ಬೀದರ್

ಅಕ್ರಮ ಮದ್ಯ ಮಾರಾಟ: ಇಬ್ಬರ ಬಂಧನ

ಹುಮನಾಬಾದ್: ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ತಾಲೂಕಿನ ಘೋಡವಾಡಿ ಗ್ರಾಮದಲ್ಲಿ ಜರುಗಿದೆ. ಬಂಧಿತರಿಂದ ಒಂದು ಪಟ್ಟಿಗೆ ಸಾರಾಯಿ ಹಾಗೂ 1500 ನಗದು ವಶಪಡಿಸಿಕೊಳ್ಳಲಾಗಿದೆ. ಹುಮನಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿವಿಲ್ ನ್ಯಾಯಲಯದ ಕಟ್ಟಡ ಉದ್ಘಾಟನೆ ಇಂದು
ಹುಮನಾಬಾದ್: ಪಟ್ಟಣದ ನ್ಯಾಯಾಲಯ ಆವರಣದಲ್ಲಿರುವ ಹೆಚ್ಚುವರಿ ಸಿವಿಲ್ ನ್ಯಾಯಲಯದ ಕಟ್ಟಡ ಉದ್ಘಾಟನೆ ಜು.26ರಂದು ಜರುಗಲಿದೆ.
ಮಧ್ಯಾಹ್ನ 3.30ಕ್ಕೆ ನಡೆಯುವ ಕಾರ್ಯಕ್ರಮವನ್ನು ಹೈಕೋರ್ಟ್ ನ್ಯಾ. ಎನ್.ಕೆ.ಪಾಟೀಲ್ ಉದ್ಘಾಟಿಸುವರು. ಜಿಲ್ಲಾ ಆಡಳಿತಾತ್ಮಕ ನ್ಯಾ. ಶ್ರೀನಿವಾಸ್ ಗೌಡ,  ಸಂಸದ ಭಗವಂತ ಖೂಬಾ, ಶಾಸಕ ರಾಜಶೇಖರ ಪಾಟೀಲ್ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಾರ್ವಜನಿಕರು ಸಂಬಂಧಪಟ್ಟವರು ಪಾಲ್ಗೊಳ್ಳಬೇಕೆಂದು ಬಾರ್ ಅಸೋಸಿಯೇಷನ್ ತಾಲೂಕು ಅಧ್ಯಕ್ಷ ಉದಯಕುಮಾರ ಶೀಲವಂತ ಕಾರ್ಯದರ್ಶಿ ಕಿರಣ ಹಣಮಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆ.4, 5ರಂದು ಗಣಿತ, ವಿಜ್ಞಾನ ಶಿಕ್ಷಕರಿಗೆ ತರಬೇತಿ
ಹುಮನಾಬಾದ್: ಪಟ್ಟಣದ ಲಕ್ಷ್ಮಿ ವೆಂಕಟೇಶ್ವರ ಶಾಲೆಯಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಗಣಿತ ಮತ್ತು ವಿಜ್ಞಾನ ವಿಷಯದ ಬಗ್ಗೆ ಬೋಧನಾ ತರಬೇತಿ ಹಮ್ಮಿಕೊಳ್ಳಲಾಗಿದೆ. ಪಠ್ಯ ಪುಸ್ತಕಗಳಲ್ಲಿನ ಸಮಸ್ಯೆಗಳು, ಪಾಠ ಬೋಧನೆ ಮಕ್ಕಳ ಆಕರ್ಷಣೆ, ಪರಿಣಾಮಕಾರಿ ಬೋಧನೆ ಇನ್ನಿತರ ವಿಷಯಗಳು ಕುರಿತು ಆ.4ಮತ್ತು 5ರಂದು ಎರಡು ದಿನಗಳ ಕಾಲ ತರಬೇತಿ ನಡೆಯಲಿದೆ. ಕಾರ್ಯಾಗಾರದಲ್ಲಿ ಪ್ರಮುಖವಾಗಿ ಪ್ರಕಾಶ ಆರ್.ಎಚ್, ವೇಣುಗೋಪಾಲ ಡಿ.ಎಚ್. ಬೆಂಗಳೂರು ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ನೀಡಲಿದ್ದಾರೆ ಎಂದರು. ಕಾರ್ಯಾಗಾರದಲ್ಲಿ ಭಾಗವಹಿಸಲು ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಒಒಡಿ ಸೌಲಭ್ಯ ಕಲ್ಪಿಸಿದೆ. ಸಂಬಂಧಪಟ್ಟ ಶಿಕ್ಷಕರು ಆ.2ರೊಳಗೆ ನೋಂದಣಿ ಮಾಡಿಕೊಳ್ಳಬೇಕೆಂಂದು ಸಂಸ್ಥೆಯ ಕಾರ್ಯದರ್ಶಿ ಶಿವಶಂಕರ ತರನಳ್ಳಿ ಪ್ರಕಟಣೆ ತಿಳಿಸಿದೆ.
ಮತ್ತೆ ಸರಗಳ್ಳರ ಹಾವಳಿ
ಗುಲ್ಬರ್ಗ: ಕಳೆದೊಂದು ವಾರದಿಂದ ಸರಗಳ್ಳತನಗಳಿಂದ ಮುಕ್ತವಾಗಿದ್ದ ಮಹಾನಗರದಲ್ಲಿ ಶುಕ್ರವಾರ ಸರಗಳ್ಳತನ ಪ್ರಕರಣ ಮರುಕಳಿಸಿದೆ. ಈ ಬಾರಿ ಸರಗಳ್ಳರು ಅಶೋಕ ನಗರ ಠಾಣೆ ವ್ಯಾಪ್ತಿಯ ವರ್ಧನ ನಗರದಲ್ಲಿ ದಾಳಿ ಮಾಡಿ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಮಾಂಗಲ್ಯಸರ ದೋಚಿದ್ದಾರೆ. ಭಜನೆಗೆ ಹೋಗುತ್ತಿದ್ದ ಸುಭದ್ರಾಬಾಯಿ ಹೆಜೀಬ್ ಎಂಬುವವರ ಕೊರಳಲ್ಲಿದ್ದ 40 ಗ್ರಾಂ. 1.20 ಲಕ್ಷ ಮೌಲ್ಯದ ಸರ ಖದೀಮರ ಪಾಲಾಗಿದೆ. ಭಜನೆಗೆ ಹೋಗುವಾಗ ದಾರಿಯಲ್ಲೇ ಕಳ್ಳರು ಬೈಕ್ ಸವಾರರಾಗಿ ಸಂಜೆ 4.30ರ ಸುಮಾರಿಗೆ ಬಂದು ಈ ದುಷ್ಕೃತ್ಯ ಎಸಗಿದ್ದಾರೆ. ಈ ಸಂಬಂಧ ಅಶೋಕ ನಗರ ಠಾಣೆಯಲ್ಲಿ ಸುಭದ್ರಾಬಾಯಿ ದೂರು ನೀಡಿದ್ದಾರೆ. ಸರಗಳ್ಳತನದಿಂದಾಗಿ ವರ್ಧನ ನಗರ ಸೇರಿದಂತೆ ಆ ಭಾಗದ ಬಡಾವಣೆಗಳ ಮಹಿಳೆಯರು ಆತಂಕಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': 'ಜೈಲರ್ 2' ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!