ಚಾಮರಾಜನಗರ

ಅನ್ನ ಕೊಡುವವನು ರೈತನೇ ಹೊರತು ರಾಜಕಾರಣಿಯಲ್ಲ

ಚಾಮರಾಜನಗರ: ಹಸಿದ ಹೊಟ್ಟೆಗೆ ರೈತ ಅನ್ನ ಕೊಡುವನೇ ಹೊರತೂ, ನಮ್ಮಿಂದಲೇ ರಾಜ್ಯ ಎಂದು ಭಾವಿಸಿರುವ  ರಾಜಕಾರಣಿಯಲ್ಲ ಎಂದು ನರ್ಮದಾ ಬಚಾವೋ ಆಂದೋಲನದ ಹೋರಾಟಗಾರ್ತಿ ಮೇಧಾ ಪಾಟ್ಕರ್ ಹೇಳಿದರು.
ಅವರು ತಾಲೂಕಿನ ಹೊಂಡರಬಾಳು ಗ್ರಾಮದ ಅಮೃತಭೂಮಿ ಅಂತಾರಾಷ್ಟ್ರೀಯ ಸುಸ್ಥಿರ ಅಭಿವೃದ್ಧಿ ಕೇಂದ್ರದ ಆವರಣದಲ್ಲಿ 4 ದಿನಗಳ ರಾಷ್ಟ್ರೀಯ ರೈತ ಕಾರ್ಯಕರ್ತರ ಅಧ್ಯಯನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ರಾಜಕಾರಣಿಗಳು ಮತ್ತು ಕಾರ್ಪೋರೇಟ್ ಕಂಪನಿಗಳು ನಮ್ಮನ್ನು ಸೇವಕರನ್ನಾಗಿ ನೋಡುತ್ತಾ ನಮ್ಮಿಂದ ಎಲ್ಲವನ್ನು ಕಿತ್ತುಕೊಂಡು, ನಮ್ಮ ಭೂಮಿಯ ಮೇಲೆ ಕಣ್ಣಿಟ್ಟಿದ್ದಾರೆ. ಕೇರಳದಲ್ಲಿ ಸಾವಿರಾರು ಮಂದಿ 10 ವರ್ಷಗಳ ತನಕ ಹೋರಾಡಿದರು. ದೊಡ್ಡ ಅಣೆಕಟ್ಟು ಸೇರಿದಂತೆ ಸಾವಿರಾರು ಎಕರೆ ಮುಳುಗಡೆಯಾಯಿತು. ಈ ಸಂದರ್ಭದಲ್ಲಿ ಯಾವುದೇ ರಾಜ್ಯದಲ್ಲಿ ಭೂಮಿ ಉಳಿದಿದೆ ಎಂದರೆ ಅದು ಅಮೃತಭೂಮಿಯಾಗಿದೆ ಎಂದರು.
ಶೇ.14 ಮಂದಿಯ ಅನುಕೂಲಕ್ಕಾಗಿ ದಿಲ್ಲಿ, ಮುಂಬೈನಲ್ಲಿ ಕಾರಿಡಾರ್ ಮಾಡಲು ಯೋಜನೆ ನಡೆಯುತ್ತಿದೆ. ಇಂದು ಕುಲಾಂತರಿ ಬೀಜದ ದೆಸೆಯಿಂದ ನಮ್ಮ ಬಿತ್ತನೆ ಬೀಜದ ಮೇಲೆ ಆಕ್ರಮಣ ನಡೆಯುತ್ತಿದೆ. ಅಂತಾರಾಷ್ಟ್ರೀಯ ಪಿತೂರಿಯಿಂದ ನಮ್ಮ ರೈತ ಮಹಿಳೆಯರು, ದಲಿತರನ್ನು ಕೇಳದೆಯೇ ಜಾಗತೀಕರಣ ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ಸಂವಿಧಾನದಲ್ಲಿ ಇಂಥವುಗಳಿಗೆ ಅವಕಾಶ ನೀಡದೇ ತಿದ್ದುಪಡಿ ತರುವ ಅಗತ್ಯವಿದೆ ಎಂದರು.
ಜೈಲಿಗೆ ಹೋಗುವುದೇ ಗೌರವ: ನಾವು ಹೋರಾಟದ ಶೃಂಗದಲ್ಲಿದ್ದು, ಈಗಲೂ ಮಧ್ಯಪ್ರದೇಶದಲ್ಲಿ ಹಲವಾರು ಮಂದಿ ಹೋರಾಟಗಾರರು ಜೈಲಿನಲ್ಲಿದ್ದಾರೆ. ಹೋರಾಟಗಾರರಾದ ನಾವು ಜೈಲಿಗೆ ಹೋಗುವುದೇ ಗೌರವ ಎಂದು ಭಾವಿಸಿದ್ದೇವೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ಕೊಡದೆ, ಅವರು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ತಂದು ನಿಲ್ಲಿಸಲಾಗಿದೆ. ಇದು ರೈತರ ಆತ್ಮಹತ್ಯೆಯಲ್ಲ, ಬೇಸಾಯದ ಕೊಲೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ