ಬಳ್ಳಾರಿ

ಕಳಪೆ ಬೀಜ: ಕಾಯಿ ಬಿಡದ ಹೆಸರು

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಜು. 13
ಛಬ್ಬಿ ಗ್ರಾಮದ ರೈತರು ಕೃಷಿ ಇಲಾಖೆಯಲ್ಲಿ ಹೆಸರು ಬೀಜ ಖರೀದಿಸಿ 600 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದು, ಗಿಡಗಳಲ್ಲಿ ಮೊಗ್ಗು, ಹೆಸರು ಕಾಯಿ ಮೂಡಿಲ್ಲ. ಬೆಳೆ ಹಳದಿ ಚುಕ್ಕೆ ರೋಗಕ್ಕೆ ತುತ್ತಾಗಿದೆ.
ಬಿತ್ತನೆ ಬೀಜ ಕಳಪೆಯಾಗಿ, ಬೆಳೆ ನಷ್ಟ ಅನುಭವಿಸಿದ ಬಗ್ಗೆ ಕೃಷಿ ಅಧಿಕಾರಿಗಳ ಗಮನಕ್ಕೆ ತಂದರೂ ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿಲ್ಲ ಎಂದು ಬಿಜೆಪಿ ಮುಖಂಡರಾದ ಜಾನು ಲಮಾಣಿ, ಷಣ್ಮುಖ ಪೂಜಾರ ಆರೋಪಿಸಿದ್ದಾರೆ.
ಭಾನುವಾರ ಹೆಸರು ಬೆಳೆದ ರೈತ ಲಿಂಬಣ್ಣ ಜಾಪಣ್ಣ ಪೂಜಾರ, ವಿ.ಸಿ. ಚಕ್ರಸಾಲಿ, ತುಕಾರಾಮ ಲಮಾಣಿ ಅವರ ಜಮೀನಿಗೆ ಭೇಟಿ ನೀಡಿ, ಹಳದಿ ಮತ್ತು ಕ್ಯಾದಗಿ ರೋಗ ತಗುಲಿರುವ ಹೆಸರು ಬೆಳೆ ಪರಿಶೀಲಿಸಿದ ಅವರು, ರು. 350 ನೀಡಿ ಕೃಷಿ ಇಲಾಖೆ ಖಾತರಿಪಡಿಸಿದ ಬೀಜ ಖರೀದಿಸಿ ಬಿತ್ತನೆ ಮಾಡಿದ್ದು, ಬೀಜ, ಗೊಬ್ಬರ ಖರೀದಿಸಲು, ಕಳೆ ತೆಗೆಯಲು ರು. 20 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವಿವರಿಸಿದರು.
ಕೃಷಿ ಇಲಾಖೆಯೇ ನೀಡಿದ ಗೌರಿಶಂಕರ, ಬೀಜರಾಜ, ವರ್ಣ ಕಂಪನಿಯ ಬೀಜವನ್ನೇ ಖರೀದಿಸಿ ಬಿತ್ತನೆ ಮಾಡಿದ್ದು, ಗಿಡಗಳಲ್ಲಿ ಹೆಸರು ಕಾಯಿಗಳೇ ಕಾಣುತ್ತಿಲ್ಲ. ಭೂಮಿ ಹಸಿಯಾಗಿದ್ದರೂ ಬೆಳೆದ ಫಸಲು ಅರ್ಧಕ್ಕೆ ಕಮರಿ ಬೀಳುತ್ತಿದ್ದು, ಬೀಜ ಪೂರೈಕೆ ಮಾಡಿದ ಕಂಪನಿ ವಿರುದ್ಧ ಶಿಸ್ತು ಕ್ರಮಕ್ಕೆ ಅಧಿಕಾರಿಗಳು ಮುಂದಾಗಬೇಕು. ಹಾನಿಗೊಳಗಾದ ರೈತರಿಗೆ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ರೈತರಾದ ಹನುಮಂತಗೌಡ ಫಕೀರಗೌಡ ಪಾಟೀಲ, ಸುರೇಶ ಬಾಬಣ್ಣ ಮಾಂಡ್ರೆ, ನಾಗಪ್ಪ ನಾಯ್ಕರ, ಮಲ್ಲೇಶ ಲಮಾಣಿ, ಗಂಗವ್ವ ನಾನಪ್ಪ ಲಮಾಣಿ, ಶೇಖಪ್ಪ ಲಮಾಣಿ, ಗಣೇಶ ಲಮಾಣಿ, ತಿಪ್ಪಣ್ಣ ಲಮಾಣಿ,  ಶರಣಪ್ಪ ಬಸವಂತಪ್ಪ ಆರಿ ಮುಂತಾದವರು ಇದ್ದರು.
ಕಳಪೆ ಹೆಸರು ಬೀಜ ಪೂರೈಕೆಯಿಂದ ಬೆಳೆ ಹಾಳಾಗಿರುವುದನ್ನು ರೈತರು ಗಮನಕ್ಕೆ ತಂದಿದ್ದಾರೆ. ರೈತರ ಹೊಲಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಕಳಪೆ ಬೀಜ ಗುರುತಿಸಲು ಕೃಷಿ ವಿಜ್ಞಾನಿಗಳಿಂದಲೂ ಸಮೀಕ್ಷೆ ಮಾಡಿಸುತ್ತೇವೆ. ಸಮಗ್ರ ಮಾಹಿತಿ ಬಂದ ಮೇಲೆ ಸರ್ಕಾರಕ್ಕೆ ವರದಿ ಸಲ್ಲಿಸಿ ರೈತರಿಗೆ ಪರಿಹಾರ ಕೊಡಿಸಲಾಗುವುದು. ಅಲ್ಲದೆ ಕಳಪೆ ಬೀಜ ಸಾಬೀತಾದಲ್ಲಿ ಪೂರೈಕೆ ಮಾಡಿದ ಕಂಪನಿಗಳ ಮೇಲು ಕ್ರಮ ಜರುಗಿಸಲಾಗುವುದು.
   

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್