ಬೀದರ್

ಪತ್ನಿ ಸಾವು; ಪತಿಗೆ 2 ವರ್ಷ ಸಜೆ

ಬೀದರ್: ಪತ್ನಿಯ ಆತ್ಮಹತ್ಯೆಗೆ ಕಾರಣನಾದ ಬಿಎಸ್‌ಎನ್‌ಎಲ್ ನೌಕರ ಸೋಲಪುರ ಗ್ರಾಮದ ಕಲ್ಲಪ್ಪ ಎಂಬುವವನಿಗೆ 2ವರ್ಷದ ಸಾದಾ ಸಜೆ ಹಾಗೂ 10 ಸಾವಿರ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
  ಚಾಂಬೋಳ ಗ್ರಾಮದ ಹೇಮಲತಾ ಎಂಬ ಮಹಿಳೆಯನ್ನು ಕಲ್ಲಪ್ಪ ಮದುವೆಯಾಗಿದ್ದು, 2 ಲಕ್ಷ ನಗದು, 5 ತೊಲೆ ಬಂಗಾರ, 50 ಸಾವಿರ ಮೌಲ್ಯದ ಗೃಹ ಉಪಯೋಗಿ ವಸ್ತುಗಳನ್ನು ವರದಕ್ಷಿಣೆ ರೂಪದಲ್ಲಿ ಪಡೆದಿದ್ದಲ್ಲದೆ ಗಂಡು ಮಕ್ಕಳು ಜನಿಸಿಲ್ಲ ಎಂದು ಪತ್ನಿಗೆ ದೈಹಿಕ, ಮಾನಸಿಕ ಕಿರುಕುಳ ನೀಡಿದ್ದು ಇದನ್ನು ಸಹಿಸದೇ ಹೇಮಲತಾ ನೇಣು ಬಿಗಿದುಕೊಂಡು ಕಳೆದ 2011ರ ಡಿಸೆಂಬರ್ 6ರಂದು ಮೃತಪಟ್ಟಿದ್ದಳು.
  ಹೇಮಲತಾ ತಂದೆ ಬಿಚ್ಚಪ್ಪಾ ಅವರು ಬೀದರ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪಿಎಸ್‌ಐ ಶ್ರೀನಿವಾಸ ಅಲ್ಲಾಪುರೆ ಪ್ರಕರಣವನ್ನು ದಾಖಲಿಸಿ ಕೊಂಡಿದ್ದರು. ಸಿಪಿಐ ಬಸವರಾಜ ತೇಲಿ ತನಿಖೆ ಮುಗಿಸಿ ಆಪಾದಿತನ ವಿರುದ್ಧ ಆಪಾದನೆ ಪಟ್ಟಿ ಸಲ್ಲಿಸಿದ್ದರು.
  ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧಿಶರಾದ ಡಾ. ಶಶಿಕಲಾ ಉರಣಕರ ಅವರು ಅಪಾದಿತನು ತಪ್ಪಿತಸ್ಥನೆಂದು ತೀರ್ಮಾನಿಸಿ ಆಪಾದಿತನಿಗೆ 2 ವರ್ಷ ಕಾಲಾವಧಿಯ ಸಾದಾ ಕಾರಾಗೃಹ ಮತ್ತು 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕರು ರಾಮಚಂದ್ರ ಲಮಾಣಿ ವಾದ ಮಂಡಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ