ಚಿಕ್ಕಮಗಳೂರು

ಮಳೆ ಅಬ್ಬರ, ಜನ ತತ್ತರ; ಶಾಲೆಗೆ ರಜೆ

5 ತಾಲೂಕುಗಳ ಶಾಲೆಗಳಿಗೆ ರಜೆ ವಿಸ್ತರಣೆ, ಹಲವೆಡೆ ರಸ್ತೆಗಳು ಜಲಾವೃತ, ಭೂ ಕುಸಿತ

ಚಿಕ್ಕಮಗಳೂರು: ಮಳೆಯ ಅಬ್ಬರಕ್ಕೆ ಮಲೆನಾಡು ತತ್ತರಿಸಿದೆ. ಹಲವೆಡೆ ಭೂ ಕುಸಿತ ಉಂಟಾಗಿದ್ದು, ರಸ್ತೆಗಳು ಜಲಾವೃತಗೊಂಡಿವೆ. ಶುಕ್ರವಾರವೂ ಮಳೆ ಮುಂದುವರೆದಿದ್ದರಿಂದ ಮಲೆನಾಡಿನ ಐದು ತಾಲೂಕುಗಳಲ್ಲಿ ಶಾಲೆಗಳಿಗೆ ಶನಿವಾರವೂ ರಜೆಯನ್ನು ವಿಸ್ತರಿಸಲಾಗಿದೆ.
ಮಲೆನಾಡು ಭಾಗದಿಂದ ನೆರೆಯ ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಭೂ ಕುಸಿತ ಉಂಟಾಗಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ. ತುಂಗಾ, ಭದ್ರಾ ನದಿಗಳ ನೀರಿನಮಟ್ಟ ಏರಿಕೆಯಿಂದಾಗಿ ತಗ್ಗಿನ ಪ್ರದೇಶಗಳು ಜಲಾವೃತಗೊಂಡಿವೆ.
ಮಳೆ ಮುಂದುವರೆದಿದ್ದರಿಂದ ಶಾಲೆಗಳಿಗೆ ಮಕ್ಕಳು ಬಂದು ಹೋಗಲು ತೊಂದರೆಯಾಗುವುದರಿಂದ ಶುಕ್ರವಾರ ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ ಹಾಗೂ ಎನ್.ಆರ್.ಪುರ ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಶುಕ್ರವಾರ ಮಳೆಯ ಅಬ್ಬರ ಇನ್ನಷ್ಟು ತೀವ್ರವಾಗಿದ್ದರಿಂದ ಶನಿವಾರವೂ ಈ ಐದು ತಾಲೂಕುಗಳಲ್ಲಿ ರಜೆಯನ್ನು ವಿಸ್ತರಿಸಲಾಗಿದೆ.
ಜುಲೈ ತಿಂಗಳಲ್ಲಿ ಸತತವಾಗಿ 20 ದಿನಗಳ ಕಾಲ ಬಿಡುವಿಲ್ಲದೆ ಜಿಲ್ಲೆಯಲ್ಲಿ ಮಳೆ ಸುರಿಯಿತು. 5 ದಿನ ಬಿಡುವು ಕೊಟ್ಟು ಮತ್ತೆ ಆರಂಭಗೊಂಡ ಮಳೆ ಕಳೆದ 4 ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದು, ಜುಲೈ ತಿಂಗಳ ಕೊನೆಯ ದಿನವಾದ ಗುರುವಾರ ಮಲೆನಾಡು ಮಾತ್ರವಲ್ಲ, ಬಯಲುಸೀಮೆ ತಾಲೂಕುಗಳಲ್ಲೂ ಭಾರಿ ಮಳೆಯಾಗಿದೆ.
ಬಿಡುವಿಲ್ಲದ ಮಳೆ:  ಮೂಡಿಗೆರೆ ತಾಲೂಕಿನಲ್ಲಿ ಬಿಡುವಿಲ್ಲದೆ ಮಳೆ ಸುರಿಯುತ್ತಿದ್ದು, ದಕ್ಷಿಣಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಭೈರಾಪುರ ರಸ್ತೆಯಲ್ಲಿ ಶಿಶಿಲ ಗುಡ್ಡ ಕುಸಿದಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಗಾಳಿ, ಮಳೆಗೆ ಸುಮಾರು 45 ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿದು ಹೋಗಿದೆ.
ದಕ್ಷಿಣ ಕನ್ನಡ- ಶೃಂಗೇರಿ ರಸ್ತೆಯಲ್ಲಿರುವ ತನಿಕೋಡು, ನೆಮ್ಮಾರ್ ಬಳಿ ಗುರುವಾರ ರಾತ್ರಿಯಿಂದ ಶುಕ್ರವಾರ ಮಧ್ಯಾಹ್ನದವರೆಗೆ ರಸ್ತೆ ಸಂಪರ್ಕ ಕಡಿದು ಹೋಗಿತ್ತು. ಕಿಗ್ಗಾ, ತೆಕ್ಕೂರು, ಕೊಪ್ಪ- ಶೃಂಗೇರಿ- ಶಿವಮೊಗ್ಗ ರಸ್ತೆಯಲ್ಲಿರುವ ಆನೆಗುಂದ ಕಾವಡಿ ಬಳಿ ರಸ್ತೆ ನೀರಿನಿಂದ ಜಲಾವೃತವಾಗಿದೆ. ಶೃಂಗೇರಿ ಪಟ್ಟಣದ ಗಾಂಧಿ ಮೈದಾನ ತುಂಗಾ ನದಿ ನೀರಿನಿಂದಾಗಿ ಜಲಾವೃತವಾಗಿದ್ದು, ಪ್ರವಾಸಿಗರ ಕೆಲವು ವಾಹನಗಳು ನೀರಿನಲ್ಲಿ ಸಿಲುಕಿಕೊಂಡಿದ್ದವು. ಕುರುಬರ ಕೇರಿಯೊಳಗೆ ನೀರು ನುಗ್ಗಿದೆ.
ಕೊಪ್ಪ ತಾಲೂಕಿನಲ್ಲಿ ತುಂಗಾ ನದಿ ನೀರಿನ ಮಟ್ಟ ಏರಿಕೆಯಾಗಿದ್ದರಿಂದ ಹರಿಹರಪುರ- ಕಮ್ಮರಡಿ ರಸ್ತೆಯಲ್ಲಿರುವ ಕಾರಂಗಿ ಬಳಿ ಹಾಗೂ ನಾರ್ವೆ- ಹರ್ಡಿಕೊಪ್ಪ ಬಳಿ ರಸ್ತೆ ಜಲಾವೃವಾಗಿದೆ. ಒಟ್ಟಾರೆ ಮಳೆಯಿಂದಾಗಿ ಮಲೆನಾಡು ತತ್ತರಿಸಿದೆ.
ಕೆರೆಕಟ್ಟೆಯಲ್ಲಿ ಹೆಚ್ಚು ಮಳೆ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 3281.9 ಮಿ.ಮೀ. ಮಳೆಯಾಗಿದ್ದು, ಶೃಂಗೇರಿ ತಾಲೂಕಿನ ಕೆರೆಕಟ್ಟೆಯಲ್ಲಿ ಅತಿ ಹೆಚ್ಚು ಮಳೆ ಬಂದಿದೆ. ಅಂದರೆ, 204.6 ಮಿ.ಮೀ. ಮಳೆ ಬಂದಿದೆ.
ಚಿಕ್ಕಮಗಳೂರು ನಗರದಲ್ಲಿ 32 ಮಿ.ಮೀ., ವಸ್ತಾರೆ- 62, ಜೋಳ್ದಾಳ್- 64, ಆಲ್ದೂರು- 90, ಅತ್ತಿಗುಂಡಿ- 89, ಸಂಗಮೇಶ್ವರಪೇಟೆ- 101, ಬ್ಯಾರವಳ್ಳಿ- 93.2, ಮಳಲೂರು- 42, ಕಡೂರು ಪಟ್ಟಣ- 13.2, ಯಗಟಿ- 8.6, ಸಖರಾಯಪಟ್ಟಣ- 16.8, ಗಿರಿಯಾಪುರ- 15, ಬೀರೂರು- 17, ಎಮ್ಮೆದೊಡ್ಡಿ- 35.4, ಕೊಪ್ಪ- 155.6, ಹರಿಹರಪುರ- 185.4, ಜಯಪುರ- 132.4, ಕಮ್ಮರಡಿ- 143.5, ಬಸರೀಕಟ್ಟೆ- 168.5, ಮೂಡಿಗೆರೆ- 89.4, ಕೊಟ್ಟಿಗೆಹಾರ- 129, ಜಾವಳಿ- 124, ಗೋಣಿಬೀಡು- 65, ಕಳಸ- 142.2, ಎನ್.ಆರ್.ಪುರ- 84.8, ಬಾಳೆಹೊನ್ನೂರು- 101, ಮೇಗರಮಕ್ಕಿ- 90, ಶೃಂಗೇರಿ- 130, ಕಿಗ್ಗಾ- 179.4, ತರೀಕೆರೆ- 40, ಲಕ್ಕವಳ್ಳಿ- 71, ಅಜ್ಜಂಪುರ- 22, ಶಿವನಿ- 9, ಬುಕ್ಕಾಂಬೂದಿ- 12.2, ಲಿಂಗದಹಳ್ಳಿ- 30.2, ತಣಿಗೆಬೈಲು- 45.2, ತ್ಯಾಗದಬಾಗಿ- 41.8, ರಂಗನೇಹಳ್ಳಿಯಲ್ಲಿ 54.6 ಮಿ.ಮೀ. ಮಳೆ ಬಂದಿದೆ.    
ಎನ್‌ಆರ್‌ಪುರದಲ್ಲಿ ಇಂದೂ ರಜೆ
ನರಸಿಂಹರಾಜಪುರ: ಶುಕ್ರವಾರವೂ ಮಳೆಯ ಆರ್ಭಟ ಮುಂದುವರಿದಿದ್ದು ಕೆಲವು ಭಾಗಗಳಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಕುದುರೆಗುಂಡಿ-ಕಾನೂರು ಮಾರ್ಗದ ರಸ್ತೆಯ ಮೇಲೆ ನೀರು ನಿಂತಿದ್ದು ಬಸ್ಸು ಹಾಗೂ ಇತರೆ ವಾಹನಗಳು ಗುಡ್ಡೇಹಳ್ಳ, ಹೊಳೆಕೊಪ್ಪ, ಬಾಳೆಹಿತ್ತಲು ಮಾರ್ಗವಾಗಿ ಸಂಚರಿಸುತ್ತಿವೆ.
ಕುದುರೆಗುಂಡಿ ಹಳ್ಳವು ಉಕ್ಕಿ ಸಮೀಪದ ಅಡಕೆ ತೋಟ, ಬತ್ತದ ಗದ್ದೆಯ ಮೇಲೆ ನೀರು ನಿಂತಿದೆ. ಮುತ್ತಿನಕೊಪ್ಪ ಗ್ರಾಮ ಪಂಚಾಯ್ತಿಯ ಶಂಕರಪುರ-ಮುಡಬ ಮಾರ್ಗದಲ್ಲಿ ಬರುವ ಶಂಕರಪುರ ಸೇತುವೆ ಮೇಲೆ ನೀರು ನಿಂತಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ.
ಮುತ್ತಿನಕೊಪ್ಪದ ನೂರಾರು ಎಕರೆ ನಾಟಿ ಮಾಡಿದ ಬತ್ತದ ಗದ್ದೆಯಲ್ಲಿ ತುಂಗಾ ನದಿಯ ನೀರು ನುಗ್ಗಿ ಬತ್ತದ ಸಸಿಗಳು ಕೊಳೆಯುತ್ತಿದೆ. ಭಾರೀ ಮಳೆ, ಗಾಳಿ ಪರಿಣಾಮವಾಗಿ ಅಡಕೆ ಮರಗಳು ಉರುಳಿ ಬೀಳುತ್ತಿವೆ. ಥಂಡಿ ವಾತಾವರಣದಿಂದ ಎಳೆ ಅಡಕೆ ಕಾಯಿಗಳು ಕೆಳಕ್ಕೆ ಬೀಳುತ್ತಿದ್ದು ಕೊಳೆಯ ಭೀತಿ ಎದುರಾಗಿದೆ.
ಶನಿವಾರ ರಜೆ: ಶುಕ್ರವಾರ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಮುಂಜಾಗ್ರತ ಕ್ರಮವಾಗಿ ಶನಿವಾರವೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಮೇಶ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ