ಬೀದರ್

ಪದಾಧಿಕಾರಿಗಳ ನೇಮಕ

ಬೀದರ್: ಜೈ ಕನ್ನಡಿಗರ ರಕ್ಷಣಾ ವೇದಿಕೆಯ ಘೋಡಂಪಳ್ಳಿ ಗ್ರಾಮ ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸಚಿನ ಶಾಹಪೂರೆ- ಅಧ್ಯಕ್ಷರು, ಕುಮಾರ ಸ್ವಾಮಿ- ಉಪಾಧ್ಯಕ್ಷರು, ಚಂದ್ರಶೇಖರ ರೆಡ್ಡಿ- ಕಾರ್ಯಾಧ್ಯಕ್ಷರು, ದತ್ತು ದೊಡದೊಡ್ಡಿ- ಖಜಾಂಚಿ, ತಿಪ್ಪಣ್ಣ ಶಹಾಪುರೆ- ಸಹ ಕಾರ್ಯದರ್ಶಿ, ವಿಜಯಕುಮಾರ ರಾಜೋಳೆ- ಜಂಟಿ ಕಾರ್ಯದರ್ಶಿ ಅಲ್ಲದೇ ಮಿಟ್ಟು ಶಹಾಪುರೆ, ವೀರೇಶ ಸುತಾರ, ಚನ್ನು ಸ್ವಾಮಿ, ಜಗನ್ನಾಥ ಪಾಗದೊಡ್ಡಿ ಹಾಗೂ ಶ್ರೀನಾಥ ಶಾಹಪೂರೆ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಪ್ರಭು ಮದರಗಿಕರ್ ತಿಳಿಸಿದ್ದಾರೆ.
ಪ್ರವಚನ ನಾಳೆಯಿಂದ
ಬೀದರ್: ಬೀದರಿನ ಬಸವ ಸೇವಾ ಪ್ರತಿಷ್ಠಾನದಿಂದ ನಗರದ ಶರಣ ಉದ್ಯಾನದಲ್ಲಿ ಶ್ರಾವಣ ಮಾಸದ ನಿಮಿತ್ತ ಜು.27ರಿಂದ ಒಂದು ತಿಂಗಳವರೆಗೆ ಅಕ್ಕ ಅನ್ನಪೂರ್ಣ ಪ್ರವಚನ ಏರ್ಪಡಿಸಿದೆ. ಪ್ರತಿದಿನ ಸಂಜೆ 6.30ರಿಂದ 7.45ರ ವರೆಗೆ 'ಸಂಸಾರದಲ್ಲಿ ಸದ್ಗತಿ'  ವಿಷಯ ಕುರಿತು ಪ್ರವಚನ ನೀಡಲಿದ್ದಾರೆ. ಇದರೊಂದಿಗೆ ಪ್ರತಿ ದಿನ ಪ್ರಾರ್ಥನೆ, ಭಜನೆಗಳು ಜರುಗಲಿವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರವಚನದ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರತಿಷ್ಠಾನದ ಆಡಳಿತಾಧಿಕಾರಿ ಶಂಕರೆಪ್ಪ ಹೊನ್ನಾ, ಸಂಚಾಲಕ ರಮೇಶ ಕೋರಿದ್ದಾರೆ.
ನಿಧಿ ಸಂಗ್ರಹ: ಶಶಿ
ಬೀದರ್: ಜಿಲ್ಲೆಯ ಗೋರ್ಟಾ ಗ್ರಾಮದಲ್ಲಿ ಹುತಾತ್ಮರ ಸ್ಮಾರಕದ ಸಿದ್ಧತೆಗಾಗಿ ಎಲ್ಲಾ ಬೂತ್ ಮಟ್ಟದ ಕಾರ್ಯಕರ್ತರಿಂದ ನಿಧಿ ಸಂಗ್ರಹ ಮಾಡಲಾಗುವುದು ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿ ಹೊಸಳ್ಳಿ ತಿಳಿಸಿದರು. ಪಕ್ಷದ ಕಚೇರಿಯಲ್ಲಿ ಶುಕ್ರವಾರ ನಡೆದ ಯುವ ಮೋರ್ಚಾ ಬೀದರ್ ಮಂಡಲ ಹಾಗೂ ಬೀದರ್ ದಕ್ಷಿಣ ಕ್ಷೇತ್ರದ ಕಾರ್ಯಕಾರಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂಬರುವ ದಿನಗಳಲ್ಲಿ ಸ್ಮಾರಕದ ಭೂಮಿ ಪೂಜೆ ಮಾಡುವ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು ರಾಜ್ಯ ಹಾಗೂ ಜಿಲ್ಲೆ ನೀಡಿರುವ ಎಲ್ಲಾ ಕಾರ್ಯಕ್ರಮಗಳು ಕಟ್ಟುನಿಟ್ಟಾಗಿ ನಿರ್ವಹಿಸಬೇಕು ಎಂದರು. ಯುವ ಮೋರ್ಚಾ ಉಸ್ತುವಾರಿ ಈಶ್ವರಸಿಂಗ್ ಠಾಕೂರ ಮಾತನಾಡಿ, ಪಕ್ಷದ ಸಂಘಟನೆಗಾಗಿ ಎಲ್ಲರೂ ಒಟ್ಟಾಗಿ ಶ್ರಮಿಸಬೇಕೆಂದರು. ಕಾರ್ಯಕಾರಣಿ ಸಭೆಯಲ್ಲಿ ಪಾಲ್ಗೊಂಡು ಪಕ್ಷ ಕಳೆದ 6 ತಿಂಗಳಿಂದ ಮಾಡಿರುವ ಕಾರ್ಯಚಟುವಟಿಕೆಗಳು ಹಾಗೂ ಮುಂದಿನ ದಿನಗಳಲ್ಲಿ ಪಕ್ಷದ ಕಾರ್ಯಚಟುವಟಿಕೆ ಹಾಗೂ ರೂಪುರೇಷಗಳ ಕುರಿತು ಚರ್ಚಿಸಲಾಯಿತು. ಬೀದರ್ ಮಂಡಲದ ಅಧ್ಯಕ್ಷ ಮಹೇಶ ಪಾಲಂ ಹಾಗೂ ಶಂಕರ್ ರೆಡ್ಡಿ ಉಪಸ್ಥಿತರಿದ್ದರು. ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಶ್ವರ ಸ್ವಾಮಿ, ಜಿಲ್ಲಾ ಮಾಜಿ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ,  ಜಿಲ್ಲಾ ಕಾರ್ಯದರ್ಶಿಗಳಾದ ದತ್ತು ಬಾವಗೆ, ಅಮರ ಉಡುಮನಳ್ಳಿ, ಬೀದರ್ ಯುವ ಮೋರ್ಚಾ ಮಂಡಲ ಅಧ್ಯಕ್ಷ ಅನೀಲ್ ಉಪ್ಪೆ, ಬೀದರ್ ದಕ್ಷಿಣ ಮಂಡಲ ಅಧ್ಯಕ್ಷರು ಚಂದ್ರಶೇಖರ್ ಪಾಟೀಲ್, ದೀಪಕ್ ಚಿದ್ರಿ ಎಲ್ಲದೆ ಎರಡು ಮಂಟಲಗಳ ಯುವ ಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ದರು.  ಶಿವಕುಮಾರ ಸ್ವಾಮಿ ಯರನಳ್ಳಿ ನಿರೂಪಿಸದರೆ ಜನಾರ್ದನ ರೆಡ್ಡಿ ವಂದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; ಎರಡು ದಿನಗಳ ಡೆಡ್‌ಲೈನ್‌!

ಭಾವಿ ಪತಿಯನ್ನೇ ಹತ್ಯೆಗೈದ ರಿಂಗ್ ರೋಡ್ ಶುಭಾಗೆ ಬಿಗ್ ಶಾಕ್: ಕ್ಷಮಾದಾನ ಅರ್ಜಿ ತಿರಸ್ಕರಿಸಿದ ಸಚಿವ ಸಂಪುಟ!

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ವಿವಿ ಫ್ರೆಟರ್ನಿಟಿ ಕಾರ್ಯಕ್ರಮದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ‘ನನ್ನ ಸರದಿ ಯಾವಾಗ?’ ಎಂದು ಕೂಗಿದ ಪುರುಷರು!

ಹೊಸ ಪಕ್ಷದ ಹೆಸರು ಘೋಷಿಸಿದ ಮಾಜಿ IAS ಅಧಿಕಾರಿ ದಿವ್ಯಾ ಮಿತ್ತಲ್; 2027ರ ಯುಪಿ ಚುನಾವಣೆಗೆ ಸ್ಪರ್ಧೆ