ಬೀದರ್

ಸಂಭ್ರಮದ ಸಿದ್ದೇಶ್ವರ ಜಾತ್ರೆ

ಬಸವಕಲ್ಯಾಣ: ತಾಲೂಕಿನ ಮೊರಖಂಡಿ ಗ್ರಾಮದಲ್ಲಿ ಸಿದ್ದೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಸಡಗರದಿಂದ ಜರುಗಿತು.
ದೇವಸ್ಥಾನದಲ್ಲಿ ಕೋಟಿ ಪೂಜಾ ನಿಮಿತ್ತ ಶನಿವಾರ ಮೊರಖಂಡೇಶ್ವರ ಕುರಿತು ಲಲಿತಾ ಮಠ ಪ್ರವಚನ ಮಾಡಿ, ಮಾನವ ಜೀವನ ನೆಮ್ಮದಿಯಿಂದ ಶಾಂತಚಿತ್ತವಾಗಿ ನಡೆಯಬೇಕಾದರೆ ದೇವರ ಪ್ರಾರ್ಥನೆ ಆಧ್ಯಾತ್ಮಿಕ ಚಿಂತನೆಗಳಿಂದ ನೆಮ್ಮದಿ ಕೊಂಡುಕೊಳ್ಳಲು ಸಾಧ್ಯವೆಂದರು.
ಶಿವಭಜನ ಹಾಗೂ ಜಾಗರಣ, ಸಿದ್ದೇಶ್ವರ ಅಡ್ಡ ಪಲ್ಲಕ್ಕಿ ಹಾಗೂ ನಂದಿ ಧ್ವಜವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೊರಟು ಹನುಮಾನ್ ದೇವಸ್ಥಾನದವರೆಗೆ ಭವ್ಯ ಮೆರವಣಿಗೆ ನಡೆಸಲಾಯಿತು.
ಕಾರ್ಯಕ್ರಮ ವೀಕ್ಷಿಸಲು ಗ್ರಾಮದ ಸುತ್ತಲಿನ ಜನಸಾಗರವೇ ಹರಿದು ಬಂದಿತ್ತು. ಭಕ್ತಾದಿಗಳಿಗೆ ದೇವಸ್ಥಾನ ಪಂಚ ಕಮಿಟಿಯಿಂದ ಮಹಾ ಪ್ರಸಾದ ವ್ಯವಸ್ಥೆ ಕಲ್ಪಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ಶಿವಾರಜ ಕುಂಟಗಾವೆ, ಉಪಾಧ್ಯಕ್ಷ ಯಾದವ ಹರಸೂರೆ, ಬಸ್ಸಯ್ಯ ಸ್ವಾಮಿ, ವಿಠೋಬಾ ಮಾಮುಡೆ, ಗುರುನಾಥ ಸೋನಕೆ, ಸಂಜು ಗಾಯಕವಾಡ, ವಾಮನ ಪಾಂಡರವಾಡೆ, ಬಸಪ್ಪ ಚಾಕುರೆ, ರೇವಣಸಿದ್ದಯ್ಯ ಸ್ವಾಮಿ, ಜೈರಾಜ ಬುಸುರೆ ಹಾಗೂ ಗ್ರಾಮದ ಪ್ರಮುಖರು ಪಾಲ್ಗೊಂಡಿದ್ದರು. ಬಸವಕಲ್ಯಾಣದಿಂದ ಮೋರಖಂಡಿ ಗ್ರಾಮದ ದೇವಸ್ಥಾನದವರೆಗೆ ನಂದಿದ್ವಜ ಮತ್ತು ಪರತಾಪುರ ಗ್ರಾಮದ ಮಹಿಳೆಯರು ಪಾದಯಾತ್ರೆ ಮೂಲಕ ಭಜನೆ ಮಾಡುತ್ತ ತಲೆಯ ಮೇಲೆ ಕುಂಭಕಳಸದ ಮೆರವಣಿಗೆ ನಡೆಸಿ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿ ಭಕ್ತಿ ಅರ್ಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್