ಕೊಳ್ಳೇಗಾಲ: ಪಟ್ಟಣದಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಣೆಗಳಿಂದ ಕೂಡಿದ ಗಾಳಿಪಟದ ಹಬ್ಬವನ್ನು ಪಟ್ಟಣದ ನಾಗರಿಕರು ಸಡಗರ ಸಂಭ್ರಮದಿಂದ ತಮ್ಮ ಮಕ್ಕಳೊಂದಿಗೆ ಆಚರಿಸಿದರು.
ಪಟ್ಟಣದಲ್ಲಿ ಮಲೆ ಮಹದೇಶ್ವರರು ಮಂಡಿಯೂರಿದ್ದ ಮರಡಿಗುಡ್ಡ ಹಾಗೂ ಸರ್ಕಾರಿ ಎಂ.ಜಿ.ಎಸ್ ಕಾಲೇಜು ಆವರಣಗಳಲ್ಲಿ ಗಾಳಿ ಪಟದ ಹಬ್ಬದ ಹಿನ್ನೆಲೆ ವಿವಿಧ ಆಕೃತಿಯ ಗಾಳಿ ಪಟಗಳು ಹಾರಿ ಬಿಡುವ ಮೂಲಕ ಸಂತಸ ಪಟ್ಟು ಸಂಭ್ರಮಿಸಿದರು.
ಆಷಾಡ ಮಾಸದಲ್ಲಿ ಕೊಳ್ಳೇಗಾಲದಲ್ಲಿ ವಿಶೇಷವಾಗಿ ಆಚರಿಸಲ್ಪಡುವ ಗಾಳಿಪಟದ ಹಬ್ಬದಲ್ಲಿ ಕುಟುಂಬದ ಸದಸ್ಯರೆಲ್ಲರೂ ತಮ್ಮ ಜೊತೆಗೂಡಿ ಮಕ್ಕಳನ್ನು ಹಾಗೂ ಬಂಧುಗಳನ್ನು ಕರೆತಂದು ವಿವಿಧ ಆಕೃತಿ ಆಕಾರ ಬಣ್ಣ ಬಣ್ಣಾರ ಪಟ ತಂದು ಹಾರಿಸಿ ಸಂಭ್ರಮಿಸುತ್ತಾರೆ. ಹಬ್ಹದ ಹಿನ್ನೆಲೆ ಮರಡಿಗುಡ್ಡದ ಮಹದೇಶ್ವರ ದೇವಾಲಯಕ್ಕೆ ಜನಜಾತ್ರೆ ನೆರೆದಿತ್ತು. ದೇವರ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡು ಬಂತು. ಪಟದ ಹಬ್ಬದ ಹಿನ್ನೆಲೆ ಯುವಕರು ನಮ್ಮ ನೆಚ್ಚಿನ ನಟರಾದ ಸುದೀಪ್, ದರ್ಶನ್, ದಿ. ವಿಷ್ಣುವರ್ಧನ್, ಹಾಗೂ ಪಕ್ಷಿಯ ವಿವಿಧ ಮಾದರಿಯ ಗಾಳಿ ಪಟ ಸೇರಿದಂತೆ ಭಾನಂಗಳದಲ್ಲಿ ಹಲವು ವಿನ್ಯಾಸದಿಂದ ತಯಾರಿಸಲ್ಪಟ್ಟ ಗಾಳಿ ಪಟ್ಟ ಚಿತ್ತಾರ ಮೂಡಿಸುವ ಮೂಲಕ ನೆರೆದಿದ್ದ ಸಾರ್ವಜನಿಕರಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು.
ಹಬ್ಬದ ಹಿನ್ನೆಲೆ ಮರಡಿಗುಡ್ಡದ ಮಹದೇಶ್ವರಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ನಡೆಯಿತು.