿ, ಹೊನ್ನಳ್ಳಿ ತಾಂಡಾ, ಬೆಳಗಲ್ಲು, ಬೆಳಗಲ್ಲು ತಾಂಡಾ, ಜಾನೆಕುಂಟೆ, ಹರಗಿನಡೋಣಿ ಗ್ರಾಮಗಳ ಕಾರ್ಯಕರ್ತರಾದ ನಾವು 25 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿದ್ದೇವೆ. ಈ ಗ್ರಾಮಗಳ ಕಾರ್ಯಕರ್ತನ್ನು ಈವರೆಗೂ ನಾಮನಿರ್ದೇಶಕರನ್ನಾಗಿ ನೇಮಕ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಸ್ತುತ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲೂ ಈ ನಿರ್ಲಕ್ಷ್ಯ ಧೋರಣೆ ಮುಂದುವರೆದಿದೆ. ಪಕ್ಷದ ಅಭ್ಯರ್ಥಿ ಯಾರು ಎಂದು ಪತ್ರಿಕೆ, ಮಾಧ್ಯಮಗಳ ಮೂಲಕ ತಿಳಿದುಕೊಳ್ಳಬೇಕಿದೆಯೇ ವಿನಃ ಈ ಬಗ್ಗೆ ಕನಿಷ್ಠ ಮಾಹಿತಿಯು ಸಹ ನಮಗೆ ತಿಳಿದಿಲ್ಲ. ಪಕ್ಷದಿಂದ ಕಣಕ್ಕಿಳಿಸಿದ ಅಭ್ಯರ್ಥಿಯ ಪರ ಪ್ರಚಾರ, ಮತಕ್ಕಾಗಿ ಮಾತ್ರ ನಾವು ಬೇಕೆ ಎಂದು ಅವರು ಪ್ರಶ್ನಿಸಿದರು.
ಬಳ್ಳಾರಿ ತಾಲೂಕಿನ ಹಲಕುಂದಿ, ಮಿಂಚೇರಿ, ಎಸ್.ಜೆ.ಕೋಟೆ, ಹೊನ್ನಳ್ಳಿ, ಬೆಳಗಲ್ಲು ಈ ಐದು ಗ್ರಾಮಗಳಲ್ಲೂ ಕುಡಿವ ನೀರಿನ ಅಭಾವವಿದ್ದು, ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಿಂಚೇರಿಯಲ್ಲಿ ಕೆರೆ ನಿರ್ಮಾಣವಾಗಿ 6 ವರ್ಷ ಕಳೆದರೂ ಈವರೆಗೂ ಕೆರೆಗೆ ನೀರಿಲ್ಲ. ಪರಿಸ್ಥಿತಿ ಹೀಗಿರುವಾಗ ನಾವು ಜನರ ಬಳಿ ತೆರಳಿ ಹೇಗೆ ಮತ ಕೇಳಬೇಕು ಎಂದರು.
ಪಕ್ಷದ ಹಿರಿಯ ಮುಖಂಡ ಅಲ್ಲಂ ವೀರಭದ್ರಪ್ಪ, ಕೆ.ಸಿ. ಕೊಂಡಯ್ಯ, ಎನ್. ಪ್ರತಾಪರೆಡ್ಡಿ, ದಿವಾಕರ ಬಾಬು ಸೇರಿದಂತೆ ಇತರೆ ಅನೇಕ ನಾಯಕರಿಗೂ ಸೂಕ್ತ ಸ್ಥಾನಮಾನ, ಅಧಿಕಾರ ನೀಡಬೇಕು ಹಾಗೂ ಈ ಭಾಗದ ಹಿರಿಯ ಕಾರ್ಯಕರ್ತರಿಗೆ ನಾಮನಿರ್ದೇಶನ ಮಾಡಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.
ತಮ್ಮ ಈ ಎಲ್ಲ ಬೇಡಿಕೆಗಳ ಕುರಿತು ಇಂಧನ ಸಚಿವ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್,  ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆಂಜನೇಯುಲು ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗುವುದು ಎಂದರು.
ಕಾಂಗ್ರೆಸ್ ಕಾರ್ಯಕರ್ತರಾದ ಎಚ್.ಆರ್. ಶಿವಶಂಕರ್, ಎಸ್.ಜೆ. ಕೋಟೆ, ಕೆ.ಜೆ.ದೇವರಾಜ, ಮಿಂಚೇರಿಯ ಮೆಕಾನಿಕ್ ರಾಜಾಸಾಬ್, ಕೃಷ್ಣಾನಾಯಕ್ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಕಾಂಗ್ರೆಸ್ನಲ್ಲಿ ಭಿನ್ನಮತ ಇಲ್ಲ: ಡಿಕೆಶಿ
ಬಳ್ಳಾರಿ: ನಾನು ಬಳ್ಳಾರಿಗೆ ಬಂದಿರುವುದು ವಿಜಯ ಘಳಿಗೆಯಲ್ಲಿ. ಪ್ರತಿ ಘಳಿಗೆಯೂ ಯಶಸ್ಸಿನ ಗಳಿಕೆ ಕಾಣುತ್ತಿದ್ದೇನೆ ಎಂದು ಬಳ್ಳಾರಿ ಗ್ರಾಮೀಣ ಉಪಚುನಾವಣೆಯ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿರುವ ಡಿ.ಕೆ. ಶಿವಕುಮಾರ್ ಹೇಳಿದರು.
ಸೋಮವಾರ ನಗರದಲ್ಲಿ ಕನಕದುರ್ಗಮ್ಮ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಸಮಸ್ಯೆ ಇಲ್ಲ. ಎಲ್ಲ ಭಿನ್ನಾಭಿಪ್ರಾಯಗಳನ್ನು ದೂರ ಮಾಡಲು ಯತ್ನಿಸುತ್ತಿದ್ದೇನೆ. ಬಳ್ಳಾರಿಗಿರುವ (ಕಾಂಗ್ರೆಸ್) ಭಿನ್ನಾಭಿಪ್ರಾಯ ದೂರ ಮಾಡುವಂತೆ ದೇವಿಯಲ್ಲಿ ಪ್ರಾರ್ಥನೆ ಮಾಡಲು ಬಂದಿದ್ದೇನೆ ಎಂದರು.
ಪ್ರಚಾರ ಆರಂಭ: ಕಳೆದೆರಡು ದಿನಗಳಿಂದ ಸಚಿವ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ನಲ್ಲಿನ ಭಿನ್ನಮತ ಶಮನ ಮಾಡುವ ನಿಟ್ಟಿನಲ್ಲಿ ಮುನಿಸಿಕೊಂಡಿರುವ ಮುಖಂಡರ ಮನೆಗಳಿಗೆ ಭೇಟಿ ನೀಡಿ ಮಾತುಕತೆ ನಡೆಸಿರುವ ಅವರು, ಮುಖಂಡರ ಸಭೆಯನ್ನು ಕರೆದು ಚರ್ಚಿಸುವ ಮೂಲಕ ಎಲ್ಲರ ಮನವೊಲಿಸುವ ಲಕ್ಷಣ ಕಂಡುಬಂತು.
ಸ್ಥಳೀಯರಿಗೆ ಟಿಕೆಟ್ ಕೊಟ್ಟಿಲ್ಲ ಎಂದು ಕಾಂಗ್ರೆಸ್ ಕಚೇರಿಯನ್ನು ಧ್ವಂಸ ಮಾಡಿದ್ದ ಅಸುಂಡಿ ಹೊನ್ನೂರಪ್ಪ, ಸ್ವತಂತ್ರಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ವಿ.ಕೆ. ಬಸಪ್ಪ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  ಅಭ್ಯರ್ಥಿ ಎನ್.ವೈ. ಗೋಪಾಲಕೃಷ್ಣ, ಪಿ.ಟಿ. ಪರಮೇಶ್ವರ ನಾಯಕ್, ಮಾಜಿ ಸಂಸದ ಕೆ.ಸಿ. ಕೊಂಡಯ್ಯ, ಅಲ್ಲಂ ವೀರಭದ್ರಪ್ಪ ಪೂಜೆಯಲ್ಲಿ ಭಾಗವಹಿಸಿದ್ದರು. ನಂತರ ಕಾಂಗ್ರೆಸ್ ಮುಖಂಡರು ರೂಪನಗುಡಿ, ಬಳ್ಳಾರಿ ಕೌಲ್ಬಜಾರ್ ಹಾಗೂ ಮೋಕಾ ಪ್ರದೇಶಕ್ಕೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT