ದಕ್ಷಿಣ ಕನ್ನಡ

ಸಂಚಾರಿ ಕ್ಲಿನಿಕ್ ರದ್ದು

ಮಂಗಳೂರು: ರಾಜ್ಯದಲ್ಲಿ ಸಂಚಾರಿ ಕ್ಲಿನಿಕ್ ವ್ಯವಸ್ಥೆ ವಿಸ್ತರಣೆ ರದ್ದುಪಡಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಸಂಚಾರಿ ಕ್ಲಿನಿಕ್ ಉಸ್ತುವಾರಿಯನ್ನು ಎನ್‌ಜಿಒಗೆ ವಹಿಸಿದ್ದ ಸರ್ಕಾರ, ಅದಕ್ಕೆ ವಾರ್ಷಿಕ 22 ಲಕ್ಷ ನೀಡುತ್ತಿತ್ತು.   ಹಳ್ಳಿಗಳಲ್ಲಿ ಕಾರ್ಯನಿರ್ವಹಿಸಲು ಸರ್ಕಾರಕ್ಕೇ ವೈದ್ಯರು ಸಿಗುತ್ತಿಲ್ಲ. ಇವರಿಗೆ ಹೇಗೆ ವೈದ್ಯರು ಸಿಗುತ್ತಿದ್ದಾರೆ ಎಂಬ ತನಿಖೆ ನಡೆಸಿದಾಗ ಶೇ.10 ಸಂಚಾರಿ ಕ್ಲಿನಿಕ್‌ಗಳು ಮಾತ್ರ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದವು. ಅಂಬುಲೆನ್ಸ್ ಅನ್ನು ವೈಯಕ್ತಿಕ ಉದ್ದೇಶಗಳಿಗೆ ಬಳಸುತ್ತಿದ್ದುದೂ ಗಮನಕ್ಕೆ ಬಂದಿತು ಎಂದು ಸಚಿವರು ತಿಳಿಸಿದ್ದಾರೆ.
ಸಚಿವರು ಹೇಳಿದ್ದಿಷ್ಟು: ಸಂಚಾರಿ ಕ್ಲಿನಿಕ್ ಸೇವೆ ಒದಗಿಸುವ ಎನ್‌ಜಿಒ ಯಾವುದಾದರೂ ಕ್ಲಿನಿಕ್‌ನ ವೈದ್ಯರ ಜತೆ ಒಪ್ಪಂದ ಮಾಡಿಕೊಳ್ಳುತ್ತದೆ. ಆ ವೈದ್ಯ ಹೋಗುತ್ತಾರೆಯೊ ಇಲ್ಲವೋ ನೋಡುವುದು ಜಿಲ್ಲಾ ಆರೋಗ್ಯಾಧಿಕಾರಿ ಕೆಲಸ. ವೈದ್ಯರು ಕ್ಲಿನಿಕ್‌ನಲ್ಲಿಯೇ ಇರುತ್ತಿದ್ದರು, ವರದಿ ಪ್ರಕಾರ ಸರ್ಕಾರಿ ಕರ್ತವ್ಯಕ್ಕೆ ತೆರಳುತ್ತಿದ್ದರು!
ಖಾಸಗಿ ಸಂಸ್ಥೆಗೆ ವಹಿಸಲು ಟೆಂಡರ್ ಕರೆಯಲು ಪ್ಲಾನ್ ಮಾಡಿದೆವು. ಆಗ ಮೊಬೈಲ್ ಕ್ಲಿನಿಕ್‌ನವರು ಕೋರ್ಟ್‌ನಿಂದ ತಡೆಯಾಜ್ಞೆ ತಂದರು. ಆಗ ಸರ್ಕಾರ ಈ ಸೇವೆಯನ್ನು 3 ತಿಂಗಳು ವಿಸ್ತರಿಸಿತು. ಮೂರು ತಿಂಗಳ ಬಳಿಕ ಮತ್ತೆ ತಡೆಯಾಜ್ಞೆ ತರುವುದು, ನಾವು ವಿಸ್ತರಿಸುವುದು ಹೀಗೆ ಒಂದುವರೆ ವರ್ಷದಿಂದ ನಡೆದಿದೆ. ಇದಕ್ಕೆ ಅಂತ್ಯ ಹಾಡಿದ್ದೇವೆ ಎಂದರು.

ಚಿಕ್ಕೋಡಿಯ 6 ಸೇತುವೆ ಸಂಚಾರಕ್ಕೆ ಮುಕ್ತ
ಚಿಕ್ಕೋಡಿ: ತಾಲೂಕಿನಲ್ಲಿನ ಒಟ್ಟು 7 ಸೇತುವೆಗಳ ಪೈಕಿ 6 ಸೇತುವೆ ಸಂಚಾರಕ್ಕೆ ಮುಕ್ತವಾಗಿದ್ದು, ಕಲ್ಲೋಳ-ಂುಡೂರ ಸೇತುವೆ ಮೇಲೆ ಇನ್ನೂ ಮೂರು ಅಡಿ ನೀರಿದ್ದು ಸಂಚಾರಕ್ಕೆ ಮುಕ್ತವಾಗಿಲ್ಲ ಎಂದು ಉಪವಿಭಾಗಾಧಿಕಾರಿ ಡಾ. ರುದ್ರೇಶ ಘಾಳಿ ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಮಂಗಳವಾರ ಮಳೆ ಹೆಚ್ಚಿದ್ದರೂ, ಹರಿವಿನ ಪ್ರಮಾಣ ಕಡಿಮೆಂಾದ ಹಿನ್ನೆಲೆಂುಲ್ಲಿ ತಾಲೂಕಿನಲ್ಲಿನ ಮಲಿಕವಾಡ- ದತ್ತವಾಡ, ಸದಲಗಾ-ಬೋರಗಾಂವ, ಕಾರದಗಾ-ಭೋಜ, ಬೋಜವಾಡಿ-ಕುನ್ನೂರ, ಸಿದ್ನಾಳ-ಅಕ್ಕೋಳ, ಜತ್ರಾಟ-ಭಿವಸಿ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ. ಕಲ್ಲೋಳ-ಂುಡೂರ ಸೇತುವೆ ಮೇಲೆ ಮೂರು ಅಡಿ ನೀರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ