ಚಿಕ್ಕಮಗಳೂರು

'ಬಡವರನ್ನು ತಲುಪದ ಸಹಕಾರ ಚಳವಳಿ'

ಮೂಡಿಗೆರೆ: ಸಹಕಾರಿ ಚಳವಳಿ ಬಡವರನ್ನು ತಲುಪಿಲ್ಲ. ಎಲ್ಲಾ ವರ್ಗದವರನ್ನು ಗಣನೆಗೆ ತೆಗೆದುಕೊಂಡಲ್ಲಿ  ಸಹಕಾರಿ ಚಳವಳಿಗೆ ಒಂದು ಅರ್ಥ ಬರುತ್ತದೆ ಎಂದು ಶಾಸಕ ಬಿ.ಬಿ.ನಿಂಗಯ್ಯ ಅಭಿಪ್ರಾಯಿಸಿದರು.
ಪಟ್ಟಣದ ರೈತ ಭವನದಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನೂತನ ಅಧ್ಯಕ್ಷ ಎನ್.ಜೆ. ಜಯರಾಮು ಹಾಗೂ ಅಖಿಲ ಭಾರತ ವಕೀಲರ ಪರಿಷತ್ ಉಪಾಧ್ಯಕ್ಷ ಎಸ್.ಎಲ್.ಭೋಜೇಗೌಡರಿಗೆ ಮೂಡಿಗೆರೆ ತಾ. ವ್ಯವಸಾಯೋತ್ಪನ್ನ ಸಹಕಾರ ಸಂಘ ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯೆ ಮೋಟಮ್ಮ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿದರು. ಜೆಡಿಎಸ್ ಮುಖಂಡ ಎಂ.ಎಸ್.ಬಾಲಕೃಷ್ಣ ಉದ್ಘಾಟಿಸಿದರು. ಟಿಎಪಿಸಿಎಂ ಅಧ್ಯಕ್ಷ ಎಚ್.ಟಿ.ರವಿಕುಮಾರ್, ಹಳಸೆ ಶಿವಣ್ಣ, ಎಪಿಎಂಸಿ ಅಧ್ಯಕ್ಷ ಸತೀಶ್, ಎಂ.ಎಲ್.ಕಲ್ಲೇಶ್, ಜಿಪಂ ಸದಸ್ಯ ವಿ.ಕೆ.ಶಿವೇಗೌಡ, ಬಿ.ಎನ್. ಜಯಂತ್,ಎಂ.ವಿ.ಜಗದೀಶ್, ಡಿ.ಎಲ್. ಅಶೋಕಕುಮಾರ್, ಜಿ.ಯು. ಚಂದ್ರೇಗೌಡ, ಡಿ.ಬಿ.ಜಯಣ್ಣ ಜಿ.ಕೆ.ಮಂಜಪ್ಪಯ್ಯ, ಡಿ.ಆರ್. ಉಮಾಪತಿ, ಡಿ.ಬಿ.ಜಯಪ್ರಕಾಶ್, ಪ.ಪಂ.ಅಧ್ಯಕ್ಷೆ ಪಾರ್ವತಮ್ಮ,  ಎಂ.ಎಂ.ಲಕ್ಷ್ಮಣಗೌಡ, ಯು.ಎಚ್.ಹೇಮಶೇಖರ್, ಅಣಜೂರು ಸುಬ್ರಾಯಗೌಡ, ಬಸ್ನೀ ನಾರಾಯಣಗೌಡ, ರಾಮಕೃಷ್ಣ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಖಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT