ಬೀದರ್

ಹಾಳ ಗೋರ್ಟಾ ರಸ್ತೆ ಕಾಮಗಾರಿಗೆ ಚಾಲನೆ

ಭಾಲ್ಕಿ: ತಾಲೂಕಿನ ಹಾಳಗೋರ್ಟಾ ಗ್ರಾಮಕ್ಕೆ ತೆರಳುವ ರಸ್ತೆ ಸಂಚರಿಸಲಾಗದಷ್ಟು ಹದಗೆಟ್ಟಿತ್ತು. ಆದ್ದರಿಂದ ಪಿಎಂಜಿಎಸ್ ಯೋಜನೆ ಅಡಿಯಲ್ಲಿ ರು. 1.69 ಕೋಟಿ ಮಂಜೂರಿ ಮಾಡಿಸಿ, ಸುಗಮ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಸಲಾಗಿದೆ ಎಂದು ಶಾಸಕ ಈಶ್ವರ ಖಂಡ್ರೆ ತಿಳಿಸಿದರು.
  ತಾಲೂಕಿನ ಹಾಳಗೋರ್ಟಾ ಗ್ರಾಮದ ರಸ್ತೆ ಕಾಮಗಾರಿಯ ಚಾಲನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ, ಹಾಳಗೋರ್ಟಾ ಗ್ರಾಮಕ್ಕೆ ತೆರಳುವ ರಸ್ತೆ ಕಾಮಗಾರಿಯನ್ನು ಚಾಲನೆ ನೀಡಲಾಗಿದೆ. ಕಾಮಗಾರಿ ಗುಣಮಟ್ಟದ್ದಾಗಿರಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಹಾಗೂ ಗುತ್ತೆದಾರರಿಗೆ ಸೂಚಿಸಿದರು.
ಅನುಷ್ಠಾನ: ಈ ಸಂದರ್ಭದಲ್ಲಿ ತಾಲೂಕಿನ ಕೆಲ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ತಾಲೂಕಿನ ಕೋಟಗೀರಾ ಗ್ರಾಮದ ಸಣ್ಣ ನೀರಾವರಿ ಇಲಾಖೆ 2011-12ನೇ ಸಾಲಿನ ಎಐಬಿಪಿ ಯೋಜನೆ ಅಡಿಯಲ್ಲಿ ಸೇತುವೆ ಸಹಿತ ಬಂದಾರ ಕಾಮಗಾರಿಯ ಅಡಿಗಲ್ಲು ಸಮಾರಂಭ ನೆರವೇರಿಸಿದರು. ಈ ಕಾಮಗಾರಿಗೆ ಸುಮಾರು ರು. 1.50 ಕೋಟಿ ಅನುದಾನ ಮಂಜೂರಿ ಮಾಡಿಸಲಾಗಿದ್ದು, ಕಾಮಗಾರಿ ಅನುಷ್ಠಾನಗೊಳಿಸಲಾಯಿತು. ಎಸ್‌ಸಿಪಿ ಯೋಜನೆ ಅಡಿಯಲ್ಲಿ ಕೋಟಗೀರಾ ಗ್ರಾಮದ ಎಸ್‌ಸಿ ಓಣಿಯ ಶಂಕರ ದಾಡಗಿ ಅವರ ಮನೆಯಿಂದ ಕಮ್ಯೂನಿಟಿ ಹಾಲ್‌ವರೆಗೆ ರು. 4 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಮಂಜೂರು ಮಾಡಿಸಲಾಗಿದೆ ಎಂದರು.
ಅನುದಾನ: ವಿವಿಧ ತಾಲೂಕಿನ ವಾಂಜರಖೇಡಾ ಗ್ರಾಮದ 5ನೇ ಸುವರ್ಣ ಗ್ರಾಮ ಯೋಜನೆ ಅಡಿಯಲ್ಲಿ ರು. 71.84 ಲಕ್ಷ  ಕಾಮಗಾರಿಗೆ ಚಾಲನೆ ನೀಡಲಾಯಿತು. ಗ್ರಾಮದ್ಯಂತ ಸಿಸಿ ರಸ್ತೆ ನಿರ್ಮಾಣಕ್ಕೆ ರು. 44.78 ಲಕ್ಷ ಸಿಸಿ ಚರಂಡಿ ನಿರ್ಮಾಣಕ್ಕೆಂದು ರು. 13.56 ಲಕ್ಷ ಗ್ರಂಥಾಲಯ ಕಟ್ಟಡ ಒಂದಕ್ಕೆ ರು. 10 ಲಕ್ಷ ತ್ಯಾಜ್ಯ ವಸ್ತು ವಿಲೇವಾರಿ ಹಾಗೂ ಭೂ ಖರೀದಿಗೆ ರು. 1 ಲಕ್ಷ ಸೋಲಾರ್ ವಿದ್ಯುತ್ ರು. 1.50 ಲಕ್ಷ ಐಇಸಿ ರು. 1ಲಕ್ಷ ಹೀಗೆ ಒಟ್ಟು ರು. 71.84 ಲಕ್ಷ ವೆಚ್ಚದಲ್ಲಿ ಕಾಮಗಾರಿಗಳಿಗೆ ಶಾಸಕ ಈಶ್ವರ ಖಂಡ್ರೆ ಚಾಲನೆ ನೀಡಿದರು.
ವಿವಿಧ ಕಾಮಗಾರಿ: ತಾಲೂಕಿನ ಕೊಂಗಳಿ ಗ್ರಾಮದಲ್ಲಿ 5ನೇ ಹಂತದ ಸುವರ್ಣ ಗ್ರಾಮ ಯೋಜನೆ ಹಂತದಲ್ಲಿ ರು. 53.11 ಲಕ್ಷ ಕಾಮಗಾರಿಗೆ ಚಾಲನೆ ನೀಡಿ, ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣ, ಸಿಸಿ ಚರಂಡಿ ನಿರ್ಮಾಣ, ಗ್ರಂಥಾಲಯ ಕಟ್ಟಡ, ತ್ಯಾಜ್ಯ ವಸ್ತು ವಿಲೇವಾರಿ, ಸೋಲಾರ್ ವಿದ್ಯುತ್ ಹಾಗೂ ಹಲವು ಕಾಮಗಾರಿಗಳ ಪ್ರಾರಂಭಿಸುವುದಕ್ಕೆ ರು. 53.11 ಲಕ್ಷ ಮಂಜೂರಿ ಮಾಡಿಸಿ ಕಾಮಗಾರಿ ಪ್ರಾರಂಭಿಸಲಾಗಿದೆ. ಈ ಭಾಗದ ಅಭಿವೃದ್ಧಿಗಾಗಿ ವಿಶೇಷವಾಗಿ ಸಾಯಗಾಂವ-ಕೊಂಗಳಿ-ತುಗಾಂವ್ ಸೇತುವೆಗಳ ಎತ್ತರ ಹೆಚ್ಚಿಸಲು ಒಟ್ಟು ರು. 33 ಕೋಟಿ ಮಂಜೂರಾತಿ ಮಾಡಿಲಾಗಿದೆ ಎಂದು ತಿಳಿಸಿದರು.
  ಈ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ಮಡಿವಾಳಪ್ಪಾ ಮಂಗಲಗಿ, ಹಣಮಂತರಾವ್ ಚವ್ಹಾಣ, ತಾಪಂ ಅಧ್ಯಕ್ಷೆ ಕಾಂತಾಬಾಯಿ ಪಾಟೀಲ್, ಮೋರಂಬಿ ಗ್ರಾಪಂ ಅಧ್ಯಕ್ಷ ರೂಪಾವತಿ ಬಿರಾದಾರ, ಸುಧಾಕರ ಜಾಧವ, ರಾಮರಾವ್ ವರವಟ್ಟಿಕರ, ಡಾ.ರಾಜೇಂದ್ರ ಜಾಧವ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!