ಕೊಳ್ಳೇಗಾಲ: ಕಣ್ಮರೆಯಾಗುತ್ತಿರುವ ಸಾಂಪ್ರದಾಯಿಕ ತಿಂಡಿ ತಿನಿಸುಗಳನ್ನು ಮನೆಯಲ್ಲಿ ಮಾಡಿ ಮುಂದಿನ ಪೀಳಿಗೆಗೆ ಅದನ್ನು ಪರಿಚಯಿಸುವ ಕಾರ್ಯವನ್ನು ಮಹಿಳೆಯರು ಮಾಡಬೇಕು ಎಂದು ಡಾ. ಶಿವರುದ್ರಸ್ವಾಮಿ ಹೇಳಿದರು.
ಅಕ್ಕನಬಳಗದ ವತಿಯಿಂದ ಪಟ್ಟಣದ ಕಲಾಮಂಟಪದಲ್ಲಿ ಏರ್ಪಡಿಸಿದ್ದ ಆಹಾರ ಮೇಳ ಉದ್ಘಾಟಿಸಿ ಮಾತನಾಡಿದರು.
ಬಳಗದ ಅಧ್ಯಕ್ಷೆ ಲೀಲಾ ಶಿವಕುಮಾರ್ ಮಾತನಾಡಿ, 7 ವರ್ಷಗಳಿಂದ ಆಹಾರ ಮೇಳ ಅಚರಿಸುತ್ತ ಬಂದಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದರು.
ಮೇಳದಲ್ಲಿ ಕಜ್ಜಾಯ, ಚಿರೋಟಿ, ಒಬ್ಬಟ್ಟು, ಬಾದಾಮಿಪೂರಿ, ಕೊಬ್ಬರಿ ಮಿಠಾಯಿ ಮುಂತಾದ ತಿಂಡಿಗಳು ಘಮಘಮಿಸುತ್ತಿದ್ದು ತಿಂಡಿಪ್ರಿಯರನ್ನು ಕೈ ಬೀಸಿ ಕರೆಯುತ್ತಿದ್ದವು. ಚುರುಮುರಿ, ಕಾಯಿಉಪ್ಪಿಟ್ಟು, ಕಟ್ಲೆಟ್, ಕೇಕ್ಗಳು ಭರ್ಜರಿ ಮಾರಾಟವಾದವು. ಪೂರಿ, ಬಜ್ಜಿ, ಬೋಂಡ ಮುಂತಾದ ತಿಂಡಿಗಳನ್ನು ಬಿಸಿ ಬಿಸಿಯಾಗಿ ತಿಂದು ಹೊಟ್ಟೆ ತುಂಬಿಸಿಕೊಂಡರು. ಪದಾಧಿಕಾರಿಗಳಾದ ಲತಾ ಮಹೇಂದ್ರ, ಮಾಲ ನಾಗರಾಜು, ಪ್ರಮಿಳಾ ನಂಜಪ್ಪ, ವಾಣಿ ರಮೇಶ್, ಗೀತಾ ಮಂಜುನಾಥ್, ರೂಪ ತೋಟೇಶ್, ನಾಗರತ್ನ ಮಹದೇವಪ್ಪ, ಆಶಾಚಿಕ್ಕ, ಜಗದಾಂಬ ಸದಾಶಿವಮೂರ್ತಿ ಇದ್ದರು.