ಬಳ್ಳಾರಿ

ವರಿಷ್ಠರ ಆದೇಶದ ಮೇರೆಗೆ ಬೆಂಬಲ

ಬಳ್ಳಾರಿ: ಬಳ್ಳಾರಿ ಗ್ರಾಮಾಂತರ ಉಪಚುನಾವಣೆಯಲ್ಲಿ ರಾಜ್ಯ ಮುಖಂಡರ ಆದೇಶ ಬರುವವರೆಗೂ ಯಾವುದೇ ಪಕ್ಷವನ್ನು ಬೆಂಬಲಿಸಲ್ಲ ಎಂದು ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಂಡ್ರಿಗಿ ನಾಗರಾಜ್ ತಿಳಿಸಿದರು.
ಅವರು ನಗರದ ಪಕ್ಷದ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಜೆಡಿಎಸ್ ಉಪ ಚುನಾವಣೆಯಲ್ಲಿ ಯಾವ ಪಕ್ಷವನ್ನು ಬೆಂಬಲಿಸಬೇಕೆಂಬುದರ ಕುರಿತು ಈಗಾಗಲೇ ಸಂಗ್ರಹಿಸಿದ ಕಾರ್ಯಕರ್ತರ ಅಭಿಪ್ರಾಯಗಳನ್ನು ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ದೇವೇಗೌಡರಿಗೆ ಕಳುಹಿಸಲಾಗಿದೆ. ಹೀಗಾಗಿ ಪಕ್ಷದ ಮುಖಂಡರಿಂದ ಆದೇಶ ಬರುವವರೆಗೂ ಯಾವುದೇ ಪಕ್ಷವನ್ನು ಬೆಂಬಲಿಸಲ್ಲ ಎಂದು ಹೇಳಿದರು.
ಮೀನಳ್ಳಿ ತಾಯಣ್ಣ, ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಕುಡತಿನಿ ಶ್ರೀನಿವಾಸ್ ಮಾತನಾಡಿದರು.  ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಪಿ.ಎಸ್. ಸೋಮಲಿಂಗನಗೌಡ, ಪಕ್ಷದ ಯುವ ಅಧ್ಯಕ್ಷ ಶ್ರೀಕಾಂತರೆಡ್ಡಿ, ಕಾರ್ಯದರ್ಶಿ ಡಾ. ಪಿ. ಜಗದೀಶ್ವರರೆಡ್ಡಿ ಹಾಗೂ ಕಾರ್ಯಕರ್ತರಾದ ಮಿಂಚು ಶ್ರೀನಿವಾಸ್, ಎಸ್. ವಿಘ್ನೇಶ್, ವಿಜಯಕುಮಾರಿ, ಮಂಜುನಾಥ ಗೌಡ, ಲಕ್ಷ್ಮಿಕಾಂತ ರೆಡ್ಡಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Assam: ಶಾಸಕಾಂಗ ಪಕ್ಷದ ನಾಯಕರಾಗಿ Himanta Biswa Sarma ಆಯ್ಕೆ, ಸತತ 2ನೇ ಬಾರಿಗೆ ಸಿಎಂ!

“ಜನರಿಗೆ ದ್ರೋಹ ಮಾಡುವುದೇ ಕಾಂಗ್ರೆಸ್ ಕೆಲಸ”, ಜನರ ಸಮಸ್ಯೆಗಿಂತ ಅಧಿಕಾರದ ಜಗಳವೇ ಮುಖ್ಯವಾಗಿದೆ: ಪ್ರಧಾನಿ ಮೋದಿ ವಾಗ್ದಾಳಿ

“ನನ್ನ ಹೃದಯದಲ್ಲಿ ನೆಲೆಸಿರುವ ಪ್ರೀತಿಯ ಜನರೇ…”: ಭಾವನಾತ್ಮಕ ಭಾಷಣದೊಂದಿಗೆ ಆಡಳಿತ ಆರಂಭಿಸಿದ ಸಿಎಂ ವಿಜಯ್, ಉಚಿತ ವಿದ್ಯುತ್ ಯೋಜನೆಗೆ ಅನುಮೋದನೆ..!

'ಯಾರಿಗೂ ಭಯ ಅನ್ನೋದೆ ಇಲ್ಲ.. ಜೈಲಲ್ಲಿ ಕೂತ್ಕೋ ಬೇಕಾಗುತ್ತೆ': Yuzvendra Chahal ವಿಮಾನದಲ್ಲೇ ವೇಪಿಂಗ್ ಘಟನೆ ಕುರಿತು ಮಾಜಿ ಆಟಗಾರನ ಖಡಕ್ ಎಚ್ಚರಿಕೆ!

ಸಚಿವ ಸುಧಾಕರ್ ನಿಧನ: ಚಿತ್ರದುರ್ಗ ಜಿಲ್ಲೆಗೆ ಸರ್ಕಾರಿ ರಜೆ ಘೋಷಣೆ; 3 ದಿನ ರಾಜ್ಯಾದ್ಯಂತ ಸಂತಾಪ- ಸರ್ಕಾರ ಆದೇಶ

SCROLL FOR NEXT