ಚಾಮರಾಜನಗರ: ಆದಿಚುಂಚನಗಿರಿಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ತ್ರಿವಿಧ ದಾಸೋಹ ಮಾಡಿದ್ದರಲ್ಲದೆ ಪರಿಸರ ಪ್ರೇಮಿಯಾಗಿದ್ದರು ಎಂದು ತಾಲೂಕು ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಮಂಚೇಗೌಡ ಹೇಳಿದರು.
ನಗರದಲ್ಲಿ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ಶ್ರದ್ಧಾಂಜಲಿ ಅರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಆದಿಚುಂಚನಗಿರಿ ಶ್ರೀಗಳು ಎಲ್ಲ ವರ್ಗದವರ ಶ್ರೇಯೋಭಿವೃದ್ಧಿಗಾಗಿ ಸಮಾನತೆಯ ಸಂಕೇತವಾಗಿ ಬಡ ವಿದ್ಯಾರ್ಥಿಗಳು, ಅಂಗವಿಕಲರಿಗೆ, ಅಂಧರಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ರಾಜ್ಯಾದ್ಯಂತ 5 ಕೋಟಿ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪರಿಸರ ಪ್ರೇಮ ಮೆರೆದಿದ್ದಾರೆ ಎಂದರು. ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿದರು.
ಸಮಾರಂಭದಲ್ಲಿ ತಾಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿ ನಾಗೇಂದ್ರಗೌಡ, ಸಂಘದ ತಾಲೂಕು ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಅಶ್ವಥ್ ನಾರಾಯಣಗೌಡ, ಚಿಕ್ಕಣ್ಣ, ನಾರಾಯಣ ಪ್ರಸಾದ್, ನಗರಸಭಾ ಸದಸ್ಯ ರಘುನಾಥ್, ಮಹೇಶ್ಗೌಡ, ಚಿನ್ನಮುತ್ತು, ಬಸವರಾಜು, ಅರುಣ್ ಕುಮಾರ್ಗೌಡ, ಮಂಜೇಗೌಡ, ಪುಟ್ಟತಾಯಮ್ಮ, ಮಂಜುನಾಥ್, ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ನವಿಲೂರು ನಾಗೇಂದ್ರ, ವಕೀಲ ಶಿವಲಿಂಗೇಗೌಡ ಇತರರಿದ್ದರು.