ಚಿತ್ರದುರ್ಗ

ಕಾಂಪೌಂಡ್ ತೆರವಿಗೆ ಆದೇಶ

ಹಿರಿಯೂರು: ಸಾರ್ವಜನಿಕ ದೂರಿನ ಮೇರೆಗೆ ಪಟ್ಟಣದ 16 ನೇ ವಾರ್ಡ್ ನಿವಾಸಿ ಹಬೀಬ್ ಖಾನ್ ಎಂಬುವರು ಬೈಪಾಸ್ ರಸ್ತೆಗೆ ಹೊಂದಿಕೊಂಡಂತೆ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಕಂಪೌಂಡ್ ತೆರವುಗೊಳಿಸುವಂತೆ ಪುರಸಭಾಧ್ಯಕ್ಷ ಜಬೀವುಲ್ಲಾ ಆದೇಶಿಸಿದ್ದಾರೆ.
ಪಟ್ಟಣದ  ಭಾರತ್ ಸಾಮಿಲ್ ಮಾಲಿಕ ಹಬೀಬ್ ಖಾನ್ ಹೆಸರಿನ ನಿವೇಶನವು ಉತ್ತರ ದಕ್ಷಿಣವಾಗಿ 42 ಮೀಟರ್ ಮಾತ್ರ ಇದ್ದರೂ ಅದನ್ನು 54  ಮೀಟರ್‌ವರೆಗೆ ವಿಸ್ತರಿಸಿ ಕೌಂಪೌಂಡ್ ನಿರ್ಮಿಸಿದ್ದರ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ ಎಂದು ಪುರಸಭಾಧ್ಯಕ್ಷರು ತಿಳಿಸಿದ್ದಾರೆ. ಈ ಕೌಂಪೌಂಡ್ ನಿರ್ಮಾಣ ಸಂದರ್ಭದಲ್ಲಿ ಪುರಸಭೆಯನ್ನು ವಂಚಿಸಿರುವುದು ತನಿಖೆಯಿಂದ ಧೃಡ ಪಟ್ಟ ಕಾರಣಕ್ಕೆ ಪುರಸಭೆಯ ಸಿಬ್ಬಂದಿ ಮತ್ತು ಉಪಾಧ್ಯಕ್ಷ ಆರ್.ರವಿಚಂದ್ರ ನಾಯ್ಕ ಸ್ಥಳಕ್ಕೆ ತೆರಳಿ ಕೌಂಪೌಂಡ್ ಗೋಡೆ ವೀಕ್ಷಿಸಿದರು.  ಉಪಾಧ್ಯಕ್ಷ ಆರ್.ರವಿಚಂದ್ರ ನಾಯ್ಕ ಮಾತನಾಡಿ, ಸಾರ್ವಜನಿಕ ಆಸ್ತಿಗಳನ್ನು ದುರುಪಯೋಗ ಮಾಡಿಕೊಳ್ಳುವುದರ ವಿರುದ್ಧ ಪುರಸಭೆಯು ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಿದೆ. ಸ್ಥಳೀಯ ನಿವಾಸಿಗಳ ದೂರಿನ ಮೇರೆಗೆ ಈ ಸಮಸ್ಯೆಗೆ ಇಂದು ಪರಿಹಾರ ಕಲ್ಪಿಸಲಾಗುತ್ತಿದೆ ಎಂದರು. ಇಂಥ ಪ್ರಕರಣಗಳು ಪಟ್ಟಣದ ವ್ಯಾಪ್ತಿಯಲ್ಲಿ ಎಲ್ಲೇ ಕಂಡು ಬಂದರೂ ಕೂಡಲೇ ಪುರಸಭೆಯನ್ನು ಸಂಪರ್ಕಿಸಿ ಮಾಹಿತಿ ನೀಡಬೇಕೆಂದು ಸಾರ್ವಜನಿಕರನ್ನು ಮನವಿ ಮಾಡುವುದಾಗಿ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

60 ದಿನಗಳ ಕದನ ವಿರಾಮ ವಿಸ್ತರಣೆಗೆ ಅಮೆರಿಕ, ಇರಾನ್ ಸಂಧಾನಕಾರರು ಒಪ್ಪಿಗೆ; ಟ್ರಂಪ್ ಅನುಮೋದನೆ ಬಾಕಿ

ಕರ್ನಾಟಕ ನಾಯಕತ್ವ ಬದಲಾವಣೆಯ ನಡುವೆ CM ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತೆ ದೆಹಲಿಗೆ

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಶನಿವಾರ; ತದನಂತರ ನೂತನ ಸಿಎಂ ಪದಗ್ರಹಣ ಸಾಧ್ಯತೆ!

ಕ್ರೇಜಿಸ್ಟಾರ್ ರವಿಚಂದ್ರನ್ ವಿರುದ್ಧವೇ ಅತ್ಯಾಚಾರ ಯತ್ನ ಆರೋಪ, ಮಾನನಷ್ಟ ಮೊಕದ್ದಮೆ: ಕಣ್ಣೀರಿಟ್ಟು ಕ್ಷಮೆ ಕೇಳಿದ 'ಹಳ್ಳಿಮೇಷ್ಟ್ರು' ನಟಿ Bindiya!

Karnataka CM News LIVE Updates | ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ದೆಹಲಿಗೆ ಪ್ರಯಾಣ; ಸಿಎಲ್‌ಪಿ ಸಭೆ ಶನಿವಾರ ಸಾಧ್ಯತೆ!

SCROLL FOR NEXT