ಹೊಸಪೇಟೆ: ಯುವಶಕ್ತಿಗೆ ಕ್ರೀಡೆಗಳು ಬಹಳ ಮುಖ್ಯವಾಗಿವೆ. ಕ್ರೀಡೆಗಳಿಂದ ದೈಹಿಕ ಹಾಗೂ ಮಾನಸಿಕವಾಗಿ ಸಧೃಢವಾಗುತ್ತದೆ ಎಂದು ತಾಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮುಕ್ತಿಯಾರ್ ಪಾಷಾ ಹೇಳಿದರು.
ತಾಲೂಕಿನ ಕಮಲಾಪುರ ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಹೊಸಪೇಟೆ ಕ್ಷೇತ್ರ ಶಿಕ್ಷಣ ಕಾರ್ಯಾಲಯ ಹಾಗೂ ಕಮಲಾಪುರ ಕ್ರೀಡಾಭಿಮಾನಿಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳ 42ನೇ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಕ್ಷೇತ್ರ ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಎ.ಎನ್. ಸುಧಾಕರ ಮಾತನಾಡಿ, ಕ್ರೀಡೆ ಮಕ್ಕಳ ಅವಿಭಾಜ್ಯ ಅಂಗ ಎಂದರು.
ಶಿಕ್ಷಕರ ರಾಜ್ಯ ಪರಿಷತ್ ಸದಸ್ಯ ವೆಂಕಟೇಶ್ ರೆಡ್ಡಿ, ಹಂಪಿ ಡಿವೈಎಸ್‌ಪಿ ಬಿ.ಎನ್. ಲಾವಣ್ಯ, ಪಪಂ ಮುಖ್ಯಾಧಿಕಾರಿ ಉಮೇಶ್ ಕೆ. ಹಿರೇಮಠ, ಉಪಾಧ್ಯಕ್ಷೆ ಗಂಗಮ್ಮ, ಸ್ಥಳೀಯ ಮುಖಂಡರಾದ ಗೋಪಾಲ್, ಬಿ.ಆರ್. ಮಳಲಿ, ಅಬ್ದುಲ್ ಜಂತೆ, ಹನುಮಂತ, ಮರ್ದಾನ್, ಶಂಕರ, ಶಿವರಾಮ್, ನಾರಾಯಣಪ್ಪ, ಹುಲುಗಪ್ಪ, ಲೋಕಭಿರಾಮ್, ವಲಯ ಮಟ್ಟದ ಕ್ರೀಡಾಕೂಟ ಸಮಿತಿ ಕೋಶಾಧ್ಯಕ್ಷ ಅನ್ವರ್, ಕಾರ್ಯದರ್ಶಿ ಶಿವುಕುಮಾರ್ ಇದ್ದರು. ಶಿವುಕುಮಾರ್ ಸ್ವಾಗತಿಸಿದರು. ಹೊನ್ನಪ್ಪ ವಂದಿಸಿದರು. ಎಲ್. ಹಾಲ್ಯಾ ನಾಯ್ಕ ನಿರೂಪಿಸಿದರು.