ಬಸವಕಲ್ಯಾಣ: ನಗರದ ಸದ್ಗುರು ಸದಾನಂದ ಮಠದ ಆವರಣದಲ್ಲಿ ಜು.27ರಂದು ಕಳೆದ ಮಾರ್ಚ್ನಲ್ಲಿ ಜರುಗಿದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 10ಕ್ಕೆ ಜರುಗಲಿರುವ ಕಾರ್ಯಕ್ರಮವನ್ನು ಬಸವಕಲ್ಯಾಣದ ಸಹಾಯಕ ಆಯುಕ್ತರಾದ ಹೆಪ್ಸಿಬಾರಾಣಿ ಕೊರ್ಲಪಾಟಿ ಉದ್ಘಾಟಿಸುವರು. ಡಿಡಿಪಿಐ ಎಂ.ಕೆ ಗಾದಗೆ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಅತಿಥಿಯಾಗಿ ಶ್ರೀದೇವಿ ಖಂಡಾಳೆ, ದತ್ತಾತ್ರಿ ಚಿಂಚೊಳೆ, ರುಕ್ಮಿಣಿ ಘಾಂಗ್ರೆ, ಗುಂಡಪ್ಪ ಮೇತ್ರೆ ಬಟಗೇರಾ ಭಾಗವಹಿಸುವರು.
ಸೂರ್ಯಕಾಂತ ಶಿಲವಂತ ಅಧ್ಯಕ್ಷತೆ ವಹಿಸುವರು. ಕಾಲೇಜಿನ ವಿದ್ಯಾರ್ಥಿಗಳು ಸಮಾರಂಭದಲ್ಲಿ ಪಾಲ್ಗೋಳ್ಳಬೇಕೆಂದು ಪ್ರಾಂಶುಪಾಲರು ಕೋರಿದ್ದಾರೆ.