ಚಾಮರಾಜನಗರ

ತಾಳವಾಡಿ ಕನ್ನಡಿಗರಿಗೆ ಶಾಸಕರ ಅಭಯ

ಚಾಮರಾಜನಗರ: ತಾಳವಾಡಿ ಫಿರ್ಕಾ ಕನ್ನಡಿಗರನ್ನು ತಮಿಳುನಾಡು ಸರ್ಕಾರ ಬಂಧಿಸಿರುವುದು ಹಾಗೂ ತಮಿಳು ಭಾಷಾ ಹೇರಿಕೆಗೆ ಸಂಬಂಧಿಸಿದ ಸಮಸ್ಯೆಯನ್ನು ಮುಖ್ಯಮಂತ್ರಿಗಳೊಡನೆ ಚರ್ಚಿಸಿ, ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಗುಂಡ್ಲುಪೇಟೆ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಮಹದೇವಪ್ರಸಾದ್ ಭರವಸೆ ನೀಡಿದರು.
ತಾಳವಾಡಿ ಘಟನೆ ಹಿನ್ನೆಲೆಯಲ್ಲಿ ಗುಮಟಾಪುರ ಮತ್ತು ಗಾಜನೂರು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿದ ನಂತರ ಗುಮಟಾಪುರ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ತಾಳವಾಡಿ ಫಿರ್ಕಾದಲ್ಲಿ 50ಕ್ಕೂ ಹೆಚ್ಚು ಕನ್ನಡ ಶಾಲೆಗಳಿದ್ದು, ಪ್ರಥಮ ಭಾಷೆಯಾಗಿದ್ದ ಕನ್ನಡವನ್ನು ತೆಗೆದು ತಮಿಳನ್ನು ಹೇರಲಾಗಿದೆ. ಇದರಿಂದ ಇಲ್ಲಿನ ಕನ್ನಡಿಗರಿಗೆ ಅನ್ಯಾಯವಾಗಿದ್ದು, ಅವರ ಭವಿಷ್ಯಕ್ಕೆ ತೊಡಕುಂಟಾಗಿದೆ. ಅಲ್ಲದೇ, ತಾಳವಾಡಿ ಶಾಲೆಯೊಂದರ ವಿದ್ಯಾರ್ಥಿನಿ ಸಾವಿನ ಸಂಬಂಧ ನಿರಪರಾಧಿಗಳನ್ನು ಬಂಧಿಸಲಾಗಿದೆ. ಬಂಧಿತರಿಗೆ ಜಾಮೀನು ದೊರಕಿಸಲು ಅಗತ್ಯ ದಾಖಲೆ ಕೊಡಲು ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂಬ ವಿಚಾರಗಳನ್ನು ಇಲ್ಲಿನ ಜನರು ನನ್ನ ಗಮನಕ್ಕೆ ತಂದಿದ್ದಾರೆ ಎಂದರು.
ಈ ಸಮಸ್ಯೆ ಬಗೆಹರಿಸಲು ಪೂರಕ ಕ್ರಮಗಳನ್ನು ಕರ್ನಾಟಕ ಸರ್ಕಾರ ಕೈಗೊಳ್ಳಬೇಕಾಗಿದ್ದು, ಈ ಸಂಬಂಧ ಇಲ್ಲಿನ ಪರಿಸ್ಥಿತಿಯನ್ನು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ, ಜಿಲ್ಲೆಯ ಸಂಸದರು, ಎಲ್ಲ ಶಾಸಕರೊಡನೆ ಚರ್ಚಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರುವ ಮೂಲಕ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಯತ್ನ ನಡೆಸಲಾಗುವುದು. ತಾಳವಾಡಿ ಫಿರ್ಕಾದ ಕನ್ನಡಿಗರು ಯಾವುದೇ ಕಾರಣಕ್ಕೂ ಧೃತಿಗೆಡಬಾರದು ಎಂದರು.
ತಾಳವಾಡಿ ಫಿರ್ಕಾ ಕನ್ನಡ ಸಂಘದ ಅಧ್ಯಕ್ಷ ಚನ್ನಂಜಪ್ಪ ಮಾತನಾಡಿ, ತಮಿಳು ಭಾಷೆ ಹೇರಿಕೆ ಖಂಡಿಸಿ ತಾಳವಾಡಿಯಲ್ಲಿ ಕನ್ನಡಿಗರು ಪ್ರತಿಭಟನೆ ಮಾಡಿದ್ದಕ್ಕೆ ಪ್ರತೀಕಾರವಾಗಿ ತಮಿಳುನಾಡು ಪೊಲೀಸರು ಕನ್ನಡಿಗರ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧವೇ ಇಲ್ಲದ ಅನೇಕರನ್ನು ಬಂಧಿಸಲಾಗಿದೆ. ಹೀಗಾಗಿ ಫಿರ್ಕಾದ ಕನ್ನಡಿಗರು ಆತಂಕದ ಸ್ಥಿತಿ ಎದುರಿಸಬೇಕಾಗಿದೆ ಎಂದರು.
ವಿದ್ಯಾರ್ಥಿನಿ ಮನೆಗೆ ಭೇಟಿ: ಶಾಸಕ ಮಹದೇವಪ್ರಸಾದ್ ಅಪಘಾತದಿಂದ ಮತಪಟ್ಟ ಗುಮಟಾಪುರದ ವಿದ್ಯಾರ್ಥಿನಿ ಸಂಧ್ಯಾ ಮನೆಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು. ಗಾಯಗೊಂಡ ಮತ್ತೊಬ್ಬ ವಿದ್ಯಾರ್ಥಿನಿ ಮನೆಗೂ ಭೇಟಿ ನೀಡಿ, ಸರ್ಕಾರದಿಂದ ಚಿಕಿತ್ಸಾ ವೆಚ್ಚ ಭರಿಸಲು ಒತ್ತಾಯಿಸುವುದಾಗಿ ಭರವಸೆ ನೀಡಿದರು.
ಜಿಪಂ ಅಧ್ಯಕ್ಷೆ ಜಿ.ನಾಗಶ್ರೀ, ಉಪಾಧ್ಯಕ್ಷ ಪಿ.ಮಹದೇವಪ್ಪ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರತ್ನಮ್ಮ, ತಾಪಂ ಮಾಜಿ ಅಧ್ಯಕ್ಷೆ ಪದ್ಮಾಚಂದ್ರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಯ್ಯದ್ ರಫಿ, ಬಿ.ಕೆ.ರವಿಕುಮಾರ್, ಹೊಂಗನೂರು ಚಂದ್ರು, ಎಪಿಎಂಸಿ ಅಧ್ಯಕ್ಷ ಆಲ್ದೂರು ರಾಜಶೇಖರ್, ಬೂದಂಬಳ್ಳಿ ಶಂಕರ್, ತಾಳವಾಡಿ ಪಂಚಾಯ್ತಿ ಯೂನಿಯನ್ ಅಧ್ಯಕ್ಷ ನಂಜುಂಡನಾಯ್ಕ, ತಿಗಣಾರೆ ಪಂಚಾಯ್ತಿ ಅಧ್ಯಕ್ಷ ಕಾಳನಾಯ್ಕ, ಸ್ಥಳೀಯ ಮುಖಂಡರಾದ ದೇವಣ್ಣ, ವೀರಭದ್ರಸ್ವಾಮಿ, ಶಾಂತಪ್ಪ, ಶಿವಾಲಂಕಾರಪ್ಪ, ಮಾದೇಶ್ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!