ಬೀದರ್

ಸಾಹಿತ್ಯದಿಂದ ಸಮಾಜ ಶುದ್ಧಿ ಸಾಧ್ಯ


ಬಸವಕಲ್ಯಾಣ:  ಸಮಾಜ ಶುದ್ಧಿಕರಣಗೊಳಿಸುವ ಸಾಮರ್ಥ್ಯ ಸಾಹಿತ್ಯಕ್ಕಿರುವುದರಿಂದ ನಮ್ಮಲ್ಲಿರುವ ಮನುಷ್ಯತ್ವ ಹೊರ ಬರುತ್ತದೆ. ಇದರಿಂದ ಜನರಲ್ಲಿ ಜಾಗೃತಿ ಮೂಡಿಸುತ್ತದೆ ಎಂದು ಸಾಹಿತಿ ಡಾ. ವಿಕ್ರಮ ವಿಸಾಜಿ ಅಭಿಪ್ರಾಯಪಟ್ಟರು.
ತಾಲೂಕಿನ ಕೋಹಿನೂರು ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಥಮ ವಲಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ, ಸಮ್ಮೇಳನಾಧ್ಯಕ್ಷತೆ ನುಡಿ ಮಾತನಾಡಿ, ಹಳ್ಳಿಯ ಪರಿಸರ ಅನುಭವಿಸಿದಾಗಲೇ ಮೂಲ ಸಾಹಿತ್ಯ ರಚನೆಯಾಗುತ್ತದೆ. ಹಳ್ಳಿಯ ಜನಜೀವನದಲ್ಲಿ ಸತ್ವಯುತ ಸಾಹಿತ್ಯ ಅಡಗಿರುತ್ತದೆ ಎಂದರು.
ಕೋಹಿನೂರು ಎಂಬುದು ಬೆಳಕಿನ ಗುಡ್ಡ ಎಂಬರ್ಥದಲ್ಲಿ ಸತ್ಯದ ಬೆಳಕು, ಅನುಭಾವದ ಬೆಳಕು ಇಲ್ಲಿ ಹರಿದು ಹೋಗಿರುವುದರಿಂದ ಗ್ರಾಮಕ್ಕೆ ಕೋಹಿನೂರು ಎಂಬ ಹೆಸರು ಬಂದಿದೆ. ಇದೇ ನೆಲದಿಂದ ಸತ್ವಪೂರ್ಣ ಸಾಹಿತ್ಯ ರಚನೆಕಾರರಾದ ಹುಸೇನ್ ಸಾಬ್‌ರಂಥ ಜನಪದ ಕವಿಗಳು ನಮಗೆ ಮಾರ್ಗದರ್ಶಕರಾಗಿದ್ದಾರೆ ಎಂದು ನುಡಿದರು.
ಕಾಲೇಜು ಸ್ಥಾಪನೆ ಅಗತ್ಯ: ಗ್ರಾಮದಲ್ಲಿ ಪದವಿಪೂರ್ವ ಕಾಲೇಜು ಸ್ಥಾಪನೆ ಅನಿವಾರ್ಯವಾಗಿದೆ. ಇಲ್ಲಿನ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಉತ್ತಮ ಗ್ರಂಥಾಲಯ ಸ್ಥಾಪನೆ, ಪ್ರತಿ ಮನೆಗಳಲ್ಲಿ ಸಾಂಸ್ಕೃತಿಕ ವಾತಾವರಣ ನಿರ್ಮಾಣಗೊಳ್ಳಬೇಕು ಎಂದು ಆಶಿಸಿದರು. ಹಿರಿಯ ಸಾಹಿತಿ ಡಾ.ಜಿ.ಬಿ. ವಿಸಾಜಿ ಮಾತನಾಡಿ, ಕೋಹಿನೂರು ಗ್ರಾಮದ ಇತಿಹಾಸ ಪರಂಪರೆ, ಗ್ರಾಮೀಣ ಜನಜೀವನದ ಕ್ರಿಡೆ, ಆಸಕ್ತಿ, ಹವ್ಯಾಸಗಳು ಜನಪದ ಕಲೆಗಳ ಬಗ್ಗೆ ವಿವರಿಸಿದರು. ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಜಿ. ಮುಳೆ ಮಾತನಾಡಿ, ಕನ್ನಡ ನಾಡು ನುಡಿ ಚರಿತ್ರೆಯ ಕುರಿತು ಅಭಿಮಾನ ಪಟ್ಟರು.
ಭಾಲ್ಕಿ ಸಂಸ್ಥಾನ ಮಠದ ಡಾ. ಬಸವಲಿಂಗ ಪಟ್ಟದೇವರು ಆಶಿರ್ವಚನ ನೀಡಿ, ಡಾ.ಜಿ.ಬಿ. ವಿಸಾಜಿ ಮನೆತನದ ಸಾಹಿತ್ಯಿಕ ಕೊಡುಗೆ ಅಪಾರ.
 ಪರಂಪರೆಯನ್ನು ಮುರಿಯದೇ ಸಾಹಿತ್ಯದ ಬೆಳಕನ್ನು ಹರಿಸುತ್ತಾ ಅನೇಕ ಯುವ ಬರಹಗಾರರಿಗೆ ಉತ್ತಮ ಮಾರ್ಗದರ್ಶಕರಾಗಿದ್ದಾರೆ ಎಂದು ಶ್ಲಾಘಿಸಿದರು.
ಆಶಯ ನುಡಿ: ಹಾರಕೂಡ ಸಂಸ್ಥಾನ ಮಠದ ಚೆನ್ನವೀರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಯುವ ಮುಖಂಡ ಲಿಂಗರಾಜ ಪಾಟೀಲ ಅಟ್ಟೂರ್ ಮಾತನಾಡಿದರು.
 ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಆಶಯ ನುಡಿದರು.
ಕಾರ್ಯಕ್ರಮಕ್ಕೂ ಮುನ್ನ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಿಂದ ಜರುಗಿ ಡೊಳ್ಳು ಕುಣಿತ, ಮಕ್ಕಳ ಲೇಝಿಮ್, ಜಾನಪದ ಕಲೆಗಳ ಪ್ರದರ್ಶನಗಳೊಂದಿಗೆ ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಆವರಣದವರೆಗೆ ಬಂದು ತಲುಪಿತು.
 ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಂಗೀತಾ ಪಾಟೀಲ, ಮಂಠಾಳ ಪಿಎಸ್‌ಐ ವಿಠ್ಠಲರಾವ ಗೋಖಲೆ, ದತ್ತು ಭೆಂಡೆ, ತಾಲೂಕು ಕಸಾಪ ಅಧ್ಯಕ್ಷ ಚಂದ್ರಕಾಂತ ಸ್ವಾಮಿ, ಸಂಜುಕುಮಾರ ಅತಿವಾಳೆ ಮುಂತಾದವರು ವೇದಿಕೆಯಲ್ಲಿದ್ದರು. ಅಂಬಾರಾಯ ಉಗಾಜಿ ನಿರೂಪಿಸಿದರು. ಶಿವಶರಣಪ್ಪ ಸಂತಾಜಿವಂದಿಸಿದರು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ