ಚಿಕ್ಕಮಗಳೂರು

ರಾಜಕಾರಣಿಗಳನ್ನು ಆಹ್ವಾನಿಸುವುದಿಲ್ಲ

ಚನ್ನಗಿರಿ: ಧಾರ್ಮಿಕ ಕಾರ್ಯಕ್ರಮಗಳಿಗೆ ಜನಪ್ರತಿನಿಧಿಗಳನ್ನು ಕರೆಸುವುದಿಲ್ಲ, ಆಹ್ವಾನ ಪತ್ರದಲ್ಲಿ ಅವರ ಹೆಸರನ್ನು ಹಾಕಿಸುವುದಿಲ್ಲ ಎಂದು ಬೆಂಗಳೂರಿನ ಗೋಸಾಯಿ ಮಹಾ ಸಂಸ್ಥಾನ ಮಠದ ಶ್ರೀ ಸುರೇಶ್ವರಾನಂದ ಭಾರತಿ ಮಹಾಸ್ವಾಮಿಗಳು ಹೇಳಿದರು.
 ಅವರು ಬುಧವಾರ ತಾಲೂಕಿನ ಹೊದಿಗೆರೆ ಗ್ರಾಮದಲ್ಲಿ ಛತ್ರಪತಿ ಶಿವಾಜಿಯ ತಂದೆ ಷಹಾಜಿ ರಾಜೇ ಬೌಂಸ್ಲೆಯವರ 349ನೇ ಪುಣ್ಯ ತಿಥಿ ಸಮಾರಂಭದಲ್ಲಿ ಮಾತನಾಡಿದ ಶ್ರೀಗಳು, ಇಂತಹ ದೇಶಭಕ್ತ ಮಹಾನೀಯರ ಪುಣ್ಯತಿಥಿ ಆಚರಿಸುತ್ತಿರುವ ಆರಂಭದಿಂದಲೂ ರಾಜಕಾರಣಿಗಳನ್ನು ಆಹ್ವಾನಿಸುತ್ತಲೆ ಬರುತ್ತಿದ್ದೇವೆ. ಆದರೆ ಒಂದು ಸಾರಿಯೂ ಬಂದಿಲ್ಲ. ಮುಂದಿನ ವರ್ಷದಿಂದ ಇಂತಹ ದೇಶಭಕ್ತರ ಕಾರ್ಯಕ್ರಮವನ್ನು ಜಾತ್ಯತೀತವಾಗಿ ಆಚರಿಸಲಾಗುವುದು ಎಂದರು.
ಆದಿಶ್ರೀಗೆ ನಮನ: ನಾಡಿನ ಹೆಸರಾಂತ ಆದಿಚುಂಚನಗಿರಿಯ ಶ್ರೀ ಬಾಲಗಂಗಾಧರ ನಾಥ ಸ್ವಾಮಿಗಳನ್ನು ಕಳೆದುಕೊಂಡ ನಾವು ಬಡವರಾಗಿದ್ದೇವೆ ಎಂದರು.
ಶ್ರೀಗಳವರ ಸಾಮಾಜಿಕ ಸೇವೆಯ ಬಗ್ಗೆ ಶ್ಲಾಘಿಸಿದರು.
ಮಾಜಿ ಶಾಸಕ ಮಹಿಮಾ ಜೆ.ಪಟೇಲ್ ಮಾತನಾಡಿ, ತಾಲೂಕಿನ ಅಭಿವೃದ್ದಿಗಾಗಿ ಎಲ್ಲರೂ ಚಿಂತನೆ ನಡೆಸಬೇಕಾಗಿದ್ದು, ಮುಂದೆ ಬರುವ ಚುನಾವಣೆಯನ್ನು ಯುದ್ದದ ರೀತಿಯಲ್ಲಿ ಮಾಡದೆ ಆಟದಂತೆ ಆಡಬೇಕು ಎಂದರು.
 ತಾಲೂಕು ಜೆಡಿಎಸ್ ಅಧ್ಯಕ್ಷ ಜಿಪಂ ಮಾಜಿ ಸದಸ್ಯ ಹೊದಿಗೆರೆ ರಮೇಶ್ ಮಾತನಾಡಿದರು.
ಆಶೀರ್ವಚನ: ಸಮಾರಂಭದ ದಿವ್ಯಸಾನ್ನಿಧ್ಯವನ್ನು ಚಿತ್ರದುರ್ಗದ ಗುರು ಕಬೀರಾನಂದ ಆಶ್ರಮದ ಶಿವಲಿಂಗಾನಂದ ಮಹಾಸ್ವಾಮಿಗಳು, ಬೊಮ್ಮೇನಹಳ್ಳಿಯ ಗುರುದೇವ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ಗ್ರಾಪಂ ಅಧ್ಯಕ್ಷೆ ಶೈಲಜಾ ಮಹದೇವಪ್ಪ, ಶಿವಾಜಿ ರಾವ್, ಅಜ್ಜೋಜಿರಾವ್, ಯಶವಂತರಾವ್, ಹನುಮಂತಪ್ಪ, ನಿಂಗೋಜಿರಾವ್, ರಾಮಚಂದ್ರರಾವ್ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್