ಹೊಸಪೇಟೆ: ತಾಲೂಕಿನ ಕಮಲಾಪುರ ಹೋಬಳಿಯ ಅಂಗವಿಕಲರಿಗೆ ಮಾಸಾಶನ ನೀಡಬೇಕು ಹಾಗೂ ಮತ್ತಿತರ ಬೇಡಿಕೆಗಳ ಈಡೇರಿಕೆಗಾಗಿ ತಾಲೂಕಿನ ಗ್ರಾಮೀಣ ವಿಕಲಚೇತನರ ಸಂಘದ ಮುಖಂಡರು ಒತ್ತಾಯಿಸಿ ತಾಲೂಕು ಕಚೇರಿ ಮುಂದೆ ಬುಧವಾರ ಅನಿರ್ದಿಷ್ಟ ಕಾಲದ ಉಪವಾಸ ಸತ್ಯಾಗ್ರಹ ನಡೆಸಿದರು.
ಕಮಲಾಪುರ ಹೋಬಳಿಯಲ್ಲಿ 400ಕ್ಕೂ ಹೆಚ್ಚು ಅಂಗವಿಕಲರಿದ್ದು, ಅವರಿಗೆ ಮಾಸಾಶನ ಮಂಜೂರು ಮಾಡಬೇಕು. ಮೋಟಾರ್ ಚಾಲಿತ ವಾಹನಗಳು ಗ್ರಾಪಂ, ಪಪಂಗಳಲ್ಲಿ ಶೇ. 3ರಷ್ಟು ಅನುದಾನ ಅಂಗವಿಕಲರ ಅಭಿವೃದ್ಧಿಗೆ ಬಳಿಸುತ್ತಿಲ್ಲ. ಈ ಅನುದಾನ ಬೇರೆ ಉದ್ದೇಶಕ್ಕೆ ಬಳಸಲಾಗುತ್ತಿದೆ. ಸರ್ಕಾರ ಮಧ್ಯೆ ಪ್ರವೇಶಿಸಿ ಅಂಗವಿಕಲರ ಹಕ್ಕುಗಳನ್ನು ದೊರಕಿಸಿ ಕೊಡಬೇಕೆಂದು ಒತ್ತಾಯಿಸಿದರು.
ಸಂಘದ ಮುಖಂಡರಾದ ಜಿ. ಮುಕ್ಕಣ್ಣ, ಕೆ.ಜಿ. ವೆಂಕಟೇಶ್, ಹುಲುಗಪ್ಪ, ಎನ್. ವೆಂಕಟೇಶ್, ಶಿವಗಂಗಮ್ಮ, ಶರಣಮ್ಮ, ಜಿ. ಹುಲುಗಪ್ಪ, ರಫೀಕ್, ರಾಜಾಸಾಬ್, ಹುಸೇನಾಬಿ, ನಾರಾಯಣಪ್ಪ, ಅಂಜಿನಿ, ಅರುಣ ಕುಮಾರ್, ಎನ್. ವೆಂಕಟೇಶ್, ಎಚ್. ಶೇಷು ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.