ದಕ್ಷಿಣ ಕನ್ನಡ

ದಫನ ಭೂಮಿಯಿದ್ದರೂ ಸ್ಥಳಾವಕಾಶ ಕೊರತೆ

ಸಂಶುದ್ದೀನ್ ಸಂಪ್ಯ
ಪುತ್ತೂರು: ಮನುಷ್ಯನ ಸಾವು ಹುಟ್ಟಿನಷ್ಟೇ ಪ್ರಮುಖವಾಗಿದೆ. ಜೀವ ಕಳೆದುಕೊಂಡವರಿಗೆ ಚಿತಾಗಾರ ಅಥವಾ ದಫನ ಸ್ಥಳಕ್ಕೆ ಇತ್ತೀಚೆಗೆ ಕೊರತೆ ಕಂಡುಬರುತ್ತಿದೆ. ಪುತ್ತೂರು ನಗರದಲ್ಲಿ ಅಲ್ಪ ಮಟ್ಟಿಗೆ ಉತ್ತಮ ವ್ಯವಸ್ಥೆಯಿದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ರುದ್ರಭೂಮಿ ಮತ್ತು ದಫನ ಭೂಮಿಯ ಸಮಸ್ಯೆಗಳು ಹಲವೆಡೆ ಕಾಡುತ್ತಿದೆ.
ಪುತ್ತೂರು ಪೇಟೆಯಲ್ಲಿ ಉತ್ತಮ ಚಿತಾಗಾರವಿದೆ. ಇಲ್ಲಿನ ಮಹತೋಭಾರ ಶ್ರೀ ಮಹಾಲಿಂಗೇಶ್ವದ ದೇವಳದ ಮುಂಭಾಗದಲ್ಲಿ ಪುತ್ತೂರಿನ ಚಿತಾಗಾರವಿದ್ದು, ಪುರಸಭಾ ಆಡಳಿತವು ಇದರ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಅಂತಿಮ ಕ್ರಿಯೆಗೆ ಬೇಕಾಗುವ ಎಲ್ಲಾ ವ್ಯವಸ್ಥೆಗಳು ಇಲ್ಲಿವೆ.
ಮುಸ್ಲಿಂ ಮತ್ತು ಕ್ರಿಶ್ಚನ್ ಸಮುದಾಯದವರು ಸ್ಮಶಾನ ಭೂಮಿಯಲ್ಲಿ ಹೂಳುತ್ತಿದ್ದು, ಪುತ್ತೂರಿನ ಕೇಂದ್ರ ಜುಮ್ಮಾ ಮಸೀದಿಗೊಳಪಟ್ಟ ಬದ್ರಿಯಾ ಮಸೀದಿಯ ಪಕ್ಕದಲ್ಲಿರುವ ದಫನ ಭೂಮಿಯಲ್ಲಿ ಇದೀಗ ಸ್ಥಳಾವಕಾಶದ ಕೊರತೆಯಿದೆ. ಈ ಹಿನ್ನೆಲೆಯಲ್ಲಿ ಪುರಸಭಾ ವ್ಯಾಪ್ತಿಯ ಬಪ್ಪಳಿಗೆ ಎಂಬಲ್ಲಿ ದಫನ ಕಾರ್ಯಕ್ಕಾಗಿ ಸ್ಥಳ ಖರೀದಿಸಲಾಗಿದೆ.
ಪುತ್ತೂರು ತಾಲೂಕಿನಾದ್ಯಂತ ಸುಮಾರು 165ಕ್ಕೂ ಹೆಚ್ಚು ಮಸೀದಿಗಳಿದ್ದು, ಬಹುತೇಕ ಮಸೀದಿ ವ್ಯಾಪ್ತಿಗಳಲ್ಲಿ ದಫನ ಕಾರ್ಯ ನಡೆಸಲಾಗುತ್ತಿದೆ. ಪುತ್ತೂರು ನಗರದ ಏಳ್ಮುಡಿ ಎಂಬಲ್ಲಿ ಕ್ರಿಶ್ಚನ್ ಸಮುದಾಯದ ದಫನ ಭೂಮಿಯಿದ್ದು, ನಗರ ಮತ್ತು ಕಸ್ಬಾ ವ್ಯಾಪ್ತಿಯಲ್ಲಿ ಮೃತರಾದವರನ್ನು ಇಲ್ಲಿ ದಫನ ಮಾಡಲಾಗುತ್ತಿದೆ.
ಮೂಲ ಸೌಕರ್ಯವಿಲ್ಲದ ಚಿತಾಗಾರ: ಒಳಮೊಗ್ರು ಗ್ರಾಮದ ಜನತಾ ಕಾಲೋನಿಯಲ್ಲಿ ಚಿತಾಗಾರವೊಂದು ನಿರ್ಮಿಸಲಾಗಿದೆ. ಆದರೆ, ಇಲ್ಲಿ ಸಮರ್ಪಕವಾದ ವ್ಯವಸ್ಥೆಗಳಿಲ್ಲ. ಅಧಿಕಾರಿಗಳ ಇಚ್ಚಾ ಶಕ್ತಿಯ ಕೊರತೆಯಿಂದಾಗಿ ಚಿತಾಗಾರ ಅರ್ಧದಲ್ಲಿಯೇ ಜೀವ ಕಳೆದುಕೊಂಡಿದೆ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮದ ಪರ್ಪುಂಜ ಜನತಾ ಕಲೋನಿಯಲ್ಲಿ ಸಾರ್ವಜನಿಕರ ಅನುಕೂಲಕ್ಕೆಂದು ಹಿಂದೂ ಮತ್ತು ಮುಸ್ಲಿಂ ಸಮುದಾಯದವರಿಗೆ ಪ್ರತ್ಯೇಕವಾಗಿ ದಫನ ಭೂಮಿಯನ್ನು ಒದಗಿಸಲಾಗಿದೆ. ಇಲ್ಲಿಯೂ ಕಾಮಗಾರಿ ಅರ್ಧದಲ್ಲೇ ಸ್ಥಗಿತಗೊಂಡಿದೆ. ಮುಸ್ಲಿಂ ದಫನ ಭೂಮಿಗೆ ಹೆಚ್ಚಿನ ವ್ಯವಸ್ಥೆಯ ಅವಶ್ಯಕತೆ ಇಲ್ಲದಿರುವ ಕಾರಣ ಇದರ ಉಪಯೋಗ ಆರಂಭಗೊಂಡಿದೆ. ಆದರೆ, ಹಿಂದೂ ರುದ್ರ ಭೂಮಿಯಲ್ಲಿ ಕನಿಷ್ಠ ಮೂಲ ಸೌಕರ್ಯವೂ ಇಲ್ಲ.
ಜನತಾ ಕಾಲೋನಿಯಲ್ಲಿ ಸುಮಾರು ಹತ್ತು ವರ್ಷಗಳ ಹಿಂದೆ ರುದ್ರ ಭೂಮಿಗೆಂದು ಪಂಚಾಯಿತಿ ಕಾಯ್ದಿರಿಸಿದ್ದು, ತಾ.ಪಂ. ಅನುದಾನದಿಂದ ಸಮತಟ್ಟು ಕಾಮಗಾರಿ, ಶೆಡ್ ನಿರ್ಮಾಣ ಮಾತ್ರ ಮಾಡಲಾಗಿದೆ. ಇದಾಗಿ ಮೂರು ವರ್ಷ ಕಳೆದರೂ ಕಾಮಗಾರಿ ಮುಂದುವರಿಯಲಿಲ್ಲ.
ಅಂದಾಜು ವೆಚ್ಚ, ನೀಲ ನಕಾಶೆ ಮಾಡಲು ಸೂಚಿಸಿದ್ದರೂ ಸಂಬಂಧಪಟ್ಟವರು ಆಸಕ್ತಿ ತೋರದ ಕಾರಣ ಕಾಮಗಾರಿ ಅರ್ಧದಲ್ಲೇ ನಿಂತಿದೆ. ಸ್ಥಳೀಯ ಜನಪ್ರತಿನಿಧಿ, ಅಧಿಕಾರಿಗಳಿಗೆ ಅವಕಾಶಕೊಟ್ಟು ಕೂಡಲೇ ಇದಕ್ಕೊಂದು ಪರಿಹಾರ ಕೈಗೊಳ್ಳಬೇಕು ಮತ್ತು ಈ ರುದ್ರಭೂಮಿ ಸಾರ್ವಜನಿಕರ ಉಪಯೋಗಕ್ಕೆ ಆದಷ್ಟು ಶೀಘ್ರದಲ್ಲಿ ಮೀಸಲಾಗಲಿ ಎಂಬುದೇ ಇಲ್ಲಿನ ಜನರ ಬೇಡಿಕೆ.
ಇಲ್ಲಿರುವ ಕೊರಗ ಬುಡಕಟ್ಟು ಸಮುದಾಯದವರಿಂದ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸ್ಮಶಾನಕ್ಕೆ ಭೂಮಿ ನೀಡುವಂತೆ ನಿರಂತರ ಬೇಡಿಕೆಗಳು ಕೇಳಿ ಬರುತ್ತಿದೆ. ಆದರೆ, ಸಂಬಂಧಿಸಿದವರ ಗಮನ ಇತ್ತ ಹರಿಯಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್