ಚಾಮರಾಜನಗರ: ನಗರದ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಕಾರಿನಲ್ಲಿದ್ದ ವ್ಯಕ್ತಿಯೊಬ್ಬರ ಗಮನ ಬೇರಡೆ ಸೆಳೆದು 1 ಲಕ್ಷ ದೋಚಿರುವ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ನಗರದ ಭಗೀರಥ ಬಡಾವಣೆಯ ಅಲಮೇಲಮ್ಮ ಎಂಬವರು ಕೆನರಾ ಬ್ಯಾಂಕ್ನಲ್ಲಿ 1 ಲಕ್ಷ ಡ್ರಾ ಮಾಡಿದ್ದಾರೆ. ಆಕೆ ಹಣದ ಚೀಲವನ್ನು ಕಾರಿನಲ್ಲಿಟ್ಟು, ಹಣ್ಣು ತರಲು ಹೋಗಿದ್ದಾರೆ. ಕಾರಿನಲ್ಲಿದ್ದ ಪುತ್ರನನ್ನು ಅಪರಿಚಿತರು ಬಂದು ಕೆಳಗೆ ದುಡ್ಡು ಬಿದ್ದಿದೆ ಎತ್ತಿಕೊಳ್ಳಿ ಎಂದರು. ದುಡ್ಡು ಎತ್ತಿಕೊಳ್ಳುವಷ್ಟರಲ್ಲಿ ಹಣ ಎಗರಿಸಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.