ಬೀದರ್

ತ್ಯಾಗಿಯೇ ನಿಜವಾದ ಪುಣ್ಯಪುರುಷ

ಬಸವಕಲ್ಯಾಣ: ಬಾಳಿಗೆ ಬೆಂಕಿ ಹಚ್ಚಿಕೊಂಡು ಜಗತ್ತಿಗೆ ಬೆಳಕನ್ನು ನೀಡುವವನೇ ನಿಜವಾದ ಪುಣ್ಯ ಪುರುಷನಾಗುತ್ತಾನೆ. ಅಂತಹ ಪುಣ್ಯ ಪುರುಷರಲ್ಲಿ ಬಸವಣ್ಣನವರು ಮಾಡಿದ ತ್ಯಾಗದ ಪ್ರತೀಕ ಮಹತ್ವದ್ದಾಗಿದೆ. ಅದಕ್ಕಾಗಿ ಅವರು ಇಂದಿಗೂ ಜನಮನದಲ್ಲಿ ನೆಲೆಸಿದ್ದಾರೆಂದು ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಹೇಳಿದರು.
 ತಾಲೂಕಿನ ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಆವರಣದಲ್ಲಿ ಭಾನುವಾರ ಸಂಜೆ ಲಿಂ. ಜಗದ್ಗುರು ಬಸವಕುಮಾರ ಶಿವಯೋಗಿಗಳ 37ನೇ ಪುಣ್ಯಸ್ಮರಣೆ ನಿಮಿತ್ತ ಬಸವ ಜಯಂತಿ ಆಚರಣೆ ಶತಮಾನೋತ್ಸವ, ಶರಣ ಸಂಸ್ಕೃತಿ ಉತ್ಸವದ ಬಸವಧರ್ಮ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಶ್ರೀಮಂತಿಕೆ ದೊಡ್ಡದಲ್ಲ ಗುಣ ದೊಡ್ಡದು: ಜಗತ್ತಿನಲ್ಲಿ ಧನ ಸಂಪತ್ತಿಗೆ ಪೂಜೆ ಇಲ್ಲ. ಅಗರ್ಭ ಶ್ರೀಮಂತರ ಫೋಟೊ ಇಟ್ಟು ಯಾರೂ ತಮ್ಮ ಮನೆಗಳಲ್ಲಿ ಪೂಜಿಸುವುದಿಲ್ಲ. ಬಿದ್ದವರನ್ನು ಎತ್ತುವ ಕಾರ್ಯ ಮಾಡುವುದೇ ನಿಜವಾದ ಶರಣ ಸಂಸ್ಕೃತಿ ಎನಿಸಿಕೊಳ್ಳುತ್ತದೆ. ಕೆಳಗಿದ್ದವರನ್ನು ಮೇಲೆತ್ತುವ ಕಾರ್ಯ ಬಸವಣ್ಣನವರು ಮಾಡಿದ್ದರು ಎಂದು ಹೇಳಿದರು.
  ದೀನ ದಲಿತ, ಬಡವರನ್ನು, ನೊಂದವರ ಕಣ್ಣೀರು ಒರೆಸಿದ ಬಸವಣ್ಣನವರ ಗುಣ ನೋಡಿ ನಾವೆಲ್ಲ ಪೂಜಿಸುತ್ತೇವೆ ಹೊರತು, ಯಾವುದೇ ಅಗರ್ಭ ಶ್ರೀಮಂತರ ಭಾವಚಿತ್ರವಿಟ್ಟುಕೊಳ್ಳುವುದಿಲ್ಲ. ಬಸವಣ್ಣನವರಂತೆ ಪೂಜ್ಯ ಸ್ಥಾನದಲ್ಲಿರುವಂತೆ ಬದುಕು ನಡೆಸಬೇಕೆಂದು ಸೇಡಂ ಕರೆ ನೀಡಿದರು.
ಸಂಸ್ಕೃತಿ- ವಿಕೃತಿ ವ್ಯತ್ಯಾಸ: ಜಾನಪದ ಸಾಹಿತಿ ಡಾ. ಶಂಭುಲಿಂಗ ಬಳಿಗಾರ ಮಾತನಾಡಿ, ಸಂಸ್ಕೃತಿಯ ಕಡೆ ಸಾಗದೇ ವಿಕೃತಿಯೆಡೆ ಸಾಗುತ್ತಿರುವ ಯುವಜನಾಂಗ ಶರಣ ಪರಂಪರೆ, ಜಾನಪದ ಪದ್ಧತಿ ಮನವರಿಕೆ ಮಾಡಿಕೊಳ್ಳಬೇಕು. ಹಣ್ಣು ತಿನ್ನೋದು ಪ್ರಕೃತಿ, ಹಣ್ಣು ರಸ ಮಾಡಿ ಕುಡಿಯೋದು ಸಂಸ್ಕೃತಿ, ಅದೇ ಹಣ್ಣು ಹೆಂಡ ಮಾಡಿ ಕುಡಿಯೋದು ವಿಕೃತಿಯೆನಿಸಿಕೊಳ್ಳುತ್ತದೆ ಎಂದರು.
  ಬಸವ ಕೇಂದ್ರ ಬೀದರನ ಅಕ್ಕ ಅನ್ನಪೂರ್ಣ ಮುಖ್ಯ ಅತಿಥಿಗಳಾಗಿ ಮಾತನಾಡಿ, ಜಾನಪದರು ಬಸವಣ್ಣನವರ ಕ್ರಾಂತಿಯನ್ನು ತಮ್ಮ ನುಡಿಗಟ್ಟಿನಲ್ಲಿ ಸೊಗಸಾಗಿ ಸೆರೆ ಹಿಡಿದಿದ್ದಾರೆ. ಕಾಯಕ ಎನ್ನುವ ಪದ ಬಸವಣ್ಣನವರು ಕೊಟ್ಟಿರುವುದರಿಂದ ಕಾಯಕ ಕಲಿಸಿದ ನಾಯಕ ಎಂಬುದು ಜನಪದರು ಬಣ್ಣಿಸುತ್ತಾರೆ ಎಂದರು.
ಹುಲಸೂರು ಶ್ರೀಗಳ ಕಾರ್ಯಕ್ಕೆ ಮೆಚ್ಚುಗೆ: ಇದೇ ವೇಳೆ ಬಸವ ಯೋಗಾಶ್ರವುದ ಸಿದ್ಧರಾಮ ಶರಣರು ಬೆಲ್ದಾಳ, ಶರಣಪ್ಪ ಮಿಠಾರೆ ಮಾತನಾಡಿ, ಬಸವಣ್ಣನವರ ತತ್ವ ಬೇಕು. ಜನರಿಗೆ ಆಚರಣೆ ಬೇಡವಾಗಿದೆ. ಜನಸಾಮಾನ್ಯರಲ್ಲಿ ತಿಳಿವಳಿಕೆ ಸಾಕಷ್ಟು ಬಂದಿದ್ದರೂ ಅದರ ಅಳವಡಿಕೆ ಇಲ್ಲವಾಗಿದೆ. ಸಮಾಜದಲ್ಲಿ ಗತಿಗೆಟ್ಟ ವ್ಯಕ್ತಿಯನ್ನು ತಿದ್ದುವ ಸಂಕಲ್ಪ ತೊಟ್ಟ ಹುಲಸೂರು ಶ್ರೀಗಳ ಉದ್ದೇಶ ಸಮಂಜವಾಗಿದೆ ಎಂದರು.
 ಕಾರ್ಯಕ್ರಮದ ವೇದಿಕೆಯಲ್ಲಿ ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ಗುಂಡಯ್ಯ ತೀರ್ಥ, ಶ್ರೀಮಠದ ಶಿವಾನಂದ ಸ್ವಾಮೀಜಿ ಮಾತನಾಡಿದರು. ಜಿಪಂ ಉಪಾಧ್ಯಕ್ಷೆ ಲತಾ ಹಾರಕೂಡೆ, ಶಿವರಾಜ ನರಶೆಟ್ಟಿ, ಡಾ.ಅರುಣಕುಮಾರ ನರೋಣ್ಕರ್, ಕಸಾಪ ಅಧ್ಯಕ್ಷ ಚಂದ್ರಕಾಂತ ಸ್ವಾಮಿ, ಸಾಯಗಾಂವ ಶಿವಾನಂದ ದೇವರು ಉಪಸ್ಥಿತರಿದ್ದರು.
 ಪ್ರಮುಖರಾದ ರೇವಣಸಿದ್ಧಪ್ಪ ಜಲಾದೆ, ಶಾಂತಪ್ಪ ಜಿ.ಪಾಟೀಲ, ಸುಧೀರ ಕಾಡಾದಿ, ಶಿವರಾಜ ನರಶೆಟ್ಟಿ, ಬಸವರಾಜ ವರಕಲ್ಲೆ, ತಾಪಂ ಸದಸ್ಯೆ ಗಂಗುಬಾಯಿ ಪವಾರ್, ಗ್ರಾಪಂ ಸದಸ್ಯೆ ಸೋನಾಬಾಯಿ ರಾಠೋಡ್ ಇದ್ದರು. ಸುರೇಶ ಚೆನ್ನಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಚಂದ್ರಕಾಂತ ಸ್ವಾಗತಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': 'ಜೈಲರ್ 2' ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!