ಮೈಸೂರು: ನಗರದ ಸ್ಮಿತ್ ಕ್ಲೈನ್ ಬೀಚಂ ನೌಕರರ ವಿವಿಧೋದ್ದೇಶ ಸಹಕಾರ ಸಂಘದ ಸಮಾಪನಾಧಿಕಾರಿಗಳಾಗಿ ನೇಮಕಗೊಂಡು, ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಸಹಕಾರ ಸಂಘಗಳ ನಿರೀಕ್ಷಕರು ಈ ಸಹಕಾರ ಸಂಘದ ದಾಖಲಾತಿಯನ್ನು ಪರಿಶೀಲಿಸಿದ್ದಾರೆ. ಸದರಿ ಸಂಘದ ಎಂಡಿಸಿಸಿ ಬ್ಯಾಂಕಿನ ಖಾತೆಯಲ್ಲಿ 27,209 ಶಿಲ್ಕು ಮಾತ್ರ ಉಳಿದಿರುತ್ತದೆ. ಈ ಸಂಘದ ಆಸ್ತಿ ಮತ್ತು ಜವಾಬ್ದಾರಿ ವಿಲೇವಾರಿ ಮಾಡಿ ನೋಂದಣಿ ರದ್ದತಿ ಬಗ್ಗೆ ಯಾರಿಂದಲೂ ಆಕ್ಷೇಪಣೆಗಳು ಹಾಗೂ ಮನವಿಗಳು ಬಾರದ ಕಾರಣ, ಸದರಿ ಸಂಘದ ನೋಂದಣಿ ರದ್ದತಿಗೆ ಕ್ರಮ ಜರುಗಿಸಬೇಕಾಗಿದೆ. ಸಂಘದಿಂದ ಸದಸ್ಯರು ಮತ್ತಿತರರಿಗೆ ಯಾವುದೆ ರೀತಿಯ ಬಾಕಿ ಇದ್ದಲ್ಲಿ ಫೆ. 20ರೊಳಗೆ ಮೈಸೂರು ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ಹಣಕ್ಕೆ ಸಂಬಂಧಿಸಿದ ಮೂಲ ದಾಖಲೆ ಹಾಜರುಪಡಿಸಿ ಹಣ ಪಡೆಯಬಹುದಾಗಿದೆ. ತಪ್ಪಿದಲ್ಲಿ ಈ ಬಗ್ಗೆ ಯಾರಿಗೂ ಆಸಕ್ತಿಯಿಲ್ಲವೆಂದು ಲಭ್ಯ ದಾಖಲಾತಿಗಳ ಆಧಾರದ ಮೇಲೆ ಸಂಘದ ಆಸ್ತಿ ಜವಾಬ್ದಾರಿಯನ್ನು ವಿಲೇವಾರಿ ಮಾಡಿ ನೋಂದಣಿ ರದ್ದತಿಗೆ ಕ್ರಮ ವಹಿಸಲಾಗುವುದು. ಸಂಘದ ನೋಂದಣಿ ರದ್ದತಿಯ ಬಳಿಕ ಬರಬಹುದಾದ ಆಕ್ಷೇಪಣೆಗಳಿಗೆ ಸಮಾಪನಾಧಿಕಾರಿಗಳು ಯಾವುದೆ ಜವಾಬ್ದಾರರಾಗಿರುವುದಿಲ್ಲ ಎಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಸಹಕಾರ ಸಂಘಗಳ ನಿರೀಕ್ಷಕರು ಹಾಗೂ ಸಂಘದ ಸಮಾಪನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.