ಬಳ್ಳಾರಿ

ಮೋದಿ ಪ್ರಮಾಣ: ಬಿಜೆಪಿ ಸಂಭ್ರಮಾಚರಣೆ

ಸಂಡೂರು:  ಭಾರತದ 15ನೇ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಸಂಜೆ ಆರು ಗಂಟೆಗೆ ಪಟ್ಟಣದ ಬಿಜೆಪಿ ಕಚೇರಿ ಬಳಿ ಸೇರಿದ ಮುಖಂಡರು ಹಾಗೂ ಕಾರ್ಯಕರ್ತರು ದುರ್ಗಮ್ಮ ದೇವತೆಗೆ ಪೂಜೆ ಸಲ್ಲಿಸಿ ಬೈಕ್ ರ್ಯಾಲಿ ಮೂಲಕ ಲಕ್ಷ್ಮೀಪುರ, ಕೆಇಬಿ ವೃತ್ತ, ಮರಾಠ ಸಮಾಜ, ಮೇನ್ ಬಜಾರ್, 2ನೇ ವಾರ್ಡ್, ಹಳೇ ಬಸ್ ನಿಲ್ದಾಣ , ಚಪ್ಪರದಹಳ್ಳಿ, ಸ್ಮಯೋರ್ ಕಾಲೋನಿ ಮುಂತಾದ ಕಡೆ ಮೋದಿ ಮತ್ತು ದೇಶದ ಪರ ಘೋಷಣೆಗಳನ್ನು ಕೂಗುತ್ತ ವಿಜಯ ವೃತ್ತದಲ್ಲಿ ಕೇಕ್ ಕತ್ತರಿಸಿ ಪಟಾಕಿ ಸಿಡಿಸಿದರು.
ಈ ವೇಳೆ ತಾಲೂಕು ಬಿಜೆಪಿ ಮುಖಂಡರುಗಳಾದ ಶ್ರೀಕಾಂತ ಗೋಂದಿ, ಶ್ರೀನಿವಾಸ, ಗುಡೇಕೋಟೆ ನಾಗರಾಜ್, ಕೆ.ಎಸ್. ಕುಮಾರಸ್ವಾಮಿ,  ಎಚ್.ಅಂಬರೀಷ್, ಕೆಂಚಪ್ಪ, ಗೆಣತಿಕಟ್ಟೆ ಸುಬ್ಬಣ್ಣ, ಲಕ್ಕಲಹಳ್ಳಿ ಶಿವಣ್ಣ, ಸೋವೆನಳ್ಳಿ ಪುರುಷೋತ್ತಮ, ಶ್ರೀಶೈಲ, ಪಕ್ಕೀರಪ್ಪ,  ರಾಮಘಡ ರಘು, ಆರೋಗ್ಯ ಸ್ವಾಮಿ,  ಕುಮಾರ್ ನಾಯ್ಕ, ಕರವೇ ರಾಜು, ವಿಜಯ ಸಿಂಗ್, ದೌಲತ್ ಪುರ ಹನುಮಂತ್, ಬೆಳ್ಳಿಕಟ್ಟೆ ಕುಮಾರ ಸ್ವಾಮಿ, ಪುರಸಭೆ ಸದಸ್ಯರಾದ ವಸಂತ್‌ಕುಮಾರ್, ಗೋವಿಂದಪ್ಪ, ಮೂರ್ತಿ, ಗೌಳೇರ ಕುಮಾರಸ್ವಾಮಿ, ವಿಜಯರಾಣಿ, ತಿಪ್ಪೇಸ್ವಾಮಿ, ಎಚ್.ಕೆ. ಹಳ್ಳಿ ವಿರೇಶ್, ಷಣ್ಮುಖಪ್ಪ, ಸ್ವಾಮಿಹಳ್ಳಿ ರೆಡ್ಡಿ , ಎನ್‌ಎಂಡಿಸಿ ಕುಮಾರ್ ಇದ್ದರು.
ಕೊಟ್ಟೂರೇಶ್ವರ ಸ್ವಾಮಿಗೆ ವಿಶೇಷ ಪೂಜೆ
ಕೊಟ್ಟೂರು:  ನವದೆಹಲಿಯಲ್ಲಿ 15ನೇ ಪ್ರಧಾನಿಯಾಗಿ ನರೇಂದ್ರ ಮೋದಿ  ಪ್ರಮಾಣ ವಚನ ಗೈಯ್ಯುತ್ತಿದ್ದಂತೆಯೇ ಕೊಟ್ಟೂರಿನ ಶ್ರೀಗುರುಕೊಟ್ಟೂರೇಶ್ವರ ಸ್ವಾಮಿಗೆ ವಿಶೇಷ ಪೂಜೆ ನರೆವೇರಿಸಿ, ದೇವಸ್ಥಾನದ ಗದ್ದುಗೆಗೆ ಸೋಮವಾರ ಸಂಜೆ ಇಲ್ಲಿನ ಬಿಜೆಪಿ ಕಾರ್ಯಕರ್ತರು 101 ತೆಂಗಿನಕಾಯಿಗಳನ್ನು ಒಡೆದು ನಮಿಸಿದರು.
ಬಿಜೆಪಿ ಈ ಬಾರಿ ಅದ್ಭುತ ಜಯಸಾಧಿಸಿ ಕೇಂದ್ರದಲ್ಲಿ ಅಧಿಕಾರ ಪಡೆದುಕೊಳ್ಳುವತ್ತ ಮುಂದಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆಮಾಡಿತ್ತು. ಇದರ ನಿಮಿತ್ತ ಬಿಜೆಪಿ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಿ ಮೋದಿ ಪರ ಜಯಘೋಷಗಳನ್ನು ಕೂಗಿ ಪಟ್ಟಣ ಪ್ರಮುಖ ಬೀದಿಗಳಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿದರು.
ಬಿಜೆಪಿ ಅಧ್ಯಕ್ಷ ಬೋರ್‌ವೆಲ್ ತಿಪ್ಪೇಸ್ವಾಮಿ, ಮುಖಂಡರಾದ ಎಸ್. ತಿಂದಪ್ಪ, ಕೊಟ್ರೇಶ್ ಶಾಮಶೆಟ್ಟಿ, ಸುಧಾಕರಪಾಟೀಲ್, ಚಿರಿಬಿ ಕೊಟ್ರೇಶ್, ಮರಬದ ನಾಗರಾಜ, ವೀರೇಶ್ ಗೌಡ, ಚಟ್ರಕಿ ಬಸವರಾಜ್, ಕೆ.ಎಸ್. ವಿವೇಕಾನಂದಗೌಡ ಮಂಗಾಪುರ ವೀರೇಶ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್